LIVE NOW
Published : Sep 28, 2026, 07:06 AM ISTUpdated : Sep 28, 2026, 07:16 AM IST

India Latest News Live: ನಿಯಂತ್ರಣ ಮೀರಿ ವರ್ತನೆ; ಚಾಟ್‌ ಜಿಪಿಟಿಗೆ ತರಬೇತಿ ನಿಲ್ಲಿಸಿದ ಓಪನ್‌ಎಐ!

ಸಾರಾಂಶ

ಕೋಲ್ಕತಾ: 'ಭಗವದ್ಗೀತೆಯನ್ನು ಪಠಿಸಿ ಮತ್ತು ಹಂಚಿ. ರಾಜ್ಯದಲ್ಲಿ ಈಗ ಗಾಳಿ ಬದಲಾಗಿದೆ. ಸನ್ಯಾಸಿಗಳನ್ನು ಅವಮಾನಿಸುವವರನ್ನು ನಮ್ಮ ಸರ್ಕಾರ ಜೈಲಿಗೆ ಕಳುಹಿಸಲಿದೆ ' ಎಂದು ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಜನತೆಗೆ ಕರೆ ನೀಡಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, 'ತಿಲಕ, ಶಿಖೆ, ಧೋತಿ, ತುಳಸಿಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಯಾವುದೇ ಹಿಂಜರಿಕೆ ಇಲ್ಲದೆ ಹನುಮಾನ್ ಚಾಲೀಸಾ ವಿತರಿಸಿ. ಹರೇ ಕೃಷ್ಣ ಮಂತ್ರವನ್ನು ಜಪಿಸಿ, ಶಂಖವನ್ನು ಊದಿ. ಭಯಪಡುವಂಥ ದ್ದೇನೂ ಇಲ್ಲ. ಕಾಲ ಬದಲಾಗಿದೆ. ಗೋಮಾತೆ ಯನ್ನು ರಕ್ಷಿಸುವ ಸರ್ಕಾರ ಇಲ್ಲಿದೆ' ಎಂದರು.

Artificial Intelligence

07:16 AM (IST) Sep 28

ನಿಯಂತ್ರಣ ಮೀರಿ ವರ್ತನೆ; ಚಾಟ್‌ ಜಿಪಿಟಿಗೆ ತರಬೇತಿ ನಿಲ್ಲಿಸಿದ ಓಪನ್‌ಎಐ!

ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್‌ಗಳು ನಿಯಂತ್ರಣ ಮೀರಿ ವರ್ತಿಸುತ್ತಿರುವ ಕಾರಣ ಓಪನ್‌ಎಐ ಸಂಸ್ಥೆಯು ಅವುಗಳ ತರಬೇತಿಯನ್ನು ನಿಲ್ಲಿಸಿದೆ. ಅನುಮತಿ ಇಲ್ಲದಿದ್ದರೂ ಎಐ ಏಜೆಂಟ್ ಲೈವ್ ಇಂಟರ್‌ನೆಟ್‌ನಿಂದ ಮಾಹಿತಿ ಕಲೆಹಾಕಿದ್ದು ಮತ್ತು ಆಸ್ಟ್ರೇಲಿಯಾ ಸರ್ಕಾರದ ವೆಬ್‌ಸೈಟ್‌ಗೆ ನುಗ್ಗಿದ್ದು ಈ ಆತಂಕಕ್ಕೆ ಕಾರಣವಾಗಿದೆ.
Read Full Story

More Trending News