ವಾಷಿಂಗ್ಟನ್: ರಷ್ಯಾದಿಂದ ತೈಲ ಕೊಳ್ಳದಂತೆ ಅನ್ಯ ದೇಶಗಳ ಮೇಲೆ ಒತ್ತಡ ಹೇರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ, ತಕ್ಷಣದಿಂದಲೇ ಅಮೆರಿಕಕ್ಕೆ ರಷ್ಯಾದಿಂದ ತೈಲ ಪೂರೈಕೆಯಾಗಲಿದೆ ಎಂದು ಘೋಷಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಜತೆಗಿನ ದೂರವಾಣಿ ಸಂಭಾಷಣೆಯ ಬಳಿಕ ಮಾತನಾಡಿದ ಟ್ರಂಪ್, 'ರಷ್ಯಾದಿಂದ ಅಮೆರಿಕ ಮತ್ತು ಜಾಗತಿಕ ಮಾರು ಕಟ್ಟೆಗೆ ತಕ್ಷಣ 3 ಲಕ್ಷ ಟನ್ ಡೀಸೆಲ್ ಪೂರೈಸಲು ಒಪ್ಪಂದ ಆಗಿದೆ' ಎಂದು ಹೇಳಿದರು. ಈ ಮೊದಲು, 'ರಷ್ಯಾದಿಂದ ತೈಲ ಖರೀದಿಸಿದರೆ ಆ ಹಣ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಕೆಯಾಗುತ್ತದೆ' ಎಂಬ ಕಾರಣ ನೀಡಿ ಭಾರತ ಸೇರಿ ಅನೇಕ ರಾಷ್ಟ್ರಗಳಿಗೆ ಹೆಚ್ಚುವರಿ ತೆರಿಗೆ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು. ಆದರೀಗ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ಸಮೀಪಿಸುತ್ತಿರುವ ಕಾರಣ, ಆ ಅವಧಿಯಲ್ಲಿ ತೈಲ ಬೆಲೆ ಕಡಿಮೆ ಇರುವಂತೆ ನೋಡಿಕೊಳ್ಳಲು ಟ್ರಂಪ್ ರಷ್ಯಾ ತೈಲ ಆಮದಿಗೆ ಸಮ್ಮತಿಸಿದ್ದಾರೆ.

08:54 AM (IST) Oct 10
08:38 AM (IST) Oct 10
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದರಿಂದಾಗಿ ಮೆಟ್ರೋ, ರೈಲು, ಇಂಟರ್‌ನೆಟ್, ಶಾಲಾ-ಕಾಲೇಜುಗಳು ಹಾಗೂ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಎರಡನೇ ಶನಿವಾರದ ಕಾರಣ ಬ್ಯಾಂಕ್‌ಗಳು ಕೂಡ ಬಂದ್, ಡಿಜಿಟಲ್ ಸೇವೆಗಳು ಇರಲಿವೆ.
08:37 AM (IST) Oct 10
ಭಾರತದಲ್ಲಿ ಯಾವುದೇ ಕ್ಷೇತ್ರದಲ್ಲೂ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಮತ್ತು ಭದ್ರತಾ ಷರತ್ತುಗಳನ್ನು ಪೂರೈಸಿದರಷ್ಟೇ ಸ್ಯಾಟ್‌ಕಾಂ ಸೇವೆಗೆ ಅನುಮತಿ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಎಲಾನ್ ಮಸ್ಕ್‌ಗೆ ತಿರುಗೇಟು ನೀಡಿದ್ದಾರೆ.
08:14 AM (IST) Oct 10
ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಬಂದ್ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.