* ಗೋವಾ ಕಡಲತೀರದಲ್ಲಿ ಇಬ್ಬರು ಹೆಣ್ಮಕ್ಕಳ ರೇಪ್
* ಗೋವಾ ಅಧಿವೇಶನದಲ್ಲೂ ಸದ್ದು ಮಾಡಿದ ಪ್ರಕರಣ
* 14 ವರ್ಷದ ಹೆಣ್ಮಕ್ಕಳನ್ನು ಹೆತ್ತವರು ರಾತ್ರಿ ಹೊರಗೆ ಕಳಿಸೋದ್ಯಾಕೆ? ಎಂದು ಪ್ರಶ್ನಿಸಿದ ಸಿಎಂ ಸಾವಂತ್
ಪಣಜಿ(ಜು.29): ಗೋವಾ ಬೀಚ್ ಒಂದರ ಬಳಿ ಪೊಲೀಸರಂತೆ ಸಮವಸ್ತ್ರ ಧರಿಸಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಇಬ್ಬರು ಹೆಣ್ಮಕ್ಕಳ ಅತ್ಯಾಚಾರವೆಸಗಿರುವ ಘಟನೆ ಭಾನುವಾರ ನಡೆದಿದೆ.
ಕಡಲತೀರದಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಗೋವಾ ವಿಧಾನಸಭಾ ಕಲಾಪದಲ್ಲಿಯೂ ಸದ್ದು ಮಾಡಿದೆ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತಮ್ಮ ಮಕ್ಕಳು ತಡರಾತ್ರಿ ಬೀಚ್ ಬಳಿ ಯಾಕೆ ಹೋಗುತ್ತಾರೆ ಎಂದು ಪೋಷಕರು ಪ್ರಶ್ನಿಸಬೇಕು. ಮಕ್ಕಳನ್ನು ಕಡಲತೀರಕ್ಕೆ ಕಳುಹಿಸುವ ಮುನ್ನ ಈ ಬಗ್ಗೆ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಹೇಳಿದ್ದಾರೆ. ಆದರೀಗ ಗೋವಾ ಸಿಎಂ ಕೊಟ್ಟ ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ.
ನಪುಂಸಕ ಎಂದು ಕರೆದ ಡಾಕ್ಟರ್ ಅತ್ತಿಗೆ ಹತ್ಯೆ ಮಾಡಿದ ಮೈದುನ!
ಹೌದು “14 ವರ್ಷದ ಮಕ್ಕಳು ಇಡೀ ರಾತ್ರಿ ಬೀಚ್‌ನಲ್ಲಿದ್ದಾಗ, ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ತಮ್ಮ ಮಾತು ಆಲಿಸದ ಕಾರಣ, ನಾವು ಸರ್ಕಾರ ಮತ್ತು ಪೊಲೀಸರ ಮೇಲೆ ಜವಾಬ್ದಾರಿ ಹೊರಿಸಲು ಸಾಧ್ಯವಿಲ್ಲ” ಗೋವಾ ಸಿಎಂ ಸಾವಂತ್ ಬುಧವಾರ ಅಧಿವೇಶನದ ಚರ್ಚೆ ವೇಳೆ ಹೇಳಿದ್ದರು.
ಇನ್ನು ಗೋವಾ ಗೇಹ ಖಾತೆ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಸಾವಂತ್ ತಮ್ಮ ಮಕ್ಕಳ ಸುರಕ್ಷತೆ ಖಾತರಿಪಡಿಸುವುದು ಪೋಷಕರದ್ದು. ಅವರು ತಮ್ಮ ಮಕ್ಕಳನ್ನು, ವಿಶೇಷವಾಗಿ ಅಪ್ರಾಪ್ತರನ್ನು ರಾತ್ರಿ ಹೊರಗೆ ಬಿಡಬಾರದು ಎಂದೂ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ಕಾಂಗ್ರೆಸ್ ವಕ್ತಾರ ಆಲ್ಟೋನ್ ಡಿ ಕೋಸ್ಟಾ “ಕರಾವಳಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾತ್ರಿ ತಿರುಗಾಡುವಾಗ ನಾವು ಯಾಕೆ ಭಯಪಡಬೇಕು? ಅಪರಾಧಿಗಳು ಜೈಲಿನಲ್ಲಿರಬೇಕು ಮತ್ತು ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ತಿರುಗಾಡಬೇಕು, ”ಎಂದಿದ್ದಾರೆ.
ರಕ್ಕಸನಾದ ವರ: ಅತ್ತ ಮದುವೆ ಶಾಸ್ತ್ರ, ಇತ್ತ ಅತ್ತಿಗೆಯನ್ನೇ ಅತ್ಯಾಚಾರಗೈದ!
ಅತ್ತ ಗೋವಾದ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಈ ಬಗ್ಗೆ ಮಾತನಾಡುತ್ತಾ “ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡುತ್ತಿರುವುದು ಅಸಹ್ಯಕರ. ನಾಗರಿಕರ ಸುರಕ್ಷತೆಯು ಪೊಲೀಸ್ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅವರು ಅದನ್ನು ನಮಗೆ ಒದಗಿಸಲು ಸಾಧ್ಯವಾಗದಿದ್ದರೆ, ಸಿಎಂ ಗಾದಿಯಲ್ಲಿ ಮುಂದುವರೆಯುವ ಹಕ್ಕಿಲ್ಲ' ಎಂದು ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಗೋವಾ ಸಿಎಂ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಸಿಎಂ ತಮ್ಮ ಹೇಳಿಕೆ ಹಿಂಪಡೆಯುತ್ತಾರಾ ಎಂದು ಕಾಲವೇ ಉತ್ತರಿಸಲಿದೆ. !