Asianet Suvarna News

ರಕ್ಕಸನಾದ ವರ: ಅತ್ತ ಮದುವೆ ಶಾಸ್ತ್ರ, ಇತ್ತ ಅತ್ತಿಗೆಯನ್ನೇ ಅತ್ಯಾಚಾರಗೈದ!

* ಸಂಬಂಧಕ್ಕೆ ಬೆಲೆ ಕೊಡದ ಕಾಮುಕ

* ತನ್ನ ಮದುವೆ ದಿನವೇ ಅತ್ತಿಗೆಯನ್ನು ಅತ್ಯಾಚಾರಗೈದ

* ಆರೋಪಿಗೆ ಸಾತ್ ಕೊಟ್ಟ ಸಹೋದರಿ

Indore Groom Rapes His Sister In Law On his Wedding Day pod
Author
Bangalore, First Published Jul 21, 2021, 2:13 PM IST
  • Facebook
  • Twitter
  • Whatsapp

ಇಂದೋರ್(ಜು.21): ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದುವೆ ಸಮಾರಂಭದ ಮಧ್ಯೆ ವರನೊಬ್ಬ ತನ್ನ ಅತ್ತಿಗೆಯನ್ನೇ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ, ಪ್ರಮುಖ ಆರೋಪಿ ವರ ಮತ್ತು ಆತನ ಸಹೋದರಿಯನ್ನು ಮದುವೆಯ ಮರುದಿನವೇ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ತನ್ನ ಸ್ವಂತ ಮದುವೆಯಲ್ಲಿ ಅತ್ತಿಗೆಯನ್ನು ಅತ್ಯಾಚಾರ ಮಾಡಿದ

ವಾಸ್ತವವಾಗಿ, ಈ ಘಟನೆ ಸಾನ್ವೆರ್ ಪೊಲೀಸ್ ಠಾಣೆ ಪ್ರದೇಶದ ಜೆಟ್ಪುರ ಗ್ರಾಮದಲ್ಲಿ ನಡೆದಿದೆ. ಎಂಟು ದಿನಗಳ ಹಿಂದೆ, ಅನಿಲ್ ಎಂಬಾತನ ಮದುವೆ ಇತ್ತು. ಈ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಹಿಳೆಯೊಬ್ಬಳು ಧಾರ್‌ನಿಂದ ತನ್ನ ಗಂಡನೊಂದಿಗೆ ಹಳ್ಳಿಗೆ ಬಂದಿದ್ದಳು. ಆದರೆ ಈ ಸಂಬಂಧವನ್ನೆಲ್ಲಾ ಮರೆತ ವರ ತನ್ನ ಅತ್ತಿಗೆಯನ್ನು ತನ್ನದೇ ಮದುವೆ ಶಾಸ್ತ್ರದ ಮಧ್ಯೆ ಅತ್ಯಾಚಾರ ನಡೆಸಿದ್ದಾನೆ. ಇನ್ನು ಆರೋಪಿ ಸಂಬಂಧದಲ್ಲಿ ಅತ್ತೆಯ ಮಗ ಎಂದು ತಿಳಿದು ಬಂದಿದೆ.

ರಕ್ಕಸ ಮನಸ್ಥಿತಿಯ ವರನ ಕುಕೃತ್ಯ ಬಹಿರಂಗ

ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಮಹಿಳೆ ಆರೋಪಿ ಅನಿಲ್ ಮದುವೆಗೆ ಮೊದಲು ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ. ಆತನ ಸಹೋದರಿ ಕೂಡ ಕುಕೃತ್ಯ ನಡೆಸಲು ಆತನಿಗೆ ಬೆಂಬಲ ನೀಡಿದ್ದಾಳೆ. ಮದುವೆಯ ಬಳಿಕ ತಾನು ಧಾರ್‌ನಲ್ಲಿರುವ ಮನೆಗೆ ಬಂದಿದ್ದೆ, ಆದರೆ ಅಲ್ಲಿ ನನ್ನ ಆರೋಗ್ಯ ಹದಗೆಟ್ಟಿತು. ಆದರೆ ನಾನು ಧೈರ್ಯದಿಂದ ಗಂಡನಿಗೆ ಆತನ ತಮ್ಮನ ಕುಕೃತ್ಯವನ್ನು ವಿವರಿಸಿದೆ ಎಂದಿದ್ದಾರೆ.

ಇನ್ನು ಸೋಮವಾರದಂದು ಪತಿ ಮತ್ತು ಪತ್ನಿ ಇಬ್ಬರೂ ಆರೋಪಿ ಹಾಗೂ ಆತನ ಸಹೋದರಿ ವಿರುದ್ಧ ದೂರು ದಾಖಲಿಸಲು ಸೇವರ್ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಮಂಗಳವಾರ ಪೊಲೀಸರು ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದರ ನಂತರ ಇಬ್ಬರನ್ನೂ ಜೈಲಿಗಟ್ಟಿದ್ದಾರೆ. 

Follow Us:
Download App:
  • android
  • ios