ಕೋಲ್ಕತಾದಲ್ಲಿ ವೈದ್ಯ ಮೇಲೆ ಅತ್ಯಂತ ಕ್ರೂರ ಘಟನೆ ಖಂಡಿಸಿ ಇಂದು ದೇಶಾದ್ಯಂತ ಭಾರತದಲ್ಲಿ ಬ್ಲಾಕ್ ಡಿಪಿ ಆಚರಿಸಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಆರಂಭಿಸಿದ ಈ ಅಭಿಯಾನಕ್ಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಂದು ರಾತ್ರಿ 9 ಗಂಟೆ ವರೆಗೆ ಮಹಿಳೆಯರು ತಮ್ಮ ಡಿಪಿಗಳನ್ನು ಕಪ್ಪು ಮೊಂಬತ್ತಿಯಾಗಿ ಬದಲಿಸಿದ್ದಾರೆ.
ನವದೆಹಲಿ(ಆ.20) ಕೋಲ್ಕತಾ ವೈದ್ಯೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆ ವಿರುದ್ಧ ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟೆಗಳು ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣ ವಿಚಾರಣೆ ನಡೆಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದೀಗ ಪ್ರತಿಭಟನೆ ತೀವ್ರಗೊಂಡಿದೆ. ಇಂದು ದೇಶದಲ್ಲಿ ಮಹಿಳೆಯರು ವಿಶೇಷ ಅಭಿಯಾನ ಆರಂಭಿಸಿದ್ದಾರೆ. ತಮ್ಮ ವ್ಯಾಟ್ಸಾಪ್ ಡಿಪಿಗಳನ್ನು ಬದಲಿಸಿ ಮೌನ ಪ್ರತಿಭಟನೆ ಸಾರಿದ್ದಾರೆ. ಬ್ಲಾಕ್ ಡಿಪಿ ಡೇ ಅನ್ನೋ ಅಭಿಯಾನ ಆರಂಭಿಸಲಾಗಿದ್ದು, ಮಹಿಳೆಯರು ಕಪ್ಪು ಬಿಳುಪು ಮೊಂಬತಿ ಚಿತ್ರವನ್ನು ಡಿಪಿಯಾಗಿ ಬದಲಿಸಲು ಮನವಿ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆವರೆಗೆ ಈ ಅಭಿಯಾನ ನಡೆಯಲಿದೆ.
ಕೋಲ್ಕತಾ ಅತ್ಯಾಚಾರ ಪ್ರಕರಣದ ವಿರುದ್ದ ಪ್ರತಿಭಟಿಸುವಂತೆ ಎಲ್ಲರಲ್ಲೂ ವಿನಂತಿ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರು ಬ್ಲಾಕ್ ಡಿಪಿಯನ್ನು ಆಚರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಹುತೇಕ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಬ್ಲಾಕ್ ಡಿಪಿ ಡೇ ಕುರಿತು ಮಾತನಾಡಿರುವ ಗೃಹಣಿ ಮಿಥು ದೇ, ಇದು ಮೌನ ಪ್ರತಿಭಟನೆ. ನಮ್ಮ ಹೆಣ್ಣುಮಗುವಿಗೆ ಆಗಿರುವ ಅನ್ಯಾಯದ ವಿರುದ್ಧ ಮಹಿಳೆಯರ ಹೋರಾಟ. ಪ್ರತಿ ದಿನ ನಾವು ಹಲವು ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತೇವೆ. ಇದರ ಬದಲು ಇಂದು ಬ್ಲಾಕ್ ಡಿಪಿ ಡೇಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಹೆಣ್ಣುಮಕ್ಕಳ ರಕ್ಷಿಸಲು ಕೈ ಜೋಡಿಸೋಣ ಎಂದಿದ್ದಾರೆ.
undefined
ಕೋಲ್ಕತಾ ವೈದ್ಯೆ ಹತ್ಯೆ ಪ್ರತಿಭಟನೆ ಬೆನ್ನಲ್ಲೇ ನರ್ಸ್ ಎಳೆದೊಯ್ದು ಅತ್ಯಾಚಾರ ಎಸಗಿ ಕೊಲೆ!
ಇದೇ ವೇಳೆ ಹಲವು ಪಶ್ಚಿಮ ಬಂಗಾಳ ಮಹಿಳೆಯರು ಬ್ಲಾಕ್ ಡಿಪಿ ಡೇ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಂದು ಡಿಪಿಯಿಂದ ಏನಾಗಲಿದೆ ಅನ್ನೋ ಭಾವನೆ ಕೆಲವರಲ್ಲಿ ಇರಬಹುದು. ಆದರೆ ಈ ತಪ್ಪು ಕಲ್ಪನೆ ಬಿಟ್ಟು ಬಿಡಿ, ಇದೊಂದು ಜಾಗೃತಿಯಾಗಬೇಕು. ಮಹಿಳೆಯರ ರಕ್ಷಣೆಗೆ ಎಲ್ಲರ ಕರ್ತವ್ಯ. ಸರ್ಕಾರಕ್ಕೆ ಬಿಸಿ ಮುಟ್ಟಬೇಕು. ಕಠಿಣ ಕಾನೂನುಗಳು ರೂಪಿತಗೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರ ಹಾಗೂ ಜಾಗೃತಿ ಮೂಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತಾ ಆರ್‌ಜಿ ಕಾರ್ ವೈದ್ಯಕೀಯ ಅಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಮುಚ್ಚಿಹಾಕಲು ಎಲ್ಲಾ ಪ್ರಯತ್ನಗಳು ನಡೆದಿತ್ತು ಅನ್ನೋ ಸ್ಫೋಟಕ ಮಾಹಿತಿಯೂ ಬಹಿರಂಗವಾಗಿದೆ. ಸಾಕ್ಷಿ ನಾಶ ಮಾಡಲು ಆಸ್ಪತ್ರೆ ಮೇಲೆ ಪುಂಡರು ದಾಳಿ ಮಾಡಿ ದಾಂಧಲೆ ನಡೆಸಲಾಗಿತ್ತು. ಈ ಎಲ್ಲಾ ಘಟನೆಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ವೈದ್ಯೆಯ ಹತ್ಯೆ ಖಂಡಿಸಿ ಪ್ರತಿಭಟಿಸ್ತಿದ್ದ ಮಹಿಳೆಯರ ಬಗ್ಗೆ ಟಿಎಂಸಿ ಸಚಿವನ ಅವಹೇಳನಕಾರಿ ಮಾತು