ಕೆಲಸ ಹಾಗೂ ಜೀವನದ ಸಮತೋಲನದ ಕುರಿತು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಡಿವೈ ಚಂದ್ರಚೂಡ್ ಅವರು, ಕೆಲ ದಿನಗಳ ಹಿಂದೆ ವಿಚಾರಣೆಯ ವೇಳೆ ನಾನು ಕುಳಿತಿದ್ದ ರೀತಿ ಬದಲಾವಣೆ ಮಾಡಿದ್ದಕ್ಕೆ ಟ್ರೋಲ್ ಹಾಗೂ ಕೆಟ್ಟ ನಿಂದನೆಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.
ಬೆಂಗಳೂರು (ಮಾ.24): ವಿಚಾರಣೆಯ ವೇಳೆ ಸಮಸ್ಯೆ ಆಗುತ್ತಿದೆ ಎನ್ನುವ ಕಾರಣಕ್ಕೆ ನಾನು ಕುಳಿತಿದ್ದ ಸ್ಥಾನವನ್ನು ಸ್ವಲ್ಪವೇ ಸ್ವಲ್ಪ ಚೇಂಜ್ ಮಾಡಿದ್ದಕ್ಕೆ ಆನ್‌ಲೈನ್‌ನಲ್ಲಿ ಇತ್ತೀಚೆಗೆ ತಾವು ಟ್ರೋಲ್ ಹಾಗೂ ಕೆಟ್ಟ ನಿಂದನೆಗೆ ಎದುರಾಗಿದ್ದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನ್ಯಾಯಾಂಗ ಅಧಿಕಾರಿಗಳ 21ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒತ್ತಡ ನಿರ್ವಹಣೆ ಮತ್ತು ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ನೀಡಬೇಕು ಎಂದು ಹೇಳಿದರು. ಎರಡು ದಿನಗಳ ಸಮ್ಮೇಳನದ ವಿಷಯಗಳಲ್ಲಿ ಒಂದಾದ ಕೆಲಸ-ಜೀವನ ಸಮತೋಲನ ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದ ಅವರು, ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯವು ನ್ಯಾಯಾಧೀಶರ ಜೀವನದಲ್ಲಿ ವಿಶೇಷವಾಗಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಮುಖವಾಗಿದೆ ಎಂದು ಹೇಳಿದರು.
ಈ ವೇಳೆ ತೀರಾ ಇತ್ತೀಚೆಗೆ ಆದ ಘಟನೆಯನ್ನು ಅವರು ನೆನಪಿಸಿಕೊಂಡರು. ಸಾಂವಿಧಾನಿಕ ಪೀಠದಲ್ಲಿ ಪ್ರಮುಖ ಪ್ರಕರಣವೊಂದರ ವಿಚಾರಣೆ ಲೈವ್ ಸ್ಟ್ರೀಮ್ ಆಗುತ್ತಿತ್ತು. ಈ ವೇಳೆ ಆದ ಘಟನೆಯನ್ನು ಅವರು ತಿಳಿಸಿದ್ದಾರೆ. 'ಬಹುಶಃ 4 ಅಥವಾ 5 ದಿನಗಳ ಹಿಂದೆ ಒಂದು ವಿಚಾರಣೆ ನಡೆಯುತ್ತಿತ್ತು. ಈ ಹಂತದಲ್ಲಿ ನ್ಯಾಯಪೀಠದಲ್ಲಿ ಕುಳಿತಿದ್ದ ನನಗೆ ಬೆನ್ನು ನೋವಿ ಕಾಣಿಸಿತು. ಈ ಹಂತದಲ್ಲಿ ನನ್ನ ಕುರ್ಚಿಯ ಮೇಲೆ ಕೈಯನ್ನು ಆಧಾರವಾಗಿಟ್ಟುಕೊಂಡು, ನನ್ನ ಸ್ಥಾನವನ್ನು ಸ್ವಲ್ಪವೇ ಸ್ವಲ್ಪ ಬದಲಾವಣೆ ಮಾಡಿದ್ದೆ' ಎಂದು ಚಂದ್ರಚೂಡ್ ಹೇಳಿದ್ದಾರೆ. ಆದರೆ, ಅದಾದ ಬಳಿಕ ಇಡೇ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದವು. ಕೋರ್ಟ್‌ನಲ್ಲಿ ಪ್ರಮುಖ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಅಹಂಕಾರದಿಂದ ಎದ್ದು ಹೋಗಿದ್ದಾರೆ ಎನ್ನುವ ರೀತಿಯ ಕಾಮೆಂಟ್‌ಗಳು ಬಂದಿದ್ದವು ಎಂದಿದ್ದಾರೆ.
ಆ ವಿಡಿಯೋದಲ್ಲಿ ಹೇಳದೇ ಇರುವ ವಿಚಾರ ಏನೆಂದರೆ, ನಾನು ಕುಳಿತಿದ್ದ ಸ್ಥಾನದಲ್ಲಿ ಕೊಂಚ ಬದಲಾವಣೆ ಆಗಿದ್ದಷ್ಟೇ. 24 ವರ್ಷಗಳ ಕಾಲದ ತೀರ್ಪು ಜೀಡುವ ಜವಾಬ್ದಾರಿ ಶ್ರಮದಾಯಕವಾಗಿರಬಹುದು. ಆದರೆ, ಅದನ್ನು ಮಾಡಿದ್ದೇನೆ. ನಾನು ಕೋರ್ಟ್‌ಅನ್ನು ಅಂದು ತೊರೆದಿರಲಿಲ್ಲ. ನಾನು ಕುಳಿತಿದ್ದ ಸ್ಥಾನವನ್ನಷ್ಟೇ ಬದಲಾಯಿಸಿದ್ದೆ. ಹಾಗಿದ್ದರೂ ನನ್ನ ವಿರುದ್ಧ ಟ್ರೋಲ್‌ಗಳು ಕೆಟ್ಟ ನಿಂದನೆಗಳು ಬಂದವು. ನಿಂದನೆಯ ಚೂರಿಗಳು ಹೊರಬಂದಿದ್ದವು. ಆದರೆ, ನಮ್ಮ ಭುಜಗಳು ಸಾಕಷ್ಟು ವಿಶಾಲವಾಗಿದೆ ಮತ್ತು ನಾವು ಮಾಡುವ ಕೆಲಸದಲ್ಲಿ ಸಾಮಾನ್ಯ ನಾಗರಿಕರು ನಮ್ಮಲ್ಲಿರುವ ಅಂತಿಮ ವಿಶ್ವಾಸ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಸಿಜೆಐ ಚಂದ್ರಚೂಡ್ ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಯುವ, ಮಧ್ಯಮ ಮಟ್ಟದ ಮತ್ತು ಹಿರಿಯ ಹಂತದ ನ್ಯಾಯಾಧೀಶರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ನಿರಂತರವಾಗಿ ಕೇಳುತ್ತಿದ್ದರು ಎನ್ನುವುದನ್ನೂ ನೆನಪಿಸಿಕೊಂಡರು. 'ಕೋರ್ಟ್‌ನಲ್ಲಿ ವಿಚಾರಣೆ ಮಾಡುವಾಗ ಕೆಲವರು ತಮ್ಮ ಲೈನ್ ದಾಟುತ್ತಾರೆ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನಾನೂ ಕೂಡ ಹಲವು ಬಾರಿ ನಮ್ಮ ವಕೀಲರು ಹಾಗೂ ಪ್ರತಿವಾದಿಗಳು ತಮ್ಮ ಗೆರೆ ದಾಟಿ ಮಾತನಾಡುವುದನ್ನು ನೋಡಿದ್ದೇವೆ. ಆದರೆ, ಈ ಹಂತದಲ್ಲಿ ನಾವು ನ್ಯಾಯಂಗ ನಿಂದನೆಯ ಅಸ್ತ್ರವನ್ನು ಎಂದಿಗೂ ಬಳಸಲು ಮುಂದಾಗಬಾರದು. ಈ ಹಂತದಲ್ಲಿ ಅವರು ಈ ಗೆರೆಯನ್ನು ದಾಟಿದ್ದೇಕೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಚಂದ್ರಚೂಡ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಬಾಣಸಿಗನ ಪುತ್ರಿಗೆ ಯುಎಸ್ ಸ್ಕಾಲರ್‌ಷಿಪ್, ಸಿಜೆಐಯಿಂದ ಸನ್ಮಾನ!
ಇದೇ ವೇಲೆ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ಸಿಜೆಐ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿ ಕೋರ್ಟ್‌ನ ಅಂಕಿ ಅಂಶಗಳನ್ನು ನೋಡಿ ನಾನು ಅಚ್ಚರಿಪಟ್ಟಿದ್ದೇವೆ. ಇಲ್ಲಿ ಜಿಲ್ಲಾ ಕೋರ್ಟ್‌ನಲ್ಲಿ 2023ರ ಜನವರಿ 1 ರಿಂದ 2024ರ ಮಾರ್ಚ್ 23ರವರೆಗೆ 21.25 ಲಕ್ಷ ಕೇಸ್‌ಗಳು ಪೆಂಡಿಗ್ ಇದ್ದವು. ಇವುಗಳಲ್ಲಿ 20.62 ಲಕ್ಷ ಕೇಸ್ ವಿಲೇವಾರಿಯಾಗಿದೆ. ಕೆಲವೊಂದು ಸಾವಿರ ಕೇಸ್‌ಗಳಿಂದ ಮಾತ್ರವೇ ನಾವು ಹಿಂದಿದ್ದೇವೆ. ಇದು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದಿದ್ದಾರೆ.
2019-2024ರ ಅವಧಿಯಲ್ಲಿ 22,217 ಚುನಾವಣಾ ಬಾಂಡ್ ಖರೀದಿ, ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮಾಹಿತಿ!