ನವ ಭಾರತಕ್ಕೆ ಹೊಸ ಕಾನೂನು; ಇನ್ಮುಂದೆ ಗುಂಪು ಹತ್ಯೆಗೆ ಗಲ್ಲು ಶಿಕ್ಷೆ: ಅಮಿತ್‌ ಶಾ ಘೋಷಣೆ

By BK Ashwin  |  First Published Aug 11, 2023, 7:44 PM IST

ಹೊಸ ಕಾನೂನು ಕೊಲೆಯ ವ್ಯಾಖ್ಯಾನದೊಳಗೆ ಗುಂಪು ಹತ್ಯೆಯ ವಿರುದ್ಧದ ನಿಬಂಧನೆಯನ್ನು ಸೇರಿಸುತ್ತದೆ. ಹತ್ಯೆ ಮಾಡುವವರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾರೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ ಎಂದು ಹೊಸ ನಿಬಂಧನೆ ಹೇಳುತ್ತದೆ.


ನವದೆಹಲಿ (ಆಗಸ್ಟ್‌ 11, 2023): ದೇಶದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಗುಂಪು ಹತ್ಯೆ ಪ್ರಕರಣಗಳು ಹೆಚ್ಚಾಗ್ತಿದೆ. ಈ ಹಿನ್ನೆಲೆ, ಗುಂಪು ಹತ್ಯೆ ಪ್ರಕರಣಗಳಿಗೆ ಮರಣದಂಡನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ. ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಸೇರಿ ಕ್ರಿಮಿನಲ್ ಕಾನೂನುಗಳ ಪ್ರಮುಖ ಪರಿಷ್ಕರಣೆಯನ್ನು ಅಮಿತ್‌ ಶಾ ಘೋಷಿಸಿದ್ದು, ಈ ಪೈಕಿ, ಗುಂಪು ಹತ್ಯೆಗೆ ಶಿಕ್ಷೆಯು ಕನಿಷ್ಠ ಏಳು ವರ್ಷಗಳ ಜೈಲಿನಿಂದ ಮರಣದಂಡನೆಯವರೆಗೆ ಇರುತ್ತದೆ ಎಂದು ತಿಳಿದುಬಂದಿದೆ.

ಹೊಸ ಕಾನೂನು ಕೊಲೆಯ ವ್ಯಾಖ್ಯಾನದೊಳಗೆ ಗುಂಪು ಹತ್ಯೆಯ ವಿರುದ್ಧದ ನಿಬಂಧನೆಯನ್ನು ಸೇರಿಸುತ್ತದೆ ಎಂದು ತಿಳಿದುಬಂದಿದೆ. "ಹತ್ಯೆ ಮಾಡುವವರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾರೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ" ಎಂದು ಹೊಸ ನಿಬಂಧನೆ ಹೇಳುತ್ತದೆ. "ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ವೈಯಕ್ತಿಕ ನಂಬಿಕೆ ಅಥವಾ ಯಾವುದೇ ಇತರ ಆಧಾರದ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಒಂದು ಗುಂಪು ಹತ್ಯೆಯನ್ನು ನಡೆಸಿದಾಗ ಅಂತಹ ಗುಂಪಿನ ಪ್ರತಿಯೊಬ್ಬ ಸದಸ್ಯನಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಅಥವಾ 7 ವರ್ಷಗಳಿಗಿಂತಲೂ ಕಡಿಮೆಯಿಲ್ಲದ ಅವಧಿಯ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗಬಹುದು" ಎಂದು ಈ ನಿಬಂಧನೆ ಹೇಳುತ್ತದೆ. 

Tap to resize

Latest Videos

ಇದನ್ನು ಓದಿ: ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್‌ ಶಾ ಮಹತ್ವದ ಘೋಷಣೆ

ಕೇಂದ್ರ ಗೃಹ ಸಚಿವರು ಇಂದು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ರದ್ದುಪಡಿಸಲು ಮತ್ತು ಬದಲಿಸಲು ಮುಂದಾದರು. ಅಲ್ಲದೆ, ಹೊಸ ಮಸೂದೆಗಳೊಂದಿಗೆ, ಸರ್ಕಾರವು "ನ್ಯಾಯವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ, ಶಿಕ್ಷೆಯಲ್ಲ" ಎಂದೂ ಅಮಿತ್ ಶಾ ಹೇಳಿದರು.

"ನಾನು ಇಂದು ಮಂಡಿಸುತ್ತಿರುವ ಮೂರು ಮಸೂದೆಗಳು ಅಪರಾಧ ನ್ಯಾಯ ವ್ಯವಸ್ಥೆಯ ತತ್ವ ಕಾನೂನನ್ನು ಒಳಗೊಂಡಿವೆ. ಒಂದು 1860 ರಲ್ಲಿ ರೂಪುಗೊಂಡ ಭಾರತೀಯ ದಂಡ ಸಂಹಿತೆ, ಎರಡನೆಯದು ಕ್ರಿಮಿನಲ್ ಪ್ರೊಸೀಜರ್ ಕೋಡ್, ಇದು 1898 ರಲ್ಲಿ ರೂಪುಗೊಂಡಿತು ಮತ್ತು ಮೂರನೆಯದು 1872ರಲ್ಲಿ ರೂಪುಗೊಂಡ ಭಾರತೀಯ ಎವಿಡೆನ್ಸ್ ಕಾಯ್ದೆ, ಬ್ರಿಟಿಷರು ತಂದ ಈ ಕಾನೂನುಗಳನ್ನು ಇಂದೇ ಕೊನೆಗೊಳಿಸುತ್ತೇವೆ’’ ಎಂದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ 6 ತಿಂಗಳ ಕಾಲ ಅಣ್ಣಾಮಲೈ ಪಾದಯಾತ್ರೆ; ರಾಮೇಶ್ವರಂನಲ್ಲಿ ಅಮಿತ್‌ ಶಾ ಚಾಲನೆ

ದೇಶದ್ರೋಹ ಕಾನೂನು ರದ್ದು!
ದೇಶದ್ರೋಹ ಕಾನೂನನ್ನು ಹಿಂಪಡೆಯಲಾಗಿದೆ ಎಂದು ಗೃಹ ಸಚಿವರು ಘೋಷಿಸಿದರು. ಪ್ರಸ್ತಾವಿತ ಕಾನೂನು "ದೇಶದ್ರೋಹ" ಪದವನ್ನು ಹೊಂದಿಲ್ಲ. ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಗಾಗಿ ಇದನ್ನು ಸೆಕ್ಷನ್ 150 ರಿಂದ ಬದಲಾಯಿಸಲಾಗಿದೆ ಎಂದೂ ಅಮಿತ್‌ ಶಾ ಹೇಳಿದರು. ಈ ಮೂಲಕ ದೇಶದ್ರೋಹದ ಶಿಕ್ಷೆಯಲ್ಲೂ ಅಮಿತ್ ಶಾ ಬದಲಾವಣೆಗಳನ್ನು ಘೋಷಿಸಿದರು. 

ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ, ದೇಶದ್ರೋಹ ಕಾಯ್ದೆಯು ಜೀವಾವಧಿ ಶಿಕ್ಷೆಯೊಂದಿಗೆ ಅಥವಾ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯೊಂದಿಗೆ ದಂಡನೀಯವಾಗಿದೆ. ಹೊಸ ಮಸೂದೆಯ ಅಡಿಯಲ್ಲಿರುವ ನಿಬಂಧನೆಗಳು ಅದನ್ನು ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆಗೆ ಬದಲಾಯಿಸಲು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಅಮಿತ್ ಶಾ ಸಮ್ಮುಖದಲ್ಲಿ 2,400 ಕೋಟಿ ರೂ. ಮೌಲ್ಯದ ಡ್ರಗ್ಸ್‌ ನಾಶ: 1.44 ಲಕ್ಷ ಕೆಜಿ ಮಾದಕ ವಸ್ತುಗಳು ಭಸ್ಮ

click me!