ದೇಶ ಇನ್ನೇನು ಕೆಲವೇ ದಿನಗಳಲ್ಲಿ ತನ್ನ 75ನೇ ವರ್ಷದ ಸ್ವಾತಂತ್ರ್ಯೋವವನ್ನು ದೇಶ ಆಚರಿಸಿಕೊಳ್ಳಲಿದೆ. ಈ 75 ವರ್ಷಗಳಲ್ಲಿ ದೇಶದಲಲ್ಲಿ ಏನು ಬದಲಾಗಿದೆಯೋ ಗೊತ್ತಿಲ್ಲ. ಆದರೆ, ದಿನಬಳಕೆಯ ವಸ್ತುಗಳು ಃಅಗೂ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಮಾತ್ರ ದೊಡ್ಡ ಮಟ್ಟದ ಏರಿಕೆಯಾಗಿದೆ. ಇದರ ನಡುವೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ಪ್ರಮುಖ ವಸ್ತುಗಳಿಗೆ ಇದ್ದ ಬೆಲೆಗಳು ಹಾಗೂ ಈಗಿನ ಬೆಲೆಗಳನ್ನು ಹಿಂದಿ ವೆಬ್‌ಸೈಟ್ ಆಜ್ ತಕ್ ಹೋಲಿಕೆ ಮಾಡಿದೆ.
ನವದೆಹಲಿ (ಆ.12): ಇನ್ನೇನು ಕೆಲವೇ ದಿನಗಳಲ್ಲಿ ದೇಶ ತನ್ನ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಆಚರಣೆ ಮಾಡಲಿದೆ. ಈ 75 ವರ್ಷಗಳಲ್ಲಿ ಏನು ಬದಲಾಗಿದೆಯೋ ಗೊತ್ತಿಲ್ಲ. ಆದರೆ, ಹಣದುಬ್ಬರ ಮಾತ್ರ ರಾಕೆಟ್ ವೇಗದಲ್ಲಿ ಏರಿಕೆಯಾಗಿದೆ. ಹಣದುಬ್ಬರ ನಿಯಂತ್ರಣ ಮಾಡುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಎಲ್ಲಾ ಪಕ್ಷಗಳು ಈ 75 ವರ್ಷಗಳಲ್ಲಿ ಮಾಡಿದ್ದು ಹಣದುಬ್ಬರದ ಏರಿಕೆ ಮಾತ್ರ. ದೇಶ 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ವೇಳೆ, 1947ರಲ್ಲಿ ಅಗತ್ಯ ವಸ್ತುಗಳ ಬೆಲೆ ಎಷ್ಟಿದ್ದವು ಹಾಗೂ ಈಗ ಅವುಗಳ ಬೆಲೆ ಎಷ್ಟಿದೆ ಎನ್ನುವುದರ ನೋಟ. ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ದೇಶಾದ್ಯಂತ ‘ಆಜಾದಿ ಕೆ ಅಮೃತ್ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ. ಸರ್ಕಾರ ಪ್ರತಿ ಮನೆಗೂ ತ್ರಿವರ್ಣ ಪ್ರಚಾರ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಮೂಲಕ 20 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಗುರಿ ಹೊಂದಲಾಗಿದೆ. ಕಳೆದ 75 ವರ್ಷಗಳಲ್ಲಿ, ದೇಶವು ಪ್ರಗತಿಯ ಹೊಸ ಕಥೆಯನ್ನು ಸೃಷ್ಟಿಸಿದೆ. ಈಗ 5 ಟ್ರಿಲಿಯನ್ ಭಾರತೀಯ ಆರ್ಥಿಕತೆಯ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಎಲ್ಲಾ ಅಡೆತಡೆಗಳ ನಡುವೆಯೂ ಭಾರತವು ತ್ವರಿತ ಆರ್ಥಿಕ ಅಭಿವೃದ್ಧಿಯ ಹಾದಿಯಲ್ಲಿದೆ. ಭಾರತದ ಆರ್ಥಿಕತೆಯು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾಕ್ಕಿಂತ ವೇಗವಾಗಿ ಬೆಳೆಯುವ ಲಕ್ಷಣಗಳನ್ನು ತೋರಿಸುತ್ತಿದೆ.
ಬ್ಲೂಮ್‌ಬರ್ಗ್ ಮತ್ತು ಎಸ್‌ಬಿಐ ಸಂಶೋಧನೆಯ ವರದಿಯಲ್ಲಿ, ಭಾರತವು ಆರ್ಥಿಕ ಹಿಂಜರಿತದ ಅಪಾಯದಿಂದ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಇನ್ನು ಭಾರತದ ಆರ್ಥಿಕತೆಗೆ ಭದ್ರ ಬುನಾದಿ ಇದೆ. ಮೋರ್ಗಾನ್ ಸ್ಟಾನ್ಲಿಯ ಇತ್ತೀಚಿನ ವರದಿಯು 2022-23ರಲ್ಲಿ ಭಾರತವು ಏಷ್ಯಾದ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮಬಹುದು ಎಂದು ಅಂದಾಜಿಸಿದೆ.
ಸಾಕಷ್ಟು ಹಣದುಬ್ಬರ: ಸ್ವಾತಂತ್ರೋತ್ಸವದ ಸಂಭ್ರಮದ ನಡುವೆಯೇ ನಿಮಗೆ ಕೆಲವೊಂದು ವಿಚಾರಗಳು ಖಂಡಿತವಾಗಿ ಅಚ್ಚರಿಯಾಗುತ್ತದೆ. ಅಂಥದ್ದೊಂದು ಕೆಲವು ಅಂಕಿ ಅಂಶಗಳು ಇಲ್ಲಿವೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ಮನೆಯಲ್ಲಿದ್ದ ಒಂದು ಅಥವಾ ಎರಡು ಪೈಸೆ ಕೂಡ ಬಹಳ ಮುಖ್ಯವಾಗಿತ್ತು. ಒಂದು ರೂಪಾಯಿ ನಿಮ್ಮ ಕೈಲಿದ್ದರೆ, ಒಂದು ವಾರ ಹೊಟ್ಟೆ ತುಂಬಾ ಊಟ ಖಂಡಿತವಾಗಿ ಮಾಡಬಹುದಿತ್ತು. 1947 ರಿಂದ ಇಂದಿನವರೆಗೆ ಕೆಲವು ವಿಷಯಗಳನ್ನು ಹೋಲಿಕೆ ಮಾಡಲಾಗಿದೆ. ಇಲ್ಲಿ ವಿಶೇಷವಾಗಿ ಅಕ್ಕಿ, ಸಕ್ಕರೆ, ಆಲೂಗಡ್ಡೆ, ಹಾಲು, ಚಿನ್ನ ಮತ್ತು ಪೆಟ್ರೋಲ್ ಬೆಲೆಯನ್ನು ತಿಳಿಸಲಾಗಿದೆ.
ಇದೇ ಮೊದಲ ಬಾರಿಗೆ ಕೆಂಪು ಕೋಟೆ ಮೇಲೆ ಬುಲೆಟ್ ಪ್ರೂಫ್ ಬಾಕ್ಸ್‌ನಲ್ಲಿ ನಿಂತು ಮೋದಿ ಭಾಷಣ?
ಇಂದು 10 ಗ್ರಾಂ ಚಿನ್ನದ ಬೆಲೆ ಸುಮಾರು 52000 ರೂಪಾಯಿ ಇದೆ. ಆದರೆ 1947 ರಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ 88.62 ರೂಪಾಯಿ ಇತ್ತು. ಸದ್ಯ ಪೆಟ್ರೋಲ್ ಬೆಲೆ ಏರಿಕೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಲೀಟರ್‌ಗೆ 96.72 ರೂ.ಗಳಾಗಿದ್ದರೆ, ಬೆಂಗಳೂರಿನಲ್ಲಿ ಅಂದಾಜು ಇದರ ಬೆಲೆ 102 ರೂಪಾಯಿ ಇದೆ. 1947 ರಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕೇವಲ 27 ಪೈಸೆ ಇತ್ತು ಎಂದರೆ ನಿಮಗೆ ಅಚ್ಚರಿಯಾಗಬಹುದು.
ಹರ್ ಘರ್ ತಿರಂಗಾ: 7 ತಿಂಗಳು ಮೊದಲೇ ಐಡಿಯಾ ಕೊಟ್ಟಿದ್ದು ಹುಬ್ಬಳ್ಳಿಯ ದೀಪಕ್..!
ಪೂರ್ಣ ಸತ್ವವುಳ್ಳ ಒಂದು ಲೀಟರ್ ಹಾಲಿಗೆ 1947ರಲ್ಲಿ 12 ಪೈಸೆ ಇದ್ದರೆ, ಇಂದು ಪೂರ್ಣ ಸತ್ವವುಳ್ಳ ಒಂದು ಲೀಟರ್ ಹಾಲಿಗೆ ಅಂದಾಜು 60 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 1947ರಲ್ಲಿ ದೆಹಲಿಯಿಂದ ಮುಬೈಗೆ ಹೋಗಬೇಕಾದಲ್ಲಿ ವಿಮಾನದ ದರ ಬೆಂಗಳೂರು-ಮೈಸೂರು ಬಸ್ ದರಕ್ಕಿಂತ ಕಡಿಮೆ ಇತ್ತು. ಕೈಯಲ್ಲಿ 140 ರೂಪಾಯಿ ಇದ್ದರೆ, ದೆಹಲಿ ಮತ್ತು ಮುಂಬೈ ನಡುವೆ ಸಂಚಾರ ಮಾಡಬಹುದಿತ್ತು. ಈಗ ಇದೇ ಅಂತರವನ್ನು ವಿಮಾನದಲ್ಲಿ ಪ್ರಯಾಣಿಸಲು ಕನಿಷ್ಠ 7 ಸಾವಿರ ರೂಪಾಯಿ ಖರ್ಚು ಮಾಡಬೇಕಿದೆ.
ವಸ್ತುಗಳು | 1947ರಲ್ಲಿ | 2022ರಲ್ಲಿ |
ಅಕ್ಕಿ | ಕೆಜಿಗೆ 12 ಪೈಸೆ | ಕೆಜಿಗೆ 40 ರೂಪಾಯಿ |
ಸಕ್ಕರೆ | ಕೆಜಿಗೆ 40 ಪೈಸೆ | ಕೆಜಿಗೆ 42 ರೂಪಾಯಿ |
ಬಟಾಟೆ | ಕೆಜಿಗೆ 25 ಪೈಸೆ | ಕೆಜಿಗೆ 25 ರೂಪಾಯಿ |
ಹಾಲು | ಲೀಟರ್‌ಗೆ 12 ಪೈಸೆ | ಲೀಟರ್‌ಗೆ 60 ರೂಪಾಯಿ |
ಪೆಟ್ರೋಲ್ | ಲೀಟರ್‌ಗೆ 25 ಪೈಸೆ | ಲೀಟರ್‌ಗೆ 25 ಪೈಸೆ |
ಸೈಕಲ್ | 20 ರೂಪಾಯಿ | 8 ಸಾವಿರ ರೂಪಾಯಿ |
ವಿಮಾನದ ದರ | 140 ರೂಪಾಯಿ | ಅಂದಾಜು 7 ಸಾವಿರ |
10 ಗ್ರಾಂ ಚಿನ್ನ | 88.62 ರೂಪಾಯಿ | 52 ಸಾವಿರ |