ಸತತ 40 ದಿನಗಳ ಕಾಲ ಅಯೋಧ್ಯ ಪ್ರಕರಣದ ವಿಚಾರಣೆ ನಡೆದಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ನ.17 ರಂದು ಸಿಜೆ ರಂಜನ್ ಗೊಗೋಯ್ ನಿವೃತ್ತರಾಗುತ್ತಿದ್ದು, ಅದಕ್ಕಿಂತ ಮುಂಚೆ ತೀರ್ಪು ಪ್ರಕಟವಾಗಲಿದೆ.
ಅಯೋಧ್ಯೆ (ನ. 05): ಸುದೀರ್ಘ ಕಾಲದಿಂದ ಕಗ್ಗಂಟಾಗಿರುವ ಅಯೋಧ್ಯೆ ಕುರಿತ ತೀರ್ಪು ಪ್ರಕಟಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಶ್ರೀರಾಮ ಚಂದ್ರನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಸುಪ್ರೀಂಕೋರ್ಟಿನ ತೀರ್ಪು ಪ್ರಕಟಣೆಯಾದ ಬಳಿಕ ಯಾವುದೇ ರೀತಿಯ ಸಂಭ್ರಮಾಚರಣೆ ಅಥವಾ ಶೋಕಾಚರಣೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅ.12ರಂದು ಜಾರಿಯಾಗಿರುವ ಪ್ರತಿಬಂಧಕಾಜ್ಞೆಯನ್ನು ಡಿ.28ರವರೆಗೂ ವಿಸ್ತರಿಸಲಾಗಿದೆ.
ಸಾಮಾಜಿಕ ಜಾಲತಾಣ ತಾಣ ಹಾಗೂ ಟಿವಿ ಮಾಧ್ಯಮಗಳಿಗೆ ಮೂಗುದಾರ ಹಾಕಲಾಗಿದ್ದು, ಎರಡು ತಿಂಗಳ ಕಾಲ ಪ್ರಕರಣ ಸಂಬಂಧ ಸಾಮಾಜಿಕ ಸ್ವಾಸ್ಥವನ್ನು ಕದಡುವ ಯಾವುದೇ ಸಂವಾದ ಹಾಗೂ ಚರ್ಚೆಗಳನ್ನು ಮಾಡಕೂಡದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅಲ್ಲದೇ ಅಗತ್ಯ ಬಿದ್ದರೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನೂ ಜಾರಿಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಯೋಧ್ಯೆ ತೀರ್ಪು : ವಾಟ್ಸಾಪ್, ಟ್ವಿಟರ್ ಮೇಲೆ ಸರ್ಕಾರದ ನಿಯಂತ್ರಣ
ಪ್ರಚೋದನಕಾರಿ ಹೇಳಿಕೆ ಬೇಡ: ವಕ್ತಾರರಿಗೆ ಬಿಜೆಪಿ
ನವದೆಹಲಿ: ಕೆಲದಿನಗಳಲ್ಲಿ ಹೊರ ಬರುವ ರಾಮ ಮಂದಿರ ತೀರ್ಪಿನ ಬಗ್ಗೆ ಯಾರೂ ಭಾವನಾತ್ಮಕ ಹಾಗೂ ಆಕ್ಷೇಪಾರ್ಹ ಹೇಳಿದೆ ನೀಡಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೂಚಿಸಿದ ಬೆನ್ನಲ್ಲೇ, ಬಿಜೆಪಿ ಕೂಡ ಇಂಥಹದ್ದೇ ಸೂಚನೆಯನ್ನು ತನ್ನ ಕಾರ್ಯಕರ್ತರು ಹಾಗೂ ವಕ್ತಾರರಿಗೆ ನೀಡಿದೆ.
ದೆಹಲಿಯಲ್ಲಿ ನಡೆದ ವಕ್ತಾರರ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಸಭೆಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ರಾಮ ಮಂದಿರ ವಿಚಾರದಲ್ಲಿ ಭಾವನಾತ್ಮಕ, ಪ್ರಚೋದನಾತ್ಮಕ ಹೇಳಿಕೆ ನೀಡಕೂಡದು ಎಂದು ಸೂಚನೆ ನೀಡಿದೆ. ಈ ಹಿಂದಿನ ಮನ್ ಕೀ ಬಾತ್ ಸಂಚಿಕೆಯಲ್ಲೂ ಪ್ರಧಾನಿ ನರೇಂದ್ರ ಮೋದಿ, 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ತೀರ್ಪಿನ ವೇಳೆ ಅನುಸರಿಸಿದ ಸಂಯಮ ಈಗಲೂ ಪಾಲಿಸಬೇಕು ಎಂದು ಹೇಳಿದ್ದರು.
ಈ ಬಗ್ಗೆ ನಾಲ್ಕು ಪುಟಗಳ ನಿರ್ದೇಶನಗಳನ್ನು ಹೊರಡಿಸಲಾಗಿದ್ದು, ವ್ಯಾಟ್ಸ್‌ಆಪ್, ಟ್ವಿಟರ್, ಟೆಲಿಗ್ರಾಮ್, ಇನ್ಸಾ$್ಟಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕರಣ ಸಂಬಂಧ ಯಾವುದೇ ವಿಚಾರಗಳನ್ನು ಹಂಚಬಾರದು. ಟಿ.ವಿ ಮಾಧ್ಯಗಳು ಈ ಕುರಿತು ಯಾವುದೇ ಚರ್ಚಾ ಕಾರ್ಯಕ್ರಮಗಳನ್ನು ನಡೆಸಬಾರದು.
ಇದನ್ನು ಉಲ್ಲಂಘಿಸಿದವರ ವಿರುದ್ದ ಭಾರತೀಯ ದಂಡ ಸಂಹಿತೆಯ 188ನೇ ವಿಧಿಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ದೇವರು, ಧರ್ಮ ಸೇರಿದಂತೆ ಮೇರು ವ್ಯಕ್ತಿಗಳ ಕುರಿತು ಅವಹೇಳನಕಾರಿಯಾದ ಪೋಸ್ಟ್ ಹಾಖಕಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ
ಈ ಅವಧಿಯಲ್ಲಿ ಹಬ್ಬ ಹರಿದಿನಗಳ ಆಚರಣೆಗೂ ಬ್ರೇಕ್ ಹಾಕಲಾಗಿದ್ದು, ಸಾರ್ವಜನಿಕ ಸಭೆ ಸಮಾರಂಭ ಹಾಗೂ ರಾರಯಲಿಗಳನ್ನು ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಅಧಿಕಾರಿಗಳನ್ನು ಹೊರೆತು ಪಡಿಸಿ, ಸಾರ್ವಜನಿಕರು ಆಯುಧಗಳನ್ನು ಹಿಡಿದುಕೊಳ್ಳುವುದಕ್ಕೆ ನಿಷೇಧ ಹೇರಲಾಗಿದ್ದು, ಆ್ಯಸಿಡ್ ಅಥವಾ ಯಾವುದೇ ಸ್ಪೋಟಕ ಬಳಸದಂತೆ ಹೇಳಲಾಗಿದೆ. ಅಲ್ಲದೇ ದಿನಿತ್ಯದ ವಸ್ತುಗಳಾದ ಹಾಲು, ಕಾಳು, ಧಾನ್ಯ, ಎಣ್ಣೆ ಹಾಗೂ ಮೊಟ್ಟೆಗಳನ್ನು ಸಂಗ್ರಹಿಸಿದಂತೆ ಸೂಚಿಸಲಾಗಿದ್ದು, ಮೊಟ್ಟೆ, ಮೀನು ಸಹಿತ ಮಾಂಸಹಾರ ಮಾರಾಟ, ಸೇವನೆ ಹಾಗೂ ತ್ಯಾಜ್ಯ ಎಸೆಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಸತತ 40 ದಿನಗಳ ಕಾಲ ಅಯೋಧ್ಯ ಪ್ರಕರಣದ ವಿಚಾರಣೆ ನಡೆದಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ನ.17 ರಂದು ಸಿಜೆ ರಂಜನ್ ಗೊಗೋಯ್ ನಿವೃತ್ತರಾಗುತ್ತಿದ್ದು, ಅದಕ್ಕಿಂತ ಮುಂಚೆ ತೀರ್ಪು ಪ್ರಕಟವಾಗಲಿದೆ.
ಯಾವುದಕ್ಕೆಲ್ಲಾ ನಿರ್ಬಂಧ?
- ತೀರ್ಪಿನ ದಿನ ವಿಜಯೋತ್ಸವ ಮೆರವಣಿಗೆ ಮಾಡುವಂತಿಲ್ಲ
- ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳಿಗೆ ನಿಷೇಧ
- ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳ ಬಳಿ ಮಧ್ಯ ನಿಷೇಧ ಮಾರಾಟ
- ಅನುಮತಿ ಇಲ್ಲದೇ ಪ್ರಕರಣ ಸಂಬಂಧ ಟಿವಿ ಚರ್ಚೆ ಮಾಡಕೂಡದು
- ಅಧಿಕಾರಿಗಳು ಹೊರೆತು ಪಡಿಸಿ ಇನ್ಯಾರೂ ಆಯುಧಗಳನ್ನು ಬಳಸುವಂತಿಲ್ಲ