ಮೂತ್ರಪಿಂಡ ಕಾಯಿಲೆ ನಮ್ಮ ಜೀವವನ್ನೇ ತೆಗೆಯುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತರೆ ರೋಗಿಯನ್ನು ಉಳಿಸಬಹುದು. ಆದ್ರೆ ಕಿಡ್ನಿ ಕಸಿ ಅವಶ್ಯಕತೆಯಿರುವ ರೋಗಿ ನಾಲ್ಕು ವರ್ಷ ಕಾಯ್ಬೇಕೆಂದ್ರೆ? ಕರ್ನಾಟಕದ ರೋಗಿಗಳು ಕಿಡ್ನಿ ಸಿಗದೆ ತೊಂದರೆಪಡುವಂತಾಗಿದೆ.
ಅಂಗದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು. ಆದ್ರೆ ಕರ್ನಾಟಕದಲ್ಲಿ ಅಂಗದಾನ ಕಸಿ ತುಂಬಾ ನಿರಾಶಾದಾಯಕವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ವರ್ಷ ಅಂಗದಾನ ಕಸಿ ವಿಷ್ಯದಲ್ಲಿ ಸ್ವಲ್ಪ ಪ್ರಗತಿ ಕಂಡು ಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ (Karnataka) ದಲ್ಲಿದೆ ಈ ದುಸ್ಥಿತಿ : ಕಿಡ್ನಿ (Kidney) ಕಸಿ ಮಾಡಿಸಿಕೊಳ್ಳಲು ಬಯಸುವ ರೋಗಿಗಳು ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ವರ್ಷ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ (State) ಸರ್ಕಾರದ ನಿರೀಕ್ಷಣಾ ಪಟ್ಟಿಯಲ್ಲಿ ಬರುವ ಕಿಡ್ನಿ ರೋಗಿಗಳು ನಾಲ್ಕು ವರ್ಷದ ನಂತ್ರ ದಾನಿಗಳಿಂದ ಕಿಡ್ನಿ ಪಡೆದು ಕಿಡ್ನಿ ಕಸಿಗೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ನಿಮಗೆ ಅಚ್ಚರಿಯಾಗ್ಬಹುದು, ಆದ್ರೆ ಸದ್ಯ ರಾಜ್ಯ ಮೂತ್ರಪಿಂಡ ಕಸಿ ನಿರೀಕ್ಷಣಾ ಪಟ್ಟಿಯಲ್ಲಿರುವವರ ಸಂಖ್ಯೆ ದೊಡ್ಡದಿದೆ. ಸುಮಾರು 5,000 ಜನರು ಕಿಡ್ನಿ ಕಸಿಗಾಗಿ ಕಾಯ್ತಿದ್ದಾರೆ. ಇನ್ನೊಂದು ಆತಂಕದ ವಿಷ್ಯವೆಂದ್ರೆ ಇದ್ರಲ್ಲಿ ಶೇಕಡಾ 40ರಷ್ಟು ಮಂದಿ ಮುಂದಿನ ಎರಡು ವರ್ಷದಲ್ಲಿ ಸಾವನ್ನಪ್ಪುವ ಸಾಧ್ಯತೆಯಿದೆ. ರಾಜ್ಯದಲ್ಲಿ ಶವಗಳನ್ನು ದಾನ ಮಾಡುವವರ ಸಂಖ್ಯೆ ಕಡಿಮೆ ಎನ್ನುತ್ತಾರೆ ತಜ್ಞರು.
ಗಂಭೀರ ಕಾಯಿಲೆಗಳಿಗೆ ಈ ಹಸಿರು ಹಣ್ಣುಗಳೇ ಮದ್ದು! ತಪ್ಪದೇ ತಿನ್ನಿ
ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಡಯಾಲಿಸಸ್ ಸಮಯದಲ್ಲಿ ಸಾವನ್ನಪ್ಪುವುದು ಹೆಚ್ಚು. ಕ್ಯಾನ್ಸರ್ (Cancer) ಗೆ ಹೋಲಿಸಿದಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದೆ. ಮೃತರ ದೇಹವನ್ನು ದಾನ ಮಾಡಿದ್ರೆ ಕಿಡ್ನಿ ರೋಗಿಗಳ ಜೀವ ಉಳಿಯುತ್ತದೆ. ಮೂತ್ರಪಿಂಡದ ಕಾಯಿಲೆಯು ದೇಹದಾದ್ಯಂತ ಅಪಧಮನಿಗಳನ್ನು ಗಟ್ಟಿಯಾಗಿಸುತ್ತದೆ. ಹೃದಯ ಮತ್ತು ಮೆದುಳಿನ ಅಪಧಮನಿಗಳು ಗಟ್ಟಿಯಾಗುವ ಜೊತೆಗೆ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಮೂತ್ರಪಿಂಡದ ಕಾಯಿಲೆ ಕಾರಣವಾಗುತ್ತದೆ. ತಜ್ಞರ ಪ್ರಕಾರ, ಭಾರತದಲ್ಲಿ ಜೀವಂತ ಅಂಗಾಂಗ ದಾನಿಗಳಲ್ಲಿ ಶೇಕಡಾ 70ರಿಂದ 75 ರಷ್ಟು ಮಹಿಳೆಯರಂತೆ. ಕರ್ನಾಟಕದಲ್ಲಿ ಪ್ರತಿ ವರ್ಷ 150-200 ಮೃತ ದಾನಿಗಳ ಮೂತ್ರಪಿಂಡವನ್ನು ಕಸಿ ಮಾಡಲಾಗುತ್ತಿದೆ.
ಕಿಡ್ನಿ ಕಸಿಗೆ ಎಷ್ಟು ಖರ್ಚಾಗುತ್ತದೆ? : ಮೂತ್ರಪಿಂಡ ಕಸಿ ಮಾಡಲು ಸರಾಸರಿ 7 ರಿಂದ 10 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದು ಕಸಿ ಪೂರ್ವ ಮೌಲ್ಯಮಾಪನ, ಶಸ್ತ್ರಚಿಕಿತ್ಸೆ ಮತ್ತು ಕಸಿ ನಂತರದ ಚೇತರಿಕೆಯ ಅವಧಿಯನ್ನು ಒಳಗೊಂಡಿದೆ.
Healthy Food : ತಿಂದಿದ್ದೇ ತಿನ್ನಬೇಡಿ, ಆರೋಗ್ಯಕ್ಕೆ ಒಳ್ಳೇದಲ್ಲ
ಕಿಡ್ನಿ ಡಯಾಲಿಸಸ್ ಗೆ ಎಷ್ಟು ಖರ್ಚಾಗುತ್ತೆ? : ಕರ್ನಾಟಕದಲ್ಲಿ ರೋಗಿಯ ಸ್ಥಿತಿಯನ್ನಾಧರಿಸಿ ಕಿಡ್ನಿ ಡಯಾಲಿಸಸ್ (Kidney Dialisis) ಗೆ ವೆಚ್ಚ ತಗಲುತ್ತದೆ. 750 ರೂಪಾಯಿಯಿಂದ 2,356 ರೂಪಾಯಿವರೆಗೆ ಖರ್ಚು ಬರುತ್ತದೆ. ಆದ್ರೆ ಕರ್ನಾಟಕ ಸರ್ಕಾರ ಕೆಲವು ಕಡೆ ಉಚಿತ ಡಯಾಲಿಸಸ್ ಸೆಂಟರ್ ಶುರು ಮಾಡಿದೆ.
ಕಿಡ್ನಿ ದಾನ ಮಾಡೋದು ಎಲ್ಲಿ? : ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಾಗಾರಗಳು ನಡೆಯುತ್ತಿರುತ್ತವೆ. ನಿಮ್ಮ ಸಾವಿನ ನಂತ್ರ ನಿಮ್ಮ ದೇಹದ ಅಂಗಗಳನ್ನು ನೀವು ದಾನ ಮಾಡಬಹುದು. ಅದಕ್ಕೆ ಈಗ್ಲೇ ಹೆಸರು ನೋಂದಾಯಿಸಬೇಕಾಗುತ್ತದೆ. ನೀವು ಕಿಡ್ನಿಯೊಂದನ್ನು ಮಾತ್ರವೇ ದಾನ ಮಾಡಬಹುದು. ನೀವು ಅಂಗಾಂಗ ದಾನ ಮಾಡಲು ಬಯಸಿದ್ರೆ ಬೆಂಗಳೂರು ಕಿಡ್ನಿ ಫೌಂಡೇಶನ್, ಮಣಿಪಾಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆ ನೀವು ಹೆಸರು ನೋಂದಾಯಿಸಬೇಕು. ಈಗ ಆನ್ಲೈನ್ ನಲ್ಲಿಯೂ ಅರ್ಜಿ ಭರ್ತಿಮಾಡುವ ಅವಕಾಶವಿದೆ. ಕಿಡ್ನಿ ಕಸಿ ನಂತ್ರ ರೋಗಿ 10 ರಿಂದ 15 ವರ್ಷಗಳ ಕಾಲ ಬದುಕಿರುವ ಸಾಧ್ಯತೆ ಇರುತ್ತದೆ.