ಎದೆ ಚೂರಾಗುವುದು, ಒಡೆದು ಹೋಗುವುದು ಕೇವಲ ಸಿನಿಮಾಗಳಲ್ಲಿ ಅಲ್ಲ. ನಿಜವಾಗಿಯೂ ಅಂಥದ್ದೊಂದು ಸಮಸ್ಯೆ ಇದೆ ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅತಿ ಕೋಪ, ಭಯ, ಆಘಾತದಿಂದ ಹೃದಯದ ಮಾಂಸಖಂಡಗಳು, ನರಗಳು ದುರ್ಬಲವಾದಾಗ ಈ ಸಮಸ್ಯೆ ಉಂಟಾಗುತ್ತದೆ.
“ಎದೆ ಒಡೆದು ಹೋಯ್ತು, ಹೃದಯ ಚೂರಾಯ್ತುʼ ಎನ್ನುವ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಸಿನಿಮಾಗಳಲ್ಲಿ ಈ ಡೈಲಾಗುಗಳು ಭಾರೀ ಪ್ರಸಿದ್ಧ. ಹೀರೋಯಿನ್ ಕಳೆದುಕೊಂಡ ಹೀರೋನ ಹೃದಯ ಚೂರಾಗುವುದನ್ನು ನಾವು ಕಂಡಿದ್ದೇವೆ. ಬಯಸಿದ ಪ್ರೀತಿ ಸಿಗದೆ ಹೃದಯ ಚೂರಾಗುವ ಸ್ಥಿತಿ ಇದು. ದೈನಂದಿನ ಜೀವನದಲ್ಲೂ ಯಾರಾದರೂ ತಮಗಾದ ಅತಿಯಾದ ನೋವನ್ನು “ಹೃದಯ ಚೂರಾಗಿ ಹೋಯ್ತುʼ ಎನ್ನುವ ಮಾತುಗಳನ್ನು ಆಡುತ್ತಾರೆ. ಇದು ಕೇವಲ ಅಲಂಕಾರಿಕ ಮಾತಲ್ಲ. ನಿಜವಾಗಿಯೂ ಇಂಥದ್ದೊಂದು ಆರೋಗ್ಯ ಸಮಸ್ಯೆ ಇದೆ ಎನ್ನುವುದು ನಿಮಗೆ ಗೊತ್ತೇ? ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಏನಿದು ಈ ಸಿಂಡ್ರೋಮ್, ಯಾರಿಗೆ ಇದರ ಅಪಾಯ ಹೆಚ್ಚು ಎನ್ನುವುದನ್ನು ತಿಳಿದುಕೊಳ್ಳಬೇಕು. ಈ ತೊಂದರೆ ಇದ್ದಾಗ ಹೃದಯ ತುಂಡಾಗುತ್ತದೆ ಎಂದರೆ ಅಚ್ಚರಿ ಆಗಬಹುದು. ನಮ್ಮ ಹೃದಯ ಅತ್ಯಂತ ಶಕ್ತಿಶಾಲಿಯೂ ಹೌದು, ಹಾಗೆಯೇ ನಾಜೂಕಿನ ಅಂಗವೂ ಹೌದು. ಯಾವುದೇ ರೀತಿಯ ಗಾಯವಾದರೂ ಅದು ಹಾನಿಗೀಡಾಗುತ್ತದೆ. ನೇರವಾದ ಏಟು ಬಿದ್ದಾಗ ಮಾತ್ರವಲ್ಲ, ಭಾವನಾತ್ಮಕ ಗಾಯವಾದರೂ ಹೃದಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಹೃದಯವನ್ನು ಸ್ವಸ್ಥವಾಗಿಟ್ಟುಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.
ಹೃದಯದ ಆರೋಗ್ಯ (Heart Health) ಹದಗೆಡಲು ನಾವೇ ಕಾರಣರಾಗುತ್ತೇವೆ. ಸ್ಯಾಟುರೇಟೆಡ್ ಫ್ಯಾಟ್, ಸಂಸ್ಕರಿತ ಆಹಾರ, ಅನಾರೋಗ್ಯಕರ ಆಹಾರ (Unhealthy Food) ಸೇವನೆ ಮೂಲಕ ಹೃದಯವನ್ನು ದುರ್ಬಲ (Week) ಮಾಡುತ್ತೇವೆ. ಹಾಗೆಯೇ, ಇನ್ನಿತರ ಕೆಲವು ಕಾರಣಗಳೂ ಇವೆ, ಹೃದಯ ದುರ್ಬಲವಾಗಲು. ನಿಯಂತ್ರಣವೇ ಇಲ್ಲದ ಕೋಪ Angry), ಭಯ (Fear) ಅಥವಾ ಯಾವುದೇ ರೀತಿಯ ಶಾಕ್ (Shock) ನಿಂದಲೂ ಬ್ರೋಕನ್ ಹಾರ್ಟ್ ಸಿಂಡ್ರೋಮ್ (Broken Heart Syndrome) ಅಪಾಯ ಹೆಚ್ಚಾಗುತ್ತದೆ.
ಜಿಮ್ ಮಾಡೋವಾಗ್ಲೆ ಹೃದಯಾಘಾತ ! ಇದ್ಯಾಕೆ ಈಗ ಕಾಮನ್ ಆಗುತ್ತಿದೆ!
ಏನಿದು ಸಿಂಡ್ರೋಮ್?
ಜಪಾನ್ ದೇಶದಲ್ಲಿ 1990ರಲ್ಲಿ ನಡೆದ ಒಂದು ಅಧ್ಯಯನ ಈ ಸಿಂಡ್ರೋಮ್ ಕುರಿತು ಬೆಳಕು ಚೆಲ್ಲಿತ್ತು. ವ್ಯಕ್ತಿ ಅತಿಯಾದ ಮಾನಸಿಕ ಆಘಾತ (Shock), ಒತ್ತಡಕ್ಕೆ (Stress) ತುತ್ತಾದಾಗ, ಅತಿಯಾದ ಭಯ ಅನುಭವಿಸಿದಾಗ ಆತನ ಹೃದಯದ ಮಾಂಸಖಂಡಗಳು (Heart Muscels) ದುರ್ಬಲವಾಗುತ್ತದೆ. ಹೃದಯದ ನರಗಳ ಮೇಲೆ ಅಧಿಕ ಒತ್ತಡ ಬಿದ್ದು ಅವು ಸಹ ದುರ್ಬಲವಾಗುತ್ತವೆ. ಇದರಿಂದ ಹೃದಯಾಘಾತದ ಸಂಭವ ಹೆಚ್ಚಾಗುತ್ತದೆ. ಸಮೀಪದವರಲ್ಲಿ ಯಾರಾದರೂ ಆಕಸ್ಮಿಕವಾಗಿ ನಿಧನ (Dead) ಹೊಂದಿದಾಗ ಅತಿಯಾಗಿ ನೋವಾಗುತ್ತದೆ. ಈ ಸ್ಥಿತಿ ಭಾವನಾತ್ಮಕವಾಗಿ ಅಪಾಯಕಾರಿ ಆಗಿರುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಭಾರಿ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದೊಂದೇ ಅಲ್ಲ, ಆರ್ಥಿಕ ಸಮಸ್ಯೆ, ಕೌಟುಂಬಿಕ ಹಿಂಸೆಯಿಂದಲೂ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಗೆ ತುತ್ತಾಗಬಹುದು. ಹಾಗೆಯೇ, ಯಾರಾದರೂ ಅರಿಯಾಗಿ ಸೋಮಾರಿಯಾಗಿದ್ದರೆ ಅವರಿಗೂ ಇದರ ಅಪಾಯ ಹೆಚ್ಚು.
ಕಡಿಮೆ ಉಪ್ಪು ಬಾಯಿಗೆ ರುಚಿಸದೇ ಇರಬಹುದು, ಆರೋಗ್ಯಕ್ಕೆ ಮಾತ್ರ ಒಳ್ಳೇದು
ಹಾರ್ಟ್ (Heart) ಹೇಗೆ ಬ್ರೋಕ್ ಆಗುತ್ತೆ?
ಒತ್ತಡಕ್ಕೆ (Stress) ಕಾರಣವಾಗುವ ಅಡ್ರಿನಲಿನ್ (Adrenaline) ಹಾರ್ಮೋನ್ (Hormone) ಸ್ರವಿಕೆಯಿಂದ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಅಪಾಯ ಹೆಚ್ಚು. ಅಧ್ಯಯನಗಳ ಪ್ರಕಾರ, ಅಡ್ರಿನಲಿನ್ ಹಾರ್ಮೋನ್ ನಿಂದಾಗಿ ಹೃದಯದ ನಾಳಗಳು ಸಂಕುಚನಗೊಳ್ಳುತ್ತವೆ. ಆಗ ಮಾಂಸಖಂಡಗಳಿಗೆ ಸರಿಯಾಗಿ ರಕ್ತ ಪೂರೈಕೆ ಆಗುವುದಿಲ್ಲ. ದೇಹದಲ್ಲಿ ಒಂದು ರೀತಿಯ ಮಾನಸಿಕ ಒತ್ತಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಹೃದಯದ ಮಾಂಸಖಂಡಗಳು ಇನ್ನಷ್ಟು ದುರ್ಬಲಗೊಳ್ಳುತ್ತವೆ. ಅಡ್ರಿನಲಿನ್ ಹಾರ್ಮೋನು ಸೀದಾ ಹೃದಯದ ಮಾಂಸಖಂಡಗಳೊಂದಿಗೆ ಬೆರೆತು ಹೋಗುತ್ತದೆ. ಇದರಿಂದಾಗಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹೃದಯದ ಕೋಶಗಳಿಗೆ ಲಭಿಸುತ್ತದೆ. ಹೆಚ್ಚು ಕಬ್ಬಿಣಾಂಶದಿಂದ ಈ ಕೋಶಗಳು ಚೆನ್ನಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಸ್ಥಿತಿಯಲ್ಲಿರುವ ಹೃದಯ ಕೆಲವೇ ದಿನಗಳಲ್ಲಿ ಸುಧಾರಿಸಿಕೊಳ್ಳುತ್ತದೆ. ಮತ್ತಷ್ಟು ಸಮಸ್ಯೆಯಾದರೆ ಇನ್ನಷ್ಟು ಕುಸಿಯುತ್ತದೆ.
ಎದೆಯಲ್ಲಿ ನೋವು, ಉಸಿರಾಟಕ್ಕೆ ತೊಂದರೆ, ಬೆವರು ಬರುವುದು, ತಲೆ ಸುತ್ತುವುದು ಮುಂತಾದವು ಬ್ರೋಕನ್ ಹಾರ್ಟ್ ಲಕ್ಷಣಗಳು. ಭಾವನಾತ್ಮಕವಾಗಿ ಸ್ವಲ್ಪ ವೀಕ್ ಎನಿಸಿರುವ ವ್ಯಕ್ತಿಗಳಿಗೆ ಈ ಸಮಸ್ಯೆ ಹೆಚ್ಚು. ಹೀಗಾಗಿ, ಅಂತವರು ಸದಾಕಾಲ ತಮ್ಮ ಬಗ್ಗೆ ಎಚ್ಚರಿಕೆಯಿಂದ ಇರಬೇಕು.