ಈ ಟೈಮ್‌ನೊಳಗೆ ಕೆಲಸ ಮುಗಿಸಲೇ ಬೇಕು. ಅದಾದ ಮೇಲೆ ಮತ್ತೊಂದಿಷ್ಟುಕೆಲಸಗಳು ಕಾಯ್ತಾ ಇರುತ್ತವೆ. ಅಷ್ಟರೊಳಗೆ ಮನೆಯಿಂದ ಮಗು ಕಾಲ್ ಮಾಡುತ್ತೆ. ಇನ್ಯಾರೋ ಫೋನ್ ಮಾಡಿ ಯಾವ್ದೋ ಕೆಲಸ ಆಗ್ಬೇಕು ಅಂತ ಒತ್ತಡ ಹಾಕುತ್ತಿರುತ್ತಾರೆ. ರುಟೀನ್ ವರ್ಕ್ಗಳಿರುತ್ತೆ. ಮಗು ನೀವಿಲ್ದೇ ಓದೋದೇ ಇಲ್ಲ. ನಾಳೆಯೇ ಎಕ್ಸಾಂ. ಕೆಲಸ ಜಾಸ್ತಿ ಅಂತ ಆಫೀಸ್ ಬಿಡೋದು ಲೇಟಾಗಿ ಮನೆ ತಲುಪಿದ್ರೆ ಮಗು ಓದುವ ಸ್ಥಿತಿಯಲ್ಲಿರಲ್ಲ. ತೂಕಡಿಸುತ್ತಾ ಇರುತ್ತದೆ.
ಸ್ಥಿತಿ ಕೆಲವೊಮ್ಮೆ ಇನ್ನೂ ಹಾರಿಬಲ್ ಅನಿಸುವ ಹಾಗಿರುತ್ತದೆ. ಇದು ನನ್ನಿಂದ ಹೊರಲಾಗದ ಜವಾಬ್ದಾರಿ, ನಿಭಾಯಿಸೋದು ಕಷ್ಟಅಂತ ಹೇಳುವ ಸ್ಥಿತಿ ಆಫೀಸ್‌ನಲ್ಲಿ ಇಲ್ಲ. ಅದು ಅನಿವಾರ್ಯ ಕರ್ಮ. ಮನೆಯಲ್ಲಂತೂ ಖಂಡಿತಾ ಇಲ್ಲ. ಇಂಥ ಟೈಮ್‌ನಲ್ಲಿ ಹೆಣ್ಣೊಬ್ಬಳು ಏನು ಮಾಡಬೇಕು.. ಗಂಡು.. ಅಂತ ಕೇಳಬಹುದು. ಅವರಿಗೂ ಇದು ಅನ್ವಯವಾಗುತ್ತೆ. ಅದೇನೋ ಅರಿತೋ ಅರಿಯದೆಯೋ ಮಾಡಿಕೊಂಡ ಸಂವಿಧಾನ, ಕೆಲಸದ ಜೊತೆಗೆ ಫ್ಯಾಮಿಲಿಯನ್ನೂ ನಿರ್ವಹಿಸುವ ಜವಾಬ್ದಾರಿ ಹೆಣ್ಣಿನ ಹೆಗಲಿಗೇ ಬಿದ್ದಿರುತ್ತದೆ. ಹಾಗಾಗಿ ಸ್ಟೆ್ರಸ್ ಅವಳಿಗೆ ಹೆಚ್ಚೇ.
ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!
ರೀಸ್ಟಾರ್ಟ್ ಮಾಡಲೇಬೇಕು
ವರ್ಕ್ಲೋಡ್ ಒಂದು ಲೆವೆಲ್ ಜಾಸ್ತಿ ಆದ ಕೂಡಲೇ ಕಂಪ್ಯೂಟರ್ ಹ್ಯಾಂಗ್ ಆಗುತ್ತೆ. ಅದನ್ನು ಮತ್ತೆ ರೀ ಸ್ಟಾರ್ಟ್ ಮಾಡದೇ ವಿಧಿಯಿಲ್ಲ. ಬರು ಬರುತ್ತಾ ನಾವೂ ಮೆಶಿನ್‌ಗೆ ಹತ್ತಿರ ಆಗ್ತಾ ಹೋಗ್ತೀವಿ. ಕಂಪ್ಯೂಟರ್ ಏನೋ ರೀ ಸ್ಟಾರ್ಟ್ ಮಾಡ್ತೀವಿ. ನಾವು?
undefined
ನಾವೂ ನಮ್ಮನ್ನೊಮ್ಮೆ ಶಡೌನ್ ಮಾಡದೇ ವಿಧಿಯಿಲ್ಲ. ನಮ್ಮ ದೇಹ, ಮನಸ್ಸು ಸೂಚ್ಯವಾಗಿ ರೆಡ್ ಅಲರ್ಟ್ ಕೊಡ್ತಾ ಇರುತ್ತೆ. ಸಣ್ಣಗೆ ತಲೆ ಸಿಡಿತ, ಮೈಯಲ್ಲಿ ಬಿಸಿಯಾದಂಥಾ ಅನುಭವ, ಆಯಾಸ, ಉದ್ವೇಗ.. ಹೀಗೆ. ಆದರೆ ಎಷ್ಟೋ ಸಲ ನಾವದಕ್ಕೆ ಕಿವಿಗೊಡಲ್ಲ. ಪರಿಣಾಮ ಕೆಲಸದಲ್ಲಿ ಏಕಾಗ್ರತೆ ಸಿಗಲ್ಲ. ಒಂದಲ್ಲೊಂದು ತಪ್ಪು ಆಗುತ್ತೆ. ಇಲ್ಲ, ಕೆಲಸದಲ್ಲಿ ಎಡವಟ್ಟೇ ಆಗಿಲ್ಲ ಅಂತಿಟ್ಟುಕೊಳ್ಳಿ, ದೇಹ ಅನ್ನೋ ಹಾರ್ಡ್‌ವೇರ್, ಮನಸ್ಸು ಅನ್ನೋ ಸಾಫ್ಟ್‌ವೇರ್‌ನ ಬಳಲಿಕೆಯನ್ನು ನಿರ್ಲಕ್ಷಿಸಿ, ಹತ್ತು ನಿಮಿಷ ರೆಸ್ಟ್ ತೆಗೆದುಕೊಳ್ಳದ ತಪ್ಪಿಗೆ 1 ವಾರ ಹಾಸಿಗೆ ಬಿಟ್ಟೇಳದ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನೂ ಏನೆಲ್ಲ ಸಮಸ್ಯೆ ಬರಬಹುದು. ಅದೆಲ್ಲ, ಯಾಕೆ, ಒಂದು ಹತ್ ನಿಮಿಷ ಹೊರಗೆ ಹೋಗಿ ಲೆಮೆನ್ ಟೀ ಕುಡಿದುಕೊಂಡು ಬನ್ನಿ. ಅಲ್ಲಿ ಕೆಲಸದ ನೆನಪೇ ಬೇಡ.
ಕಚೇರಿಯಲ್ಲಿದ್ದರೆ ಬೆಸ್ಟೀ, ಕೆಲಸದಲ್ಲಿ ಹೆಚ್ಚುತ್ತೆ ಪ್ರೀತಿ
ಮ್ಯೂಸಿಕ್ ನಿಮ್ಮ ಸಹಾಯಕ್ಕೆ ಬರುತ್ತೆ
ಒಂದಿಷ್ಟುರಿಲ್ಯಾಕ್ಸಿಂಗ್ ಮ್ಯೂಸಿಕ್‌ಗಳಿವೆ. ಮಳೆ ಹನಿಯುವ ಸದ್ದು, ನೀರಿನ ಜುಳು ಜುಳು, ಪರ್ವತದ ಗಾಳಿಯ ಮರ್ಮರ ಇತ್ಯಾದಿ ಶಬ್ದಗಳು ಅದರಲ್ಲಿರುತ್ತವೆ. ಒತ್ತಡದ ಮನಸ್ಸನ್ನು ಒಂದಿಷ್ಟುಹೊತ್ತಲ್ಲಿ ತಹಬಂದಿಗೆ ತಂದು ಕೂಲ್ ಕೂಲ್ ಮಾಡುತ್ತವೆ. ನಿಮ್ಮ ಅರಿವಿಗೆ ಬರದೇ ಮನಸ್ಸು ರಿಫ್ರೆಶ್ ಆಗುತ್ತೆ. ಒಂದು ಕಡೆಯಲ್ಲಿ ಕೆಲಸ ಮಾಡುತ್ತಲೇ ಇನ್ನೊಂದು ಕಡೆ ಈ ಮ್ಯೂಸಿಕ್ ಕೇಳೋದರಿಂದ ಅತ್ತ ಕೆಲಸವೂ ಆಗುತ್ತೆ, ಇತ್ತ ಮನಸ್ಸೂ ಪ್ರಫುಲ್ಲವಾಗುತ್ತೆ.
ಕೆಲಸದ ನಡುವೆ ಮೊಬೈಲ್ ಬೇಡ
ಕ್ಷಣಕ್ಕೊಮ್ಮೆ ಬರುವ ಯಾವುದೋ ವಾಟ್ಸಾಪ್ ಮೆಸೇಜ್, ಫೇಸ್‌ಬುಕ್‌ನಲ್ಲಿ ಕೆಲಸವಿಲ್ಲದವರು ಮಾಡುವ ಕ್ಷುದ್ರ ಜಗಳ, ಇನ್‌ಸ್ಟಾದಲ್ಲಿ ಬರುವ ಯಾವುದೋ ಎಡಿಟ್ ಆದ ಫೋಟೋ ಇವೆಲ್ಲ ನಿಮ್ಮ ಕೆಲಸದ ಏಕಾಗ್ರತೆಗೆ ಭಂಗ ತರುವ ಅಂಶಗಳು. ಕೆಲಸದ ಅವಧಿಯಲ್ಲಿ ಇವನ್ನೆಲ್ಲ ಹತ್ತಿರ ಸೇರಿಸೋದು ಬೇಡವೇ ಬೇಡ. ಏಕೆಂದರೆ ಸೋಷಲ್ ಮೀಡಿಯಾಗಳು ಮನಸ್ಸನ್ನು ಅರಳಿಸುವುದಕ್ಕಿಂತ ಕೆರಳಿಸುವುದೇ ಹೆಚ್ಚು. ಹಾಗೆ ಕೆರಳಿದ ಮನಸ್ಸು ಶಾಂತವಾಗಲು ಬಹಳ ಸಮಯ ಬೇಕು, ಅದು ಸುಲಭವೂ ಅಲ್ಲ. ಹಾಗಂತ ಸಮಕಾಲೀನ ಸಮಸ್ಯೆಯನ್ನು ಕಡೆಗಣಿಸಿ ಅಂತಲ್ಲ. ಒಂದು ಸ್ಟೇಟಸ್ ಹಾಕೋದರಿಂದಲೋ, ಎಫ್‌ಬಿಯಲ್ಲಿ ಪೋಸ್ಟ್ ಹಾಕೋದರಿಂದಲೋ ಯಾವ ಸಮಸ್ಯೆಗೂ ಪರಿಹಾರ ಸಿಗಲ್ಲ. ನಿಜಕ್ಕೂ ಸಂಕಲ್ಪಶಕ್ತಿ ಇದ್ದರೆ ಆ ಸಮಸ್ಯೆ ನಿವಾರಣೆಗೆ ನಿಮ್ಮಿಂದಾದ ಸಹಾಯ ಮಾಡಿ. ಆಗ ಮನಸ್ಸಿಗೂ ಹಿತ ಎನಿಸುತ್ತೆ.
ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡೋ ಸಿಂಪಲ್ ಟ್ರಿಕ್ಸ್‌ಗಳಿವು!
ಧ್ಯಾನ ಮಾಡೋದು ಬೆಸ್ಟ್ ದಾರಿ
ಕಾಲು ಗಂಟೆ ರೆಸ್ಟ್ ರೂಮ್‌ನಲ್ಲೋ, ಆಫೀಸ್ ಪಕ್ಕದ ಪಾರ್ಕ್ನಲ್ಲೋ ಕೂತು ಕಣ್ಣು ಮುಚ್ಚಿ ಉಸಿರಿನ ಮೇಲೆ ಮನಸ್ಸು ಕೇಂದ್ರೀಕರಿಸಿ. ಹಾಗೇ ನಿಮ್ಮ ದೇಹದ ಪ್ರತೀ ಅವಯವಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಬನ್ನಿ. ಅಂತಿಮವಾಗಿ ಹೃದಯಶಕ್ತಿಯಲ್ಲಿ ಮನಸ್ಸು ಕೇಂದ್ರೀಕರಿಸಿ. ಒಂದಿಷ್ಟುಹೊತ್ತು ದೀರ್ಘವಾಗಿ ಉಸಿರಾಡುತ್ತಾ ಅದೇ ಸ್ಥಿತಿಯಲ್ಲಿರಿ. ಆ ಬಳಿಕ ಮತ್ತೆ ಉಸಿರಿನ ಮೇಲೆ ಗಮನ ಹೋಗಲಿ. ಹೊರ ಪ್ರಪಂಚದ ಸದ್ದುಗಳನ್ನು ಆಲಿಸಿ. ಈಗ ಜಗತ್ತೆಲ್ಲ ಹೊಸದು ಅನಿಸುತ್ತೆ. ಹಾಗನಿಸಿದರೆ ಮನಸ್ಸೂ ರಿಫ್ರೆಶ್ ಆದಂತೆ.
ಆಪ್ತರ ಜೊತೆಗೆ ಹರಟೋದು, ಏಕತಾನತೆ ಬ್ರೇಕ್ ಮಾಡೋದು
ಸ್ಟೆ್ರಸ್‌ನಿಂದ ಹೊರ ಬರಬೇಕು ಅಂದರೆ ಮೊದಲು ಆ ಪರಿಸರದಿಂದ ಆಚೆ ಬರಬೇಕು. ಅದೇ ವಾತಾವರಣದಲ್ಲಿರುವ ಮನಸ್ಸಿಗೆ ಹಾಯೆನಿಸುವಂಥಾದ್ದು ಏನಾದರೂ ಬೇಕು. ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಿ. ಮನಸ್ಸು ಹಗುರಾಗುತ್ತೆ. ಎದುರಿನ ರಸ್ತೆಯಲ್ಲಿ ಸ್ವಲ್ಪ ನಡೆದಾಡಿ. ಹಣ್ಣು, ಎಳನೀರು ಮಾರುವವರು ಸಿಗಬಹುದು. ಅವರನ್ನೇ ಒಂದರೆಗಳಿಗೆ ಮಾತನಾಡಿಸಿ. ಏನೋ ಚೇಂಜ್ ಸಿಗುತ್ತೆ. ಮೂಡ್ ಬದಲಾಗಲಿಕ್ಕೆ ಇಂಥ ಸಣ್ಣ ಪುಟ್ಟಟಾಸ್ಕ್‌ಗಳೂ ಸಾಕು.
ಈಗಷ್ಟೇ ಕೆಲಸಕ್ಕೆ ಸೇರಿದ್ದೀರಾ? ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!