ನಾವು ಕೊರೋನಾ ವೈರಸ್ ಜೊತೆಗೆ ಬಾಳಬೇಕಾಗಿದೆ ಅಂದರೆ ಇದಕ್ಕೆ ಸದ್ಯಕ್ಕಂತೂ ಮದ್ದಿಲ್ಲ. ಸರಿಯಾದ ಔಷಧ ದೊರೆಯುವವರೆಗೂ ನಮ್ಮಲ್ಲಿ ಬಹಳ ಮಂದಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವುದು ತಪ್ಪಿದ್ದಲ್ಲ.
ನಾವು ಕೊರೋನಾ ವೈರಸ್ ಜೊತೆಗೆ ಬಾಳಬೇಕಾಗಿದೆ ಅಂದರೆ ಇದಕ್ಕೆ ಸದ್ಯಕ್ಕಂತೂ ಮದ್ದಿಲ್ಲ. ಸರಿಯಾದ ಔಷಧ ದೊರೆಯುವವರೆಗೂ ನಮ್ಮಲ್ಲಿ ಬಹಳ ಮಂದಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವುದು ತಪ್ಪಿದ್ದಲ್ಲ.
- ನಾವು ಕೊರೋನಾ ವೈರಸ್ ಜೊತೆಗೆ ಬಾಳಬೇಕಾಗಿದೆ ಅಂದರೆ ಇದಕ್ಕೆ ಸದ್ಯಕ್ಕಂತೂ ಮದ್ದಿಲ್ಲ. ಸರಿಯಾದ ಔಷಧ ದೊರೆಯುವವರೆಗೂ ನಮ್ಮಲ್ಲಿ ಬಹಳ ಮಂದಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವುದು ತಪ್ಪಿದ್ದಲ್ಲ.
- ಕೊರೋನಾ ವೈರಸ್‌ಗೆ ಲಸಿಕೆ ಸಿದ್ಧವಾಗುವುದಕ್ಕೆ ಇನ್ನೂ ಒಂದೂವರೆ ವರ್ಷವಾದರೂ ಬೇಕಾಗಬಹುದು. ನಂತರ ಅದು ನಮ್ಮವರೆಗೆ ತಲುಪುವುದಕ್ಕೆ ಮತ್ತೂ ಒಂದೆರಡು ತಿಂಗಳಾದರೂ ಬೇಕು. ಅಲ್ಲಿಯವರೆಗೂ ನಾವು ಕಾಯಬೇಕು. ಅಷ್ಟರಲ್ಲಿ ಕೋವಿಡ್ ನಮ್ಮ ನಿಮ್ಮ ಮನೆಗೂ ಭೇಟಿ ಕೊಟ್ಟಿರುತ್ತದೆ.
- ಇಟೆಲಿಯನ್ನು ನೋಡಿ. ಅಮೆರಿಕವನ್ನು ನೋಡಿ. ಅಲ್ಲಿ ಕೊರೋನಾ ವೈರಸ್ ಈಗಾಗಲೇ ಸಾಕಷ್ಟು ಹಾವಳಿ ಮಾಡಿದೆ. ಅಂದರೆ ಸಾಯಬಹುದಾದಷ್ಟು ಮಂದಿ ಸತ್ತಿದ್ದಾರೆ. ಭಾರತದಲ್ಲೂ ಕೂಡ ಲಾಕ್‌ಡೌನ್ ಲಿಫ್ಟ್ ಮಾಡಿದ ಬಳಿಕ ಆರ್ಥಿಕ ಚಟುವಟಿಕೆ, ಜನರ ಓಡಾಟ ಹೆಚ್ಚಾಗುತ್ತದೆ. ಹೀಗಾಗಿ ಕೋವಿಡ್ ಸೋಂಕು ಕೂಡ ಹೆಚ್ಚಾಗುತ್ತದೆ. ಇದರಿಂದ ಎಲ್ಲೆಡೆಯೂ ಕಾಯಿಲೆ ಜಾಸ್ತಿಯಾಗಿ, ಬಹಳ ಮಂದಿ ಸಾಯಲಿದ್ದಾರೆ. ಅದನ್ನೂ ನಾವು ನೋಡುವುದು ಅನಿವಾರ್ಯ.
- ಚೀನಾದಂಥ ದೇಶಗಳು ಸಂಪೂರ್ಣ ಲಾಕ್‌ಡೌನ್ ಘೋಷಿಸಿ, ಯಾರ ಸಂಚಾರವೂ ಇಲ್ಲದಂತೆ ಬಂದ್ ಮಾಡಿ, ಮನೆಮನೆಗೂ ಪಡಿತರ ಸಪ್ಲೈ ಮಾಡಿ ನೋಡಿಕೊಳ್ಳಬಲ್ಲವು. ಅಂಥ ಕಟ್ಟುನಿಟ್ಟು ಭಾರತದಲ್ಲಿ ಸಾಧ್ಯವಿಲ್ಲ. ಆದ್ದರಿಂದ ನಾವು ಕೋವಿಡ್ ಹರಡುವಿಕೆ ಸಹಿಸಿಕೊಳ್ಳುವುದು ಅನಿವಾರ್ಯ.
- ಭಾರತದಲ್ಲಿ ಅಸಿಂಪ್ಟಮ್ಯಾಟಿಕ್ ಪ್ರಕರಣಗಳು ಹೆಚ್ಚು ಇವೆ. ಅಂದರೆ ಮೇಲ್ನೋಟಕ್ಕೆ ಯಾವ ಲಕ್ಷಣಗಳೂ ಇಲ್ಲದೆ ಸೋಂಕು ಹಬ್ಬಿಸುವವರು ತುಂಬ ಮಂದಿ ಇದ್ದಾರೆ. ಇವರು ಟೆಸ್ಟ್‌ಗೂ ಸಿಗುವುದಿಲ್ಲ. ಆದರೆ ಇವರಿಂದ ದುರ್ಬಲರಿಗೆ, ವಯಸ್ಸಾದವರಿಗೆ ರೋಗ ಹರಡುತ್ತದೆ. ಅಂಥವರು ಲೈಫ್ ರಿಸ್ಕ್ ಅನುಭವಿಸುತ್ತಾರೆ. ಅಸಿಂಪ್ಟಮ್ಯಾಟಿಕ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳು ಇಲ್ಲವಾದ್ದರಿಂದ ನಾವು ವೈರಸ್ ಅಕ್ಕಪಕ್ಕದಲ್ಲೇ ಇದ್ದರೂ ಮೂಕರಾಗಿರಬೇಕಾಗುತ್ತದೆ.
- ಒಂದು ಮನೆಯಲ್ಲಿ ಒಬ್ಬನಿಗೆ ಕೋವಿಡ್ ಬಂದರೆ, ಆ ಮನೆಯಲ್ಲಿರುವ ಎಲ್ಲರಿಗೂ ಕೋವಿಡ್ ಬರುವ ಸಾಧ್ಯತೆ ನೂರಕ್ಕೆ ತೊಂಬತ್ತೊಂಬತ್ತು. ಇದರಿಂದ ಕ್ಲಸ್ಟರ್‌ಗಳ ಸಂಖ್ಯೆ ಹೆಚ್ಚುತ್ತದೆ.
- ಸೋಂಕಿನ ಭಯದಿಂದ ಇನ್ನು ಒಂದು ಅಥವಾ ಒಂದುವರೆ ವರ್ಷ ಯಾವುದೇ ಸಾಮಾಜಿಕ, ಸಾಮೂಹಿಕ ಕಾರ್ಯಕ್ರಮಗಳು ನಡೆಯಲು ಸಾಧ್ಯವಿಲ್ಲ. ಶುಭ ಕಾರ್ಯಕ್ರಮಗಳು ಸಣ್ಣ ಮಟ್ಟದ ಗುಂಪಿನ ನಡುವೆ ನಡೆಯಬೇಕಾಗುತ್ತದೆ. ಅಂದರೆ ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ಕೂಡ ಮದುವೆ ಮುಂತಾದ ಕಾರ್ಯಕ್ರಮಗಳ ನೆವದಿಂದ ನಡೆಯುವುದು ಸಾಧ್ಯವಿಲ್ಲ. ಮೊದಲು ದೊಡ್ಡ ಮದುವೆ ಇತ್ಯಾದಿ ಕಾರ್ಯಕ್ರಮಗಳು ಎಕಾನಮಿ ಬೂಸ್ಟಿಂಗ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು.
ಸೋಂಕಿತರಿಗೆ ಆಯಾ ತಾಲೂಕಿನಲ್ಲಿಯೇ ಚಿಕಿತ್ಸೆ..?
- ಲಾಕ್‌ಡೌನ್ ಎಂಬುದು ಇನ್ನೂ ಒಂದು ವರ್ಷ ಮುಂದುವರಿಯಬಹುದು. ಆದರೆ ಹೆಚ್ಚಿನ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬಹುದು. ಆದರೆ ತುಂಬ ಜನ ಸೇರುವ ತಾಣಗಳು ಓಪನ್ ಆಗಲಿಕ್ಕಿಲ್ಲ. ಸಿನಿಮಾ ಥಿಯೇಟರ್, ರೈಲು, ಮಾಲ್‌ಗಳಲ್ಲಿ ಜನಜಂಗುಳಿ ಇಲ್ಲದಂತೆ ನೋಡಿಕೊಳ್ಳುವ ವ್ಯವಸ್ಥೆಗಳು ಬರಬಹುದು. ಲಾಕ್‌ಡೌನ್ ಆಗಾಗಾ ಹಾಕಿ ತೆಗೆಯುವ ಕ್ರಮ ನಡೆದೀತು.
- ನಮ್ಮ ದೇಶದಲ್ಲಿ ಇರುವ ಆರೋಗ್ಯ ಸೇವೆಗೆ ತನ್ನದೇ ಆದ ಮಿತಿ ಇದೆ. ಇದು ಕೆಲವೇ ಮಂದಿಗೆ ಮಾತ್ರ ಕೋವಿಡ್ ಸೋಂಕು ಚಿಕಿತ್ಸೆಯೆ ಸೇವೆಯನ್ನು ಕೊಡಬಲ್ಲದು. ತುಂಬಾ ಮಂದಿಗೆ ಒಂದೇ ಬಾರಿಗೆ ಸೋಂಕು ತಗುಲಿದರೆ ಚಿಕಿತ್ಸೆ ಕಷ್ಟವಾದೀತು. ಆಗ ಆಸ್ಪತ್ರೆಗಳ ನೆಲದಲ್ಲೂ ಚಾಪೆ ಹಾಕಿ ಸೋಂಕಿತರಿಗೆ ಚಿಕಿತ್ಸೆ ನೀಡುವ ದೃಶ್ಯ ಕಂಡುಬಂದೀತು.
35 ದಿನಗಳ ಬಳಿಕ ವುಹಾನ್‌ನಲ್ಲಿ ಮತ್ತೆ ಸೋಂಕು!
- ನಾವು ಇನ್ನೂ ಹೆಚ್ಚಿನ ಸುರಕ್ಷತೆಯ ವ್ಯವಸ್ಥೆಯನ್ನು ಮನೆ ಮನೆಯಲ್ಲಿ ಹಾಗೂ ಹೊರಗೆ ಹೋಗುವಾಗ ಮಾಡಿಕೊಳ್ಳಬೇಕಾದೀತು. ಯಾಕೆಂದರೆ ನಿಮ್ಮ ಸುರಕ್ಷತೆ ನಿಮ್ಮದೇ ಕೈಯಲ್ಲಿದೆ ಎಂದು ಪ್ರಧಾನಿ ಹೇಳಿಬಿಟ್ಟಿದ್ದಾರೆ.