Health Tips : ಚಳಿಗಾಲದಲ್ಲಿ ಹೆಚ್ಚಾಗುತ್ತೆ ಮೈಗ್ರೇನ್, ಓಡಿಸಲು ಹೀಗ್ ಮಾಡಿದ್ರೂ ಓಕೆ!

By Suvarna News  |  First Published Oct 20, 2023, 7:00 AM IST

ನಿಧಾನವಾಗಿ ಚಳಿಗಾಲ ಶುರುವಾಗ್ತಿದೆ. ತಣ್ಣನೆಯ ಗಾಳಿ, ಮೈಕೊರೆಯುವ ಚಳಿ ತಲೆಯನ್ನು ಭಾರಗೊಳಿಸ್ತಿದೆ. ಮೈಗ್ರೇನ್ ಹೊಂದಿರುವವರಿಗೆ ಈ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗುತ್ತೆ. ಅದಕ್ಕೆ ಕಾರಣ ಹಾಗೂ ರಕ್ಷಣೆ ಇಲ್ಲಿದೆ. 
 


ಸುತ್ತಲಿನ ವಾತಾವರಣ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಬೇರೆ ಬೇರೆ ರೀತಿಯ ತೊಂದರೆಗಳು, ಖಾಯಿಲೆಗಳು ಮನುಷ್ಯರನ್ನು ಬಾಧಿಸುತ್ತವೆ. ಮಳೆಗಾಲದಲ್ಲಿ ಜ್ವರ, ನೆಗಡಿ ಮುಂತಾದವು ಸಾಮಾನ್ಯವಾದರೆ ಚಳಿಗಾಲದಲ್ಲಿ ಶೀತ, ತಲೆನೋವು ಮತ್ತು ಚರ್ಮದ ಸಮಸ್ಯೆಗಳು ಉಂಟಾಗುತ್ತದೆ.

ಚಳಿಗಾಲ (Winter) ದ ಸಮಯದಲ್ಲಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಚಳಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿನ ಇಳಿಕೆಯಾಗುವ ಕಾರಣ ಫ್ಲೂ ನಂತಹ ವೈರಸ್ ಗಳು ಉತ್ಪತ್ತಿಯಾಗುತ್ತವೆ. ಈ ವೈರಸ್ ಗಳು ತಲೆನೋವಿ (Headache) ನ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಚಳಿ ಹೆಚ್ಚಾದಂತೆ ಮೈಗ್ರೇನ್ (Migraine ) ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಮೈಗ್ರೇನ್ ಹೊಂದಿರುವವರಿಗೆ ತಲೆಯ ಅರ್ಧಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ ಅನೇಕ ಮಂದಿ ಯುವಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಳಿಗಾಲದಲ್ಲಿ ಮೈಗ್ರೇನ್ ಹೆಚ್ಚಲು ಕಾರಣ ಮತ್ತು ಮೈಗ್ರೇನ್ ಸಮಸ್ಯೆಗೆ ಪರಿಹಾರ ಏನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

Tap to resize

Latest Videos

ಮಲಗುವ ಸಮಯ ತಡವಾದಷ್ಟು ಹೃದ್ರೋಗ ಸಾಧ್ಯತೆ ಹೆಚ್ಚು?

ಚಳಿ ಹೆಚ್ಚಾದಂತೆ ಮೈಗ್ರೇನ್ ಕೂಡ ಹೆಚ್ಚಾಗುತ್ತೆ : ಡಿಜಿಟಲ್ ಯುಗದಲ್ಲಿ ತಲೆನೋವು ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಮೊಬೈಲ್, ಟಿವಿ ಹಾಗೂ ಎಲ್ ಇ ಡಿ ಸ್ಕ್ರೀನ್ ಗಳಿಂದಾಗಿ ಅನೇಕ ಮಂದಿ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವೊಮ್ಮೆ ವಾತಾವರಣ ಕಾರಣದಿಂದಲೂ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗೇ ಮೈಗ್ರೇನ್ ಸಮಸ್ಯೆ ಹೊಂದಿರುವವರಿಗೆ ಕೂಡ ಚಳಿಗಾಲದಲ್ಲಿ ಬಹಳ ಸಮಸ್ಯೆ ಎದುರಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಚಳಿಗಾಲದಲ್ಲಿನ ವಾತಾವರಣ ಮೈಗ್ರೇನ್ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ವಿಪರೀತ ಚಳಿ ಮತ್ತು ಶುಷ್ಕತೆಯ ಕಾರಣದಿಂದ ತಲೆನೋವಿನ ಸಮಸ್ಯೆ ಹೆಚ್ಚುತ್ತದೆ.

ಯಾಕೋ ಮೂಡಿಲ್ಲ ಅಂತ ಕೂರಬೇಡಿ, ಈ ಫುಡ್ ಬೇಗ ಬೇಗ ತಿನ್ಬಿಡಿ!

ಬಿಸಿಲಿನ ಕೊರತೆಯಿಂದ ಮೈಗ್ರೇನ್ ಸಮಸ್ಯೆ : ಚಳಿಗಾಲದಲ್ಲಿ ಬಿಸಿಲಿನ ಕೊರತೆ ಹೆಚ್ಚಿರುತ್ತದೆ. ಬಿಸಿಲಿನ ಕೊರತೆಯಿಂದಾಗಿಯೂ ಮೈಗ್ರೇನ್ ಹೆಚ್ಚುತ್ತದೆ. ಬಿಸಿಲಿನ ಕೊರತೆಯಿಂದಾಗಿ ಮೆದುಳಿನಲ್ಲಿ ಸಿರೊಟೋನಿನ್ ರಾಸಾಯನಿಕವು ಅಸಮತೋಲನವಾಗುತ್ತದೆ. ಈ ರಾಸಾಯನಿಕದ ಅಸಮತೋಲನದಿಂದಾಗಿ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಹೆಚ್ಚಾಗುತ್ತದೆ. ಬಿಸಿಲಿನ ಕೊರತೆಯು ದೇಹದ ಸಿರ್ಕಾಡಿಯನ್ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಸಿರ್ಕಾಡಿಯನ್ ಕೊರತೆಯಿಂದ ನಿದ್ರೆಯ ಸಮಸ್ಯೆ ಎದುರಾಗುತ್ತದೆ. ಅನಿದ್ರೆಯ ಕಾರಣದಿಂದಲೂ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಗಳು ಉಂಟಾಗುತ್ತದೆ.

ಮೈಗ್ರೇನ್ ನಿಂದ ದೂರವಿರಲು ಹೀಗೆ ಮಾಡಿ : ಆಹಾರ ಕ್ರಮ ಹಾಗೂ ಬದಲಾದ ಜೀವನಶೈಲಿಯಿಂದ ತಲೆನೋವಿನ ಸಮಸ್ಯೆ ಹೆಚ್ಚುತ್ತದೆ. ಅತಿಯಾದ ಟಿವಿ, ಮೊಬೈಲ್ ವೀಕ್ಷಣೆ, ಆಲ್ಕೋಹಾಲ್, ಕಾಫಿ ಸೇವನೆ ಅಥವಾ ಪ್ರಕಾಶಮಾನವಾದ ಬೆಳಕು, ಹೆಚ್ಚಿನ ಗದ್ದಲ, ವಾಸನೆ ಮತ್ತು ಕೆಲವು ಆಹಾರಗಳು ತಲೆನೋವು ಹಾಗೂ ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸುತ್ತವೆ.  ಕೆಲವು ಸುಲಭ ವಿಧಾನಗಳನ್ನು ಅನುಸರಿಸುವುದರಿಂದ ಚಳಿಗಾಲದಲ್ಲಿ ತಲೆದೋರುವ ಮೈಗ್ರೇನ್ ನಂತಹ ಸಮಸ್ಯೆಗಳಿಂದ ದೂರವಾಗಬಹುದು. ಚಳಿಗಾಲದಲ್ಲಿ ಹೆಚ್ಚು ಚಳಿ ಇರೋದ್ರಿಂದ ಮೊದಲು ಚಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಅನಾರೋಗ್ಯ ಉಂಟುಮಾಡುವ ವೈರಸ್ ನಿಂದ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ವೈರಸ್ ಗಳಿಂದ ಬಚಾವಾಗಲು ನಾವು ನಮ್ಮ ಜೀವನಶೈಲಿ ಹಾಗೂ ಆಹಾರಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ನಿಯಮಿತವಾಗಿ ವ್ಯಾಯಾಮವನ್ನು ಮಾಡಿ ಶರೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರಿಂದಲೂ ಮೈಗ್ರೇನ್ ನಿಂದ ದೂರವಿರಬಹುದು. ಇದರ ಹೊರತಾಗಿ ಶರೀರದಲ್ಲಿ ಸಿರೊಟೋನಿನ್ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಸಿರೊಟೋನಿನ್ ಮೈಗ್ರೇನ್ ಅಪಾಯವನ್ನು ಕಡಿಮೆಮಾಡುತ್ತದೆ. ಚಳಿಗಾಲದಲ್ಲಿ ತಲೆಯನ್ನು ಪೂರ್ತಿಯಾಗಿ ಕವರ್ ಮಾಡಿಕೊಳ್ಳಿಬೇಕು. ಶರೀರವನ್ನು ಹೆಚ್ಚು ಬೆಚ್ಚಗೆ ಇಡುವುದರಿಂದಲೂ ಮೈಗ್ರೇನ್ ನಿಂದ ದೂರವಿರಬಹುದು. ಮೈಗ್ರೇನ್ ಸಮಸ್ಯೆ ಚಿಕ್ಕದಿರುವಾಗಲೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಮೈಗ್ರೇನ್ ಅಂಗವೈಕಲ್ಯದಂತಹ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.

click me!