Health Tips : ಸದ್ದಿಲ್ಲದೆ ಬರುವ ಈ ಖಾಯಿಲೆ ತುಂಬಾ ಅಪಾಯಕಾರಿ
ನಮ್ಮ ದೇಹದಲ್ಲಿ ಏನಾಗ್ತಿದೆ ಅನ್ನೋದು ಅನೇಕ ಬಾರಿ ನಮಗೆ ತಿಳಿಯೋದಿಲ್ಲ. ಸಣ್ಣಪುಟ್ಟ ಲಕ್ಷಣಗಳನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಆದ್ರೆ ಇದೇ ಮುಂದೆ ಸಾವಿಗೆ ದಾರಿ ಮಾಡಿಕೊಡುತ್ತದೆ. ಅತಿ ಕಡಿಮೆ ರೋಗ ಲಕ್ಷಣ ತೋರಿಸುವ ರೋಗಗಳಲ್ಲಿ ಒಂದಾದ ಬ್ರುಗಾಡಾ ಸಿಂಡ್ರೋಮ್ ಸಾವು ತರುವ ಖಾಯಿಲೆ.
ಈಗಿನ ದಿನಗಳಲ್ಲಿ ಹೃದಯಾಘಾತ ಭಯ ಹುಟ್ಟಿಸಿದೆ. ಒಂದು ವಯಸ್ಸಿನ ನಂತ್ರ ಕಾಡ್ತಿದ್ದ ಈ ಹೃದಯಾಘಾತ ಈಗ ಎಳೆ ವಯಸ್ಸಿನವರನ್ನು ಬಲಿ ಪಡೆಯುತ್ತಿದೆ. 2022ರಲ್ಲಿ ಪ್ರಸಿದ್ಧ ಕಲಾವಿದರು ಇದಕ್ಕೆ ಬಲಿಯಾಗಿದ್ದಾರೆ. ಆರೋಗ್ಯವಾಗಿದ್ದ, ಡಯಟ್ ಆಹಾರ ತೆಗೆದುಕೊಳ್ತಿದ್ದ, ನಿಯಮಿತವಾಗಿ ವ್ಯಾಯಾಮ ಮಾಡ್ತಿದ್ದವರಿಗೆ ಹೃದಯಾಘಾತವಾಗಿರುವುದು ವೈದ್ಯರಿಗೂ ಶಾಕ್ ನೀಡಿದೆ.
ನಾವು ವ್ಯಾಯಾಮ (Exercise) ಮಾಡ್ತಿದ್ರೆ ನಮ್ಮ ಹೃದಯ (Heart ) ಆರೋಗ್ಯವಾಗಿ ಕೆಲಸ ಮಾಡ್ತಿದೆ ಎಂದು ಭಾವಿಸಬೇಡಿ. ಹೃದಯದ ಮೇಲೆ ಒತ್ತಡ (Stress) ಬಿದ್ದಾಗ, ರಕ್ತನಾಳಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ, ರಕ್ತನಾಳಗಳ ಕುಗ್ಗುವಿಕೆಯಿಂದ ನಮಗೆ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ. ಹೃಯದ ಸರಿಯಾಗಿ ಕೆಲಸ ಮಾಡದೆ ಹೋದಾಗ ನಮಗೆ ಕೆಲ ಅನುಭವವಾಗುತ್ತದೆ. ಆದ್ರೆ ನಾವದನ್ನು ನಿರ್ಲಕ್ಷ್ಯ ಮಾಡ್ತೇವೆ. ಹೃದಯಾಘಾತಕ್ಕೆ ಇವಷ್ಟೇ ಅಲ್ಲ ಬ್ರುಗಾಡಾ (Brugada) ಸಿಂಡ್ರೋಮ್ ಕೂಡ ಕಾರಣವಾಗಬಹುದು. ನಾವಿಂದು ನಿಮಗೆ ಬ್ರುಗಾಡಾ ಸಿಂಡ್ರೋಮ್ ಬಗ್ಗೆ ಮಾಹಿತಿಯನ್ನು ನೀಡ್ತೇವೆ.
KIDS HEALTH : 9-5-2-1-0 ಸೂತ್ರದ ಬಗ್ಗೆ ನಿಮಗೆ ಗೊತ್ತಾ?
ಬ್ರುಗಾಡಾ ಸಿಂಡ್ರೋಮ್ ಅಂದ್ರೇನು ? : ಹೃದಯದಲ್ಲಿ ಕುಹರದ ಕಂಪನ ಎಂಬ ಅಪಾಯಕಾರಿ ಲಯ ರೂಪುಗೊಳ್ಳುತ್ತದೆ. ಇದು ಹೃದಯದಿಂದ ಮೆದುಳಿಗೆ ಪೂರೈಕೆಯಾಗುವ ರಕ್ತವನ್ನು ತಡೆಯುತ್ತದೆ. ಆಗ ಹಠಾತ್ ಮೂರ್ಛೆ ಹೋಗುವ ಸಾಧ್ಯತೆಯಿರುತ್ತದೆ. ಕಾರ್ಡಿಯಕ್ ಅರೆಸ್ಟ್ ಕೂಡ ಕಾಣಿಸಿಕೊಳ್ಳುವ ಜೊತೆಗೆ ರೋಗಿ ಸಾವನ್ನಪ್ಪಬಹುದು. ಇದನ್ನು ಅನುವಂಶಿಕ ಖಾಯಿಲೆ ಎನ್ನಲಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಇದು ಮುಂದುವರೆಯುತ್ತದೆ. ಕೆಲವರಿಗೆ ಅನುವಂಶಿಕ ರೂಪ ಹೊಂದಿರುವುದಿಲ್ಲ. ಅಜ್ಞಾತ ಕಾರಣದಿಂದ ಉಂಟಾಗಬಹುದು. ಕೆಲವು ಮಾನಸಿಕ ಆರೋಗ್ಯ ಅಥವಾ ಹೃದಯ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಔಷಧಿಗಳಿಂದ ಉಂಟಾಗಬಹುದು. ಮಧ್ಯವಯಸ್ಕರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳತ್ತದೆ. ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಪುರುಷರಲ್ಲಿ ಇದು ಹೆಚ್ಚು ಎನ್ನಲಾಗಿದೆ.
ಬ್ರುಗಾಡಾ ಸಿಂಡೋಮ್ ಹೊಂದಿರುವ 10 ರೋಗಿಗಳಲ್ಲಿ 8 ಪುರುಷರಾದ್ರೆ ಇಬ್ಬರು ಮಹಿಳೆಯರಿರುತ್ತಾರೆ. ಹಾಗೆ ಕಾರ್ಡಿಯಕ್ ಅರೆಸ್ಟ್ ಗೆ ಒಳಗಾದ ನಾಲ್ಕು ರೋಗಿಯಲ್ಲಿ ಒಬ್ಬರು ಬ್ರುಗಾಡಾ ಸಿಂಡ್ರೋಮ್ ದಿಂದ ಬಳಲುತ್ತಿರುತ್ತಾರೆಂದು ವೈದ್ಯರು ಹೇಳಿದ್ದಾರೆ.
ಬ್ರುಗಾಡಾ ಸಿಂಡ್ರೋಮ್ ರೋಗ ಲಕ್ಷಣ : ಇದನ್ನು ಪತ್ತೆ ಹಚ್ಚುವುದು ಬಹಳ ಕಠಿಣ ಕೆಲಸವಾಗಿದೆ. ಸುಮಾರು 70ರಷ್ಟು ಮಂದಿಗೆ ಯಾವುದೇ ರೋಗ ಲಕ್ಷಣವಿರುವುದಿಲ್ಲ. 30 – 40 ವರ್ಷ ದಾಟಿದ ವ್ಯಕ್ತಿಗಳಲ್ಲಿ ಇದ್ರ ರೋಗ ಲಕ್ಷಣ ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳುತ್ತದೆ. ಜಪಾನ್ ಮತ್ತು ಆಗ್ನೇಯ ಏಷ್ಯಾದಲ್ಲಿ ಇದು ಹೆಚ್ಚು ಎನ್ನಲಾಗಿದೆ. ಅಸಹಜ ಹೃದಯ ಬಡಿತ ಈ ರೋಗ ಲಕ್ಷಣದ ಮೊದಲ ಚಿಹ್ನೆಯಾಗಿದೆ. ಆರಂಭದಲ್ಲಿಯೇ ಹೃದಯ ಬಡಿತದ ಹೆಚ್ಚಳವನ್ನು ಗುರುತಿಸಿದ್ರೆ ಚಿಕಿತ್ಸೆ ಸುಲಭವಾಗುತ್ತದೆ. ಮೂರ್ಛೆ ಹೋಗುವುದು, ತಲೆತಿರುಗುವಿಕೆ, ಉಸಿರಾಟದ ತೊಂದರೆ ಇದ್ರ ಲಕ್ಷಣವಾಗಿದೆ. ಕಾರ್ಡಿಯಕ್ ಅರೆಸ್ಟ್ ಕೊನೆಯ ಲಕ್ಷಣವಾಗಿದೆ. ಬ್ರುಗಾಡಾ ಸಿಂಡ್ರೋಮ್ ಹೊಂದಿರುವ ಕೆಲವು ಶಿಶುಗಳು ನಿದ್ರೆಯಲ್ಲಿಯೇ ಸಾವನ್ನಪ್ಪಿದ ಉದಾಹರಣೆಯಿದೆ. ಪಾಲಕರು ಮಕ್ಕಳ ಈ ಲಕ್ಷಣವನ್ನು ಹೆಚ್ಚಾಗಿ ಗಮನಿಸೋದಿಲ್ಲ. ಕೊನೆಯಲ್ಲಿ ತಿಳಿದು ಪ್ರಯೋಜನವಿಲ್ಲದಂತಾಗುತ್ತದೆ.
Lung Cancer: ಹೇಗೆ ಬೇಕಾದರೂ ಬರಬಹುದು, ಬಾರದಂತೆ ಹೀಗ್ ಮಾಡಿ!
ಬ್ರುಗಾಡಾ ಸಿಂಡ್ರೋಮ್ ತಡೆಯುವ ವಿಧಾನ : ಆರಂಭದಲ್ಲಿಯೇ ರೋಗ ಪತ್ತೆಯಾದ್ರೆ ಚಿಕಿತ್ಸೆ ನೀಡಬಹುದಾಗಿದೆ. ಇಸಿಜಿ ಮೂಲಕ ರೋಗವನ್ನು ಪತ್ತೆ ಹಚ್ಚಬೇಕಾಗುತ್ತದೆ. ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ ಎಂದು ಕರೆಯಲ್ಪಡುವ ವೈದ್ಯಕೀಯ ಸಾಧನವನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಸಣ್ಣ ಸಾಧನದ ಉದ್ದೇಶವು ರೋಗಿಯ ಹೃದಯದ ಲಯವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅಸಹಜ ಹೃದಯ ಬಡಿತ ಪತ್ತೆಯಾದಾಗ ವಿದ್ಯುತ್ ಆಘಾತಗಳನ್ನು ನೀಡುವುದು. ಆಘಾತಗಳು ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರುತ್ತವೆ. ಹೆಚ್ಚು ಅಪಾಯವಿಲ್ಲದ ವ್ಯಕ್ತಿಗೆ ಮಾತ್ರೆಗಳನ್ನು ನೀಡಲಾಗುತ್ತದೆ. ಬ್ರುಗಾಡಾ ಚಿಕಿತ್ಸೆಗೆ ಬಳಸುವ ಐಸಿಡಿ (ICD) ಅತ್ಯಂತ ದುಬಾರಿ ಸಾಧನವಾಗಿದೆ. ಭಾರತದಲ್ಲಿ ಅಳವಡಿಕೆಯ ವೆಚ್ಚ 2 ಲಕ್ಷದಿಂದ 20 ಲಕ್ಷದವರೆಗೆ ಇದೆ.