ಹೆಡ್‌ಫೋನ್ ಬಳಕೆ, ಪಾರ್ಟಿಯಲ್ಲಿ ಅಬ್ಬರದ ಶಬ್ದದ ಕಾರಣ ವಿಶ್ವದ 135 ಕೋಟಿ ಜನರಿಗೆ ಕಿವುಡುತನದ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ. ಡಬ್ಲ್ಯುಎಚ್‌ಒ 19000 ಯುವಕರ ಸರ್ವೇ ನಡೆಸಿದ್ದು, ಅದರಲ್ಲಿ ಈ ಆತಂಕಕಾರಿ ಅಂಶ ಬಯಲಾಗಿದೆ.
ಪ್ಯಾರಿಸ್: ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಶಬ್ದದೊಂದಿಗೆ ಹೆಡ್‌ಫೋನ್ ಬಳಕೆ ಮತ್ತು ಅಬ್ಬರದ ಸಂಗೀತ (Music) ಕೇಳುತ್ತಿರುವುದರ ಪರಿಣಾಮ ಜಗತ್ತಿನಾದ್ಯಂತ 135 ಕೋಟಿಯಷ್ಟುಯುವ ಜನರು (Youths) ತಮ್ಮ ಶ್ರವಣ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ ಎಂಬ ಕಳವಳಕಾರಿ ಮಾಹಿತಿಯನ್ನು ಅಧ್ಯಯನ (Study) ವರದಿಯೊಂದು ಪ್ರಕಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೇತೃತ್ವದಲ್ಲಿ ನಡೆಸಲಾದ ಈ ಅಧ್ಯಯನ ವರದಿಯನ್ನು ‘ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್’ನಲ್ಲಿ ಪ್ರಕಟಿಸಲಾಗಿದೆ. ಕಳೆದ 2 ದಶಕಗಳ ಅವಧಿಯಲ್ಲಿ 12-34ರ ವಯೋಮಾನದ 19000ಕ್ಕೂ ಹೆಚ್ಚು ಯುವಕ-ಯುವತಿಯರ ಅಭಿಪ್ರಾಯ ಆಧರಿಸಿ ಇಂಗ್ಲಿಷ್, ಸ್ಪಾ್ಯನಿಷ್, ಫ್ರೆಂಚ್ ಮತ್ತು ರಷ್ಯನ್ ಭಾಷೆಯಲ್ಲಿ ಪ್ರಕಟವಾದ 33 ಅಧ್ಯಯನ ವರದಿಗಳನ್ನು ಆಧರಿಸಿ ಈ ಹೊಸ ವರದಿಯನ್ನು (Report) ಸಿದ್ಧಪಡಿಸಲಾಗಿದೆ.
World Hearing Day: ಯಾವಾಗ್ಲೂ ಇಯರ್ ಫೋನ್ ಹಾಕ್ಕೊಳ್ತೀರಾ ? ಕಿವಿಯೇ ಕೇಳಲ್ಲ ಹುಷಾರ್..!
ವರದಿಯಲ್ಲೇನಿದೆ ?
ಶೇ.24ರಷ್ಟುಯುವಜನರು ಸ್ಮಾರ್ಚ್‌ಫೋನ್ ಸೇರಿದಂತೆ ವಿವಿಧ ಉಪಕರಣಗಳೊಂದಿಗೆÜ ಹೆಡ್‌ಫೋನ್ ಅನ್ನು ಸುರಕ್ಷಿತವಲ್ಲದ ರೀತಿಯಲ್ಲಿ ಬಳಸುವ ಅಭ್ಯಾಸ (Habit)ಗಳನ್ನು ಹೊಂದಿರುವುದು ತಿಳಿದುಬಂದಿದೆ. ಜೊತೆಗೆ ಶೇ.48ರಷ್ಟುಜನರು ನೈಟ್‌ಕ್ಲಬ್ ಹಾಗೂ ಕಾನ್ಸರ್ಚ್‌ಗಳಲ್ಲಿ ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿನ ತೀವ್ರತೆಯ ಶಬ್ದ (Sound)ವನ್ನು ಆಲಿಸುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅಂದಾಜು 67 ಲಕ್ಷದಿಂದ 135 ಕೋಟಿ ಜನರು ಶ್ರವಣ ಶಕ್ತಿಯನ್ನು ಕಳೆದುಕೊಳ್ಳುವ ಅಪಾಯ (Danger) ಎದುರಿಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಈ ಸಮಸ್ಯೆಯಿಂದ ಪಾರಾಗಲು ಹೆಡ್‌ಫೋನ್ ಅನ್ನು ಕಡಿಮೆ ಶಬ್ದದಲ್ಲಿ ಅಲ್ಪಾವಧಿಗೆ ಮಾತ್ರ ಕೇಳಬೇಕು, ಅಧಿಕ ಗದ್ದಲವಿರುವ ವಾತಾವರಣಗಳಿಂದ ಸಾಧ್ಯವಾದಷ್ಟುದೂರವಿರಬೇಕು ಎಂದು ತಜ್ಞರು (Experts) ಸಲಹೆ ನೀಡಿದ್ದಾರೆ. ಅಲ್ಲದೇ ಯುವಜನರು ತಮ್ಮ ಶ್ರವಣ ಅಭ್ಯಾಸದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಸರ್ಕಾರ ಹಾಗೂ ಧ್ವನಿ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸುವವರು ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ (Suggestion) ಮಾಡಿದೆ.
ಸ್ವಯಂ ಚಿಕಿತ್ಸೆಗೆ Sound Healing Therapy ಮಾಡಿ ನೋಡಿ!
ಕಿವುಡುತನದ ಭೀತಿ ತಡೆಯೋದು ಹೇಗೆ?
- ಹೆಡ್‌ಫೋನ್ ಅನ್ನು ಕಡಿಮೆ ಶಬ್ದದಲ್ಲಿ ಅಲ್ಪಾವಧಿಗೆ ಮಾತ್ರ ಕೇಳಬೇಕು
- ಹೆಡ್‌ಫೋನ್ ಬಳಕೆ ವೇಳೆ ಶಬ್ದಮಟ್ಟ ಅಳೆಯುವ ಆ್ಯಪ್ ಬಳಸಬೇಕು
- ಅಧಿಕ ಗದ್ದಲದ ವಾತಾವರಣಗಳಿಂದ ಸಾಧ್ಯವಾದಷ್ಟುದೂರವಿರಬೇಕು
- ನೈಟ್‌ಕ್ಲಬ್, ಕಾರ್ನಟ್ ವೇಳೆ ಇಯರ್‌ಪ್ಲಗ್ ಬಳಸಿ ಹಾನಿ ತಪ್ಪಿಸಬಹುದು
- ಹೆಡ್‌ಪೋನ್ ಉತ್ಪಾದಕಾ ಕಂಪನಿಗಳೇ ಈ ಕುರಿತು ಕ್ರಮ ಕೈಗೊಳ್ಳಬೇಕು