ಪ್ರಜ್ವಲ್ ಜೈಲಿನಿಂದ ಬರೋದು ಯಾವಾಗ ಅನ್ನೋದನ್ನ ಹೇಳಿ ಒಟ್ಟಿಗೆ ಸೇರಿ ಸ್ವಾಗತಿಸೋಣ ಎಂದ ಸೂರಜ್ ರೇವಣ್ಣ!

Published : Mar 09, 2025, 11:44 AM ISTUpdated : Mar 09, 2025, 11:47 AM IST
ಪ್ರಜ್ವಲ್ ಜೈಲಿನಿಂದ ಬರೋದು ಯಾವಾಗ ಅನ್ನೋದನ್ನ ಹೇಳಿ ಒಟ್ಟಿಗೆ ಸೇರಿ ಸ್ವಾಗತಿಸೋಣ ಎಂದ ಸೂರಜ್ ರೇವಣ್ಣ!

ಸಾರಾಂಶ

ಜೈಲುಪಾಲಾಗಿರೋ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಿಡುಗಡೆಯ ಬಗ್ಗೆ ಎಂಎಲ್‌ಸಿ ಸೂರಜ್ ರೇವಣ್ಣ ಹೇಳಿಕೆ ನೀಡಿದ್ದಾರೆ. ಸರ್ಕಾರ ಬದಲಾವಣೆಯ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. 

ಹಾಸನ: ಜೈಲಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಯಾವಾಗ ಹೊರಗೆ ಬುರತ್ತಾರೆ ಎಂಬುದರ ಬಗ್ಗೆ ಸೋದರ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಏನು ತಲೆಕೆಡೆಸಿಕೊಳ್ಳಬೇಡಿ. ನಾವು, ನೀವು ಎಲ್ಲರೂ ಒಟ್ಟಿಗೆ ಸ್ವಾಗತ ಮಾಡೋಣ. ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ. ಮುಂದಕ್ಕೂ ರಾಜಕೀಯ ಏನು ಅನ್ನೋದು ನನಗೂ ಗೊತ್ತಿದೆ ಎಂದು ಸೂರಜ್ ರೇವಣ್ಣ ಹೇಳಿಕೆ ನೀಡಿದ್ದಾರೆ. 

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ಯುವಕ ಧನು ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸೂರಜ್ ರೇವಣ್ಣ, ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಗುತ್ತೆ ಎಂದು ಭವಿಷ್ಯ ನುಡಿದರು. ಕೆಲವೇ ತಿಂಗಳಲ್ಲಿ ಸರ್ಕಾರ ಬದಲಾಗುತ್ತದೆ. ಆನಂತರ ಅಲ್ಲಿದ್ದವರೆಲ್ಲರೂ ಹೆಚ್‌ಡಿ ರೇವಣ್ಣ ಜೈ ಅಂತಾರೆ ಎಂದು ಸೂರಜ್ ಹೇಳಿದರು. 

ಕ್ರಿಕೆಟ್ ಪಂದ್ಯಾವಳಿಯಿಂದ ಒಂದು ಸಂಘಟನೆ ಮನೋಭಾವ ನಿಮ್ಮಲ್ಲಿ ಬರಲ್ಲ. ನಾವು ದಿನ ಬೆಳಗ್ಗೆ ಆದರೆ ನಿಮ್ಮ ಜೊತೆ ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತೇವೆ. ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದರು. ಈಗೀನ ಜನರೇಷನ್‌ನಲ್ಲಿ ಎಲ್ಲಾ ಹಳ್ಳಿಗಳಲ್ಲೂ ದೇವಾಲಯ ನಿರ್ಮಾಣ ಮಾಡ್ತಿದ್ದಾರೆ. ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತ ಯೋಚನೆ ಮಾಡಬೇಕು. ಶಾಸ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರನ್ನು ಸೂರಜ್ ರೇವಣ್ಣ ಪ್ರಶ್ನೆ ಮಾಡಿದರು. 

ಯುವಕರು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಒಂದು ಕಡೆ ಇರಬೇಕು. ಇನ್ನೊಂದು ನಾಲ್ಕೈದು ತಿಂಗಳಲ್ಲಿ ಸರ್ಕಾರ ಚೇಂಜ್ ಆಗುತ್ತದ. ಆ ಕಡೆ ಹೋಗಿರುವವರ ಕಥೆ ಏನು ಎಂದು ಸೂರಜ್ ರೇವಣ್ಣ ವ್ಯಂಗ್ಯ ಮಾಡಿದರು. 

ಇದನ್ನೂ ಓದಿ: ಪ್ರಜ್ವಲ್‌- ಎಚ್‌.ಡಿ. ರೇವಣ್ಣ ವಿರುದ್ಧ ಜಾರ್ಜ್‌ಶೀಟ್‌: ಮನೆಗೆಲಸದ ಒಬ್ಬಳೇ ಮಹಿಳೆಗೆ ತಂದೆಯಿಂದ ಕಿರುಕುಳ, ಮಗನಿಂದ ರೇಪ್‌!

ಕಾಂಗ್ರೆಸ್‌ಗೆ ದೇವೇಗೌಡರ ತಿರುಗೇಟು
ಹಾಸನದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡ ಸಮಾವೇಶಕ್ಕೆ ಬದಲಾಗಿ ಜೆಡಿಎಸ್ ಸಮಾವೇಶ ಮಾಡಲಾಗುತ್ತದೆ. ಕೈ ನಾಯಕರು ಇಂಥ 10 ಸಮಾವೇಶ ಮಾಡಿದರೂ ನಾವು (ಜೆಡಿಎಸ್) ಎದುರಿಸುತ್ತೇವೆ. ಜೆಡಿಎಸ್ ಕಾರ್ಯಕರ್ತರು, ಸಂಘಟನೆ ಜತೆಗಿದೆ.  ರಾಜಕೀಯದಲ್ಲಿ ಸೋಲು-ಗೆಲುವುಗಳನ್ನು ಸಮಭಾವದಲ್ಲಿ ಸ್ವೀಕಾರ ಮಾಡಬೇಕು. ಇಂದು ನಮ್ಮನ್ನು ಸೋಲಿಸಿದವರೇ ನಾಳೆ ಗೆಲ್ಲಿಸುತ್ತಾರೆ. ಕಾಂಗ್ರೆಸ್‌ನವರು ನಿನ್ನೆ ಸಭೆ ಮಾಡಿ ಹೋಗಿರಬಹುದು. ಆದರೆ, ಹಾಸನದಲ್ಲಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮಾತನಾಡುತ್ತಾರೆ. ರಾಜಕೀಯವಾಗಿ ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಅಂಥ ಕೂತರು. ಆದರೆ, ಮುಗಿಸಿದ್ರಾ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ಗೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ತಿರುಗೇಟು ನೀಡಿದರು. 

ನಾವು ಎನ್‌ಡಿಎ ಭಾಗವಾಗಿದ್ದು, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಓಡಾಡುತ್ತಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದು, ಪಕ್ಷ, ಶಾಸಕರು, ಕಾರ್ಯಕರ್ತರ ಬಗ್ಗೆ ನೋಡಿಕೊಳ್ಳುವಂತೆ ನಾನೇ ಹೇಳಿದ್ದೇನೆ. ಸೋಮವಾರ ಗೃಹ ಸಚಿವ ಅಮಿತ್ ಶಾ ಅವರನ್ನು ನಿಖಿಲ್ ಭೇಟಿ ಮಾಡುವ ಬಗ್ಗೆ ಗೊತ್ತಿಲ್ಲ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಅಸಮಧಾನಕ್ಕೆ ಕಾರಣ ಇದೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ ಎಂದರು.

ಇದನ್ನೂ ಓದಿ: ದೇವೇಗೌಡರ ಸರ್ಕಾರಿ ಗೆಸ್ಟ್‌ ಹೌಸಲ್ಲೂ ಪ್ರಜ್ವಲ್‌ ಅತ್ಯಾಚಾರ: ಗಂಡನನ್ನು ಕೊಲ್ಲೋದಾಗಿ ಬೆದರಿಸಿ 3 ವರ್ಷ ಬಲಾತ್ಕಾರ..!

PREV
Read more Articles on
click me!

Recommended Stories

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಜೀವಾವಧಿ ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕೋಡಿಮಠಕ್ಕೆ ಗೃಹಸಚಿವ ಪರಂ ರಹಸ್ಯ ಭೇಟಿ; ಕುತೂಹಲ ಕೆರಳಿಸಿದ ಒಂದು ಗಂಟೆಯ ಗೌಪ್ಯ ಮಾತುಕತೆ!