‘ಹಗಲೊತ್ತು ಯಡಿಯೂರಪ್ಪ ಜೊತೆ ಇದ್ರೆ ರಾತ್ರಿ ಕಾಂಗ್ರೆಸ್ ಬೆಂಬಲಿಸ್ತಾರೆ'

Published : Nov 07, 2019, 02:59 PM ISTUpdated : Nov 07, 2019, 03:31 PM IST
‘ಹಗಲೊತ್ತು ಯಡಿಯೂರಪ್ಪ ಜೊತೆ ಇದ್ರೆ ರಾತ್ರಿ ಕಾಂಗ್ರೆಸ್ ಬೆಂಬಲಿಸ್ತಾರೆ'

ಸಾರಾಂಶ

ಸೆಕ್ಯೂಲರ್ ಎನ್ನುವವರೇ ಪಕ್ಷ ಒಡೆಯುವ ಕೆಲಸ ಮಾಡಿದ್ರು. ಕೆಲವರು ಹಗಲೊತ್ತು ಬಿಜೆಪಿ ಬೆಂಬಲಿಗರಾಗಿದ್ರೆ ರಾತ್ರಿ ಹೊತ್ತು ಬಿಜೆಪಿ ಬೆಂಬಲಿಸ್ತಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ. 

ಹಾಸನ (ನ.07): ಕೋಮುವಾದಿ ಪಕ್ಷ ದೂರವಿಡಲು ಸೆಕ್ಯೂಲರ್ ಪಾರ್ಟಿ ಒಂದಾಗಬೇಕು ಎನ್ನುವ ಕಾಂಗ್ರೆಸ್ ಪಕ್ಷದವರು ಸೆಕ್ಯೂಲರ್ ಪಾರ್ಟಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಎಚ್ ಡಿ ರೇವಣ್ಣ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್. ಡಿ.ರೇವಣ್ಣ ನಮ್ಮ ಪಕ್ಷದ ಏಳು ಜನ ಶಾಸಕರನ್ನು ಏನು ಮಾಡಿದರು ಎನ್ನುವುದು ಗೊತ್ತಿದೆ. ಸೆಕ್ಯೂಲರ್ ಪಾರ್ಟಿಯನ್ನು ಎಲ್ಲಿ ಕೊಲ್ಲಬೇಕೋ ಅಲ್ಲಿ ಕೊಂದರು. ಬಳಿಕ ನಮ್ಮನ್ನೇ ತಬ್ಬಿಕೊಂಡು  ಐದು ವರ್ಷ ನೀವೆ ಆಡಳಿತ ಮಾಡಬೇಕು ಎಂದಿದ್ದಾಗಿ ರೇವಣ್ಣ ಹೇಳಿದರು. 
 
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಹೇಗೆ ಪತನವಾಯ್ತು ಎನ್ನುವುದು ಗೊತ್ತಿದೆ. ಕಾಂಗ್ರೆಸ್ ನ‌ ಕೆಲ ಮುಖಂಡರು ಜೆಡಿಎಸ್ ಸಹವಾಸ ಸಾಕು ಎಂದರು ಅವರೇ ಸಹವಾಸ ಸಾಕು ಎಂದರೆ ನಾವು ಸೈಲಾಂಟಾಗಿದ್ದೀವಿ ಎಂದರು. 

ಬಿಜೆಪಿಗೆ ಜೆಡಿಎಸ್ ಬರೆದುಕೊಟ್ಟಿಲ್ಲ. ನಾವು ಬಿಜೆಪಿ ಬೆಂಬಲಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಈಗ ನೆರೆ ಹಾವಳಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಎರಡು ರಾಜಕೀಯ ಪಕ್ಷಗಳು‌ ಹೊಡೆದಾಡಿಕೊಂಡು ಸರ್ಕಾರ ಹೋಗುವುದಾದರೆ ‌ಹೋಗಲಿ ಎಂದರು. 

ಜೆಡಿಎಸ್ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆಯೂ ಪ್ರಸ್ತಾಪಿಸಿದ ರೇವಣ್ಣ, ಒಳ ಒಪ್ಪಂದ ಮಾಡಿಕೊಂಡು ಯಾವ ಕೆಲಸ ಮಾಡಿಸಿಕೊಂಡಿದ್ದೀವಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 
ಜೋಳ ಖರೀದಿ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ ಡಸ್ಟ್ ಬಿನ್ ಗೆ ಹಾಕುತ್ತಾರೆ. ಯಾರೂ ಸಮ್ಮಿಶ್ರ ಸರ್ಕಾರ ತೆಗೆದರೋ ಅವರಿಗೆ ಕಾಮಗಾರಿ ನೀಡುತ್ತಿದ್ದಾರೆ. ಇವರೆಲ್ಲಾ ಹಗಲು ಯಡಿಯೂರಪ್ಪ ಜೊತೆ, ರಾತ್ರಿ ಹೊತ್ತು ಕಾಂಗ್ರೆಸ್ ನಲ್ಲಿ‌ ಇರುತ್ತಾರೆ.  ಬಿಜೆಪಿ ಜೊತೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತುಮಕೂರು, ಮಂಡ್ಯ ಜನತೆ ಕೇಳಿದರೆ ಗೊತ್ತಾಗುತ್ತೆ ಎಂದರು. 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ