ಆ ರಾತ್ರಿಯಿಂದ ವಿಚಿತ್ರ ಘಟನೆಗಳು ಆರಂಭವಾದವು. ಬಾಲಕ ತನ್ನ ಕೊಠಡಿಯಲ್ಲಿ ಯಾರೋ ಕಾಣಿಸುತ್ತಿದ್ದಾರೆ ಎಂದು ಕಿರುಚಾಡಲು ಶುರು ಮಾಡಿದ. ದಿನದಿಂದ ದಿನಕ್ಕೆ ಅವನ ಆರೋಗ್ಯ ಹದಗೆಡತೊಡಗಿತು. ಕೊಠಡಿ ಬದಲಾಯಿಸಿದ ನಂತರ ಸಮಸ್ಯೆ ನಿಂತಂತೆಯೇ ಕಂಡರೂ, ಕೆಲವೇ ದಿನಗಳಲ್ಲಿ ಆತನ ತಮ್ಮನ ಬಾಯಿಂದ ಬಂದ ಮಾತುಗಳು ಇಡೀ ಕುಟುಂಬವನ್ನು ಬೆಚ್ಚಿಬೀಳುವಂತೆ ಮಾಡಿದ್ದವು.
"ನನ್ನ ಜೊತೆ ಕೆಂಪು ಕಣ್ಣಿನ ಅಂಕಲ್ ಇದ್ದಾರೆ... ಅವರು ನನ್ನ ಜೊತೆ ಮಾತನಾಡುತ್ತಾರೆ" ಎಂದು ಚಿಕ್ಕ ಬಾಲಕ ಹೇಳಿದಾಗ ಮನೆಯಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾದರು. ಬಳಿಕ ಒಂದು ರಾತ್ರಿ ಮನೆಯೊಳಗೆ ಕೇಳಿಬಂದ ಭಾರೀ ಹೆಜ್ಜೆಗಳ ಶಬ್ದ, ಆಕಸ್ಮಿಕವಾಗಿ ಆಫ್ ಆದ ಲೈಟ್‌ಗಳು ಮತ್ತು ಬಾಗಿಲಿನ ಬಳಿ ಕಾಣಿಸಿಕೊಂಡ ಕೆಂಪು ಕಣ್ಣುಗಳು ಕುಟುಂಬವನ್ನು ರಾತ್ರೋರಾತ್ರಿ ಮನೆ ಬಿಟ್ಟು ಓಡಿಹೋಗುವಂತೆ ಮಾಡಿತಂತೆ.