ವಿಶ್ವಪ್ರಿಯ ತೀರ್ಥ ಶ್ರೀಗಳ ಜನ್ಮನಕ್ಷತ್ರ ಪ್ರಯುಕ್ತ ಆನ್‌ಲೈನ್‌ನಲ್ಲಿ ಮೇಳೈಸಿದ ಯಕ್ಷಗಾನ

First Published | Jul 4, 2020, 8:04 PM IST

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಅಂಗವಾಗಿ ಮಠದ ಪುರೋಹಿತರಿಂದ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮ ನಡೆಯಿತು. ಅಲ್ಲದೇ ಇದರ ಜತೆಗೆ ಶ್ರೀ ಕೃಷ್ಣ ಮಠದಲ್ಲಿ  ಯಕ್ಷಗಾನ ಮೇಳೈಸಿದ್ದು,  ಆನ್‌ಲೈನ್‌ ಯಕ್ಷಗಾನವನ್ನು ಯೂಟ್ಯೂಬ್‌ನಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಕಲರ್ ಫುಲ್ ಫೋಟೋಗಳು ಇಲ್ಲಿವೆ ನೋಡಿ

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮೇಳೈಸಿದ ಯಕ್ಷಗಾನ
undefined
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಅಂಗವಾಗಿ ಕಲಾವಿದರಿಂದ ಆನ್‌ಲೈನ್‌ ಯಕ್ಷಗಾನ ನಡೆಯಿತು.
undefined

Latest Videos


ಪುರೋಹಿತರಿಂದ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮ ನಡೆಯಿತು. ಅಲ್ಲದೇ ಇದರ ಜತೆಗೆ ಮಠದಲ್ಲಿ ಯಕ್ಷಗಾನ ಮೇಳೈಸಿದೆ
undefined
ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಕೀಚಕವಧೆ ಪ್ರಸಂಗದ ಯಕ್ಷಗಾನ ನಡೆಯಿತು
undefined
ಇದನ್ನು ಯೂಟ್ಯೂಬ್‌ ಲೈವ್‌ನಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
undefined
ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ರಾಜಾಂಗಣಕ್ಕೆ ಆಗಮಿಸಿ ಯಕ್ಷಗಾನವನ್ನು ವೀಕ್ಷಿಸಿದರು.
undefined
ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಗಳ ಜನ್ಮನಕ್ಷತ್ರ ಪ್ರಯುಕ್ತ ಅವರು ಮತ್ತು ಈಶಪ್ರಿಯತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಆಯೋಜನೆಗೊಂಡ ಯಕ್ಷಗಾನದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡವರು ಕಲಾವಿದರು ಮತ್ತು ಬೆರಳೆಣಿಕೆ ಪ್ರೇಕ್ಷಕರು ಮಾತ್ರ.
undefined
click me!