ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆರು ತಾಲೂಕುಗಳಲ್ಲಿ ರಾಜಣ್ಣ ಬೆಂಬಲಿಗರು ಜಯಭೇರಿ ಬಾರಿಸಿದ್ದಾರೆ. 25 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿರುವ ರಾಜಣ್ಣ ಅವರ ಪ್ರಭಾವ ಮುಂದುವರೆದಿದೆ.
ತುಮಕೂರು: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ ತಮ್ಮ ಹಿಡಿತವನ್ನು ಮುಂದುವರಿಸಲಿದ್ದಾರೆ. ಆರು ತಾಲೂಕುಗಳಿಗೆ ನಡೆದ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಬೆಂಬಲಿಗರು ಗೆಲವು ಸಾಧಿಸಿದ್ದಾರೆ. ರಾಜಣ್ಣ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ತಪ್ಪಿಸಲು ಶಾಸಕ ಎಸ್.ಆರ್. ಶ್ರೀನಿವಾಸ್ ಸೇರಿದಂತೆ ಹಲವು ನಾಯಕರು ಪ್ರಯತ್ನಿಸಿದ್ದರು.
24
ಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಘಟಾನುಘಟಿ ನಾಯಕರು ರಾಜಣ್ಣಗೆ ಸವಾಲಾಗಿದ್ದರು. ಆದ್ರೆ ನಾಯಕರ ತಂತ್ರ ಕೆ.ಎನ್. ರಾಜಣ್ಣ ಮುಂದೆ ವಿಫಲವಾಗಿದೆ. ಕಳೆದ 25 ವರ್ಷಗಳಿಂದ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಇದೀಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ಚುನಾವಣೆಯಲ್ಲಿ ರಾಜಣ್ಣ ಅವರೇ ಕಿಂಗ್ ಆಗಿದ್ದಾರೆ.
34
14 ನಿರ್ದೇಶಕ ಸ್ಥಾನಗಳ ಪೈಕಿ 8 ಮಂದಿ ಅವಿರೋಧವಾಗಿ ಅಯ್ಕೆಯಾಗಿದ್ದರು. ಅವಿರೋಧವಾಗಿ ಆಯ್ಕೆಯಾದ ಎಂಟು ಮಂದಿ ಕೆಎನ್ಆರ್ ಬೆಂಬಲಿಗರಾಗಿದ್ದಾರೆ. ಉಳಿದ ಆರು ಸ್ಥಾನಗಳಿಗೆ ಇಂದು ಚುನಾವಣೆ ನಡೆದಿತ್ತು.
ಕುಣಿಗಲ್ ನಿಂದ ಬಿ.ಶಿವಣ್ಣ, ಪಾವಗಡದಿಂದ ವೆಂಕಟೇಶ್, ತಿಪಟೂರಿನಿಂದ ಷಡಕ್ಷರಿ, ಚಿಕ್ಕನಾಯಕನಹಳ್ಳಿಯಿಂದ ಎಸ್.ಆರ್. ರಾಜಕುಮಾರ್, ಶಿರಾ ಕ್ಷೇತ್ರದಿಂದ ಬೆಂಬಲಿಗ ರವಿ ಗೆಲವು ಸಾಧಿಸಿದ್ದಾರೆ. ಕುಣಿಗಲ್ ಕ್ಷೇತ್ರದಿಂದ ರಾಜಣ್ಣ ಬೆಂಬಲಿಗ ಜಿ.ಡಿ. ಸುರೇಶ್ ಗೌಡ ಗೆಲುವು ಸಾಧಿಸಿದ್ದಾರೆ.