ಚಾಮರಾಜನಗರ(ಫೆ.11): ಪ್ರೀತಿಗಾಗಿ ಹುಡುಗಿಯರ ಹಿಂದೆ ಬೀಳುವ ಹುಡುಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರೆ, ಇಲ್ಲೊಬ್ಬ ವಿದ್ಯಾರ್ಥಿ ಹುಡುಗಿಯರ ಸಹವಾಸವೇ ಬೇಡ, ವ್ಯಾಲಂಟೈನ್ಸ್ ಡೇ ಹಿನ್ನೆಲೆಯಲ್ಲಿ ನನಗೆ ರಜೆ ಕೊಡಿ ಎಂದು ಪ್ರಾಂಶುಪಾಲರಿಗೆ ಪತ್ರವೊಂದನ್ನ ಬರೆದಿದ್ದಾನೆ. ಹೌದು, ಹುಡುಗಿಯರ ಕಾಟ ತಡೆಯಲಾರದೆ ವ್ಯಾಲಂಟೈನ್ಸ್ ಡೇ ಹಿನ್ನೆಲೆಯಲ್ಲಿ ನನಗೆ ಐದು ದಿನ ರಜೆ ಕೊಡಿ ಎಂದು ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಾಂಶುಪಾಲರಿಗೆ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.