ಮುತ್ತಪ್ಪ ರೈ ಈಗ ಹೇಗಿದ್ದಾರೆ? ನೀವು ನೋಡಿರದ ರೈ ಲೋಕ

First Published | Apr 13, 2020, 3:14 PM IST

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಆರೋಗ್ಯದ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಸಂಘಟನೆ ತಿಳಿಸಿದೆ. ಒಂದು ಕಾಲದಲ್ಲಿ ಭೂಗತ ಜಗತ್ತನ್ನು ಆಳಿದ್ದ ರೈ ಇದೂಗ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರಾಗಿದೆ  ಎಂಬಂತಹ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು.
ಕರೋನಾ ಮಹಾಮಾರಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರೈ ಕೇಳಿಕೊಂಡಿದ್ದಾರೆ.
Tap to resize

ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ
ಇತ್ತೀಚೆಗೆ ಮುತ್ತಪ್ಪ ರೈ ಮಾಧ್ಯಮದವರನ್ನು ತಮ್ಮ ಮನೆಗೆ ಕರೆಸಿ ಮಾತನಾಡಿದ್ದರು.
ಕಾನ್ಸರ್ ಎಂಬ ಮಹಾಮಾರಿ ಅಂಟಿಕೊಂಡಿದೆ ಅದನ್ನು ಗೆದ್ದು ಬರುತ್ತೇನೆ ಎಂದು ಹೇಳಿದ್ದರು.
ಕಾನ್ಸರ್ ಔಷಧವನ್ನು ರೋಗಿಗಳಿಗೆ ಉಚಿತವಾಗಿ ನೀಡುವ ಇರಾದೆ ಇದೆ ಎಂದು ತಿಳಿಸಿದ್ದರು.
ಮುತ್ತಪ್ಪ ರೈ ಆಸ್ತಿ ಸಂಬಂಧ ಒಂದು ಕಾಲದ ಅವರ ಆಪ್ತರೇ ದೂರು ಸಲ್ಲಿಸಿದ್ದು ಸುದ್ದಿಯಾಗಿತ್ತು.
ದುಬೈನಲ್ಲಿ ಮುತ್ತಪ್ಪ ರೈ ಬಿಜಿನಸ್ ಒಂದನ್ನು ಮಾಡಿಕೊಂಡಿದ್ದರು.
ಬಿಡದಿಯ ಸಮೀಪದ ದೊಡ್ಡ ಮನೆಯಲ್ಲಿ ವಾಸ ಮಾಡುತ್ತಾರೆ.
ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ರೈ ಅಭಿನಯಿಸಿದ್ದಾರೆ.
ಡಿಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ
ಮುತ್ತಪ್ಪ ರೈ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ನನ್ನ ಸಾವಿನ ಟಿಕೆಟ್ ಕನ್ಫರ್ಮ್ ಆಗಿದೆ ಎಂದು ರೈ ಹೇಳಿದ್ದರು.
ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜನರ ಸೇವೆಯಿಂದಾಗಿ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸ್ಪಷ್ಟಪಡಿಸಿದ್ದರು.
ನನ್ನ ಜನರ ಜತೆಗೆ ಇದ್ದುಕೊಂಡು ನನ್ನ ಖಾಯಿಲೆಯನ್ನ ಮರೆಯುತ್ತಿದ್ದೇನೆ ಎಂದಿದ್ದರು.
ನಾನು ಸಾವಿಗೆ ಅಂಜುವ ವ್ಯಕ್ತಿ ಅಲ್ಲವೇ ಅಲ್ಲ ಎಂದು ಹೇಳಿದ್ದರು.
ಬಿಡದಿಯ ಮನೆಯಲ್ಲಿ ಮುತ್ತಪ್ಪ ರೈ ಅವರು ಸಹೋದರಿಯ ಜೊತೆಗೆ ಇರುವ ಇಂದಿನ ಫೋಟೋ
ಮಾಧ್ಯಮದವರಿಗೆ ವಂದನೆ
ಡಿಕೆ ಶಿವಕುಮಾರ್ , ಡಿಕೆ ಸುರೇಶ್ ಅವರೊಂದಿಗೆ ಮಾತುಕತೆ
ಇನ್ನು ನನ್ನ ಆಸ್ತಿ ಸಂಪಾದನೆಗೆ ತಕ್ಕಹಾಗೆ ಒಂದು ರೂಪಾಯಿ ಮೋಸ ಮಾಡದೇ ತೆರಿಗೆ ಕಟ್ಟುತ್ತಿದ್ದೇನೆ ಎಂದು ರೈ ತಿಳಿಸಿದ್ದರು.
ಸುವರ್ಣ ನ್ಯೂಸ್ ಜಯಪ್ರಕಾಶ್ ಶೆಟ್ಟಿ ಅವರೊಂದಿಗೆ ರೈ
ಅದಕ್ಕಾಗಿಯೇ ನಾನು ಸಂಪಾದನೆ ಮಾಡಿದ ಎಲ್ಲಾ ಅಸ್ತಿಯನ್ನ ಈಗಾಗಲೇ ಯಾರಿಗೆ ಸೇರಬೇಕೋ ಎಲ್ಲರ ಹೆಸರಿಗೆ ವಿಲ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ
ಜಯ ಕರ್ನಾಟಕ ಸಂಘಟನೆ ಸಮಾವೇಶ
ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹುದ್ದೆಗೂ ರಾಜೀನಾಮೆ ನೀಡುವ ತೀರ್ಮಾನ ಮಾಡಿದ್ದರು.
ದೇವಾಲಯದಲ್ಲಿ ಪೂಜೆ

Latest Videos

click me!