ಕಂಬಳ ವೀರ ಶ್ರೀನಿವಾಸ್ ಗೌಡ ಸೆಲ್ಫಿಗೆ ಹೇಗ್ ಪೋಸ್ ಕೊಡ್ತಾರೆ ನೋಡಿ..!

First Published | Feb 29, 2020, 11:17 AM IST

ತುಳುನಾಡಿನ ವೀರಕ್ರೀಡೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತರಾಗಿರುವ ಶ್ರೀನಿವಾಸ ಗೌಡ ಅಶ್ವತ್ಥಪುರ ಅವರೀಗ ಕಾಲೇಜು ಯುವಕರ ಪಾಲಿಗೆ ಹೀರೋ ಆಗಿಬಿಟ್ಟಿದ್ದಾರೆ. ಅವರನ್ನು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ತುಳು ಐಸಿರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಯುವಜನರೊಂದಿಗೆ ಶ್ರೀನಿವಾಸ್ ಗೌಡ ಪೋಸ್ ಕೊಟ್ಟಿರೋದ್ ನೋಡಿ. ಇಲ್ಲಿವೆ ಫೋಟೋಸ್

ತುಳುನಾಡಿನ ವೀರಕ್ರೀಡೆ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತರಾಗಿರುವ ಶ್ರೀನಿವಾಸ ಗೌಡ ಅಶ್ವತ್ಥಪುರ ಅವರೀಗ ಕಾಲೇಜು ಯುವಕರ ಪಾಲಿಗೆ ಹೀರೋ ಆಗಿಬಿಟ್ಟಿದ್ದಾರೆ.
ಯುವಕ ಯುವತಿಯರು ಶ್ರೀನಿವಾಸ್ ಗೌಡ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿರುವುದು
Tap to resize

ಗೌರವ ಸ್ವೀಕರಿಸುತ್ತಿರುವ ಕಂಬಳ ವೀರ ಶ್ರೀನಿವಾಸ್ ಗೌಡ
ಸಮಾರಂಭದಲ್ಲಿ ಶ್ರೀನಿವಾಸ್ ಗೌಡ ಅವರಿಗೆ ಶಾಲು ಹೊದೆಸಿ ಸನ್ಮಾನಿಸುತ್ತಿರುವುದು
ಯುವತಿಯರು ಕಂಬಳ ವೀರನ ಜೊತೆ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು.
ಶ್ರೀನಿವಾಸ ಗೌಡರನ್ನು ಅತಿಥಿಗಳೊಂದಿಗೆ ಕಾಲೇಜಿನ ಆವರಣದಲ್ಲಿ ಹುಲಿ ವೇಷ, ಚಂಡೆ ವಾದ್ಯ, ಕಂಗೀಲು ನೃತ್ಯಗಳೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತಂದರು.
ಸನ್ಮಾನ ಸ್ವೀಕರಿಸಿದ ನಂತರ ಗಣ್ಯರೊಂದಿಗೆ ವೇದಿಕೆಯಲ್ಲಿ ಶ್ರೀನಿವಾಸ್ ಗೌಡ
ಕರ್ನಾಟಕ ತುಳು ಜಾನಪದ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಶ್ರೀನಿವಾಸ ಗೌಡರ ತಲೆಗೆ ಮುಂಡಾಸು ಕಟ್ಟಿ, ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದಾರೆ.
ತುಳುನಾಡ ಶೖಲಿಯಲ್ಲಿ ಪಂಚೆಯುಟ್ಟ ಯುವಕರು ಶ್ರೀನಿವಾಸ್ ಗೌಡ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿರುವುದು
ಸಮಾರಂಭದ ನಂತರ ಕಾಲೇಜಿನ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಮಾತ್ರವಲ್ಲದೇ ಪ್ರಾದ್ಯಾಪಕರು ಕೂಡ ಶ್ರೀನಿವಾಸ ಗೌಡ ಅವರೊಂದಿಗೆ ಸೆಲ್ಫಿ, ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

Latest Videos

click me!