ಗಂಗಾವತಿ: ಸೈಕಲ್ ಏರಿ ಕೊರೋನಾ ಜಾಗೃತಿಗೆ ಮುಂದಾದ ವೃದ್ಧ ದಂಪತಿ

First Published | Jul 30, 2020, 10:56 AM IST

ರಾಮಮೂರ್ತಿ ನವಲಿ

ಗಂಗಾವತಿ(ಜು.30): ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಹಬ್ಬುತ್ತಿದ್ದು, ಸಾರ್ವಜನಿಕರು ಮಾಸ್ಕ್ ನಿಂದ ರಕ್ಷಿಸಿಕೊಳ್ಳ ಬೇಕೆಂಬ ನಿಟ್ಟಿನಲ್ಲಿ ಇಲ್ಲಿಯ ವೃದ್ಧ ದಂಪತಿ ಸೈಕಲ್ ಮೇಲೆ ಗಲ್ಲಿ ಗಲ್ಲಿಗೆ ತೆರಳಿ ಮಾಸ್ಕ್‌ಗಳನ್ನು ಮಾರಾಟ ಮಾಡಿ ಉಪಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. 
 

ನಗರದ 31 ನೇ ವಾರ್ಡಿನ ಹರಿಜನ ವಾಡದ 65 ವರ್ಷದ ಮಾರೆಪ್ಪ ಮತ್ತು ಈತನ ಪತ್ನಿ 60 ವರ್ಷದ ಸುಂಕಮ್ಮ ಸೈಕಲ್ ಮೇಲೆ ಮಾಸ್ಕ್ ಹಾಕಿಕೊಂಡು ಮಾರಟಕ್ಕೆ ಮುಂದಾಗಿದ್ದಾರೆ.
ಕೋವಿಡ್ ಸೋಂಕು ತಗುಲಿದ ಪ್ರದೇಶದ ಸಮೀಪ ಸೈಕಲ್ ನಿಲ್ಲಿಸಿ ಮಾಸ್ಕ್, ಮಾಸ್ಕ್ ಎಂದು ಕೂಗುತ್ತಾರೆ. ಒಂದೊಂದು ಮಾಸ್ಕ್ 10 ರು ಗಳಿಂದ 50 ರು ಮಾರಾಟ ಮಾಡುವ ವೃದ್ಧ ದಂಪತಿ
Tap to resize

ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರಿಗೂ ಗಲ್ಲಿಗಳು ಸೇರಿದಂತೆ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಮಾರಾಟ ಮಾಡುವ ದಂಪತಿ 10 ರಿಂದ 15 ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈ ಕಾಯಕ ನಡೆಸುತ್ತಿದ್ದು, ಮಾರಾಟದ ಜೊತೆಗೆ ಕೊವೀಡ್ ಬಗ್ಗೆ ಜಾಗೃತಿ ಕೈಗೊಂಡಿರುವದಾಗಿ ಮಾರೆಪ್ಪ ತಿಳಿಸಿದ್ದಾರೆ.

Latest Videos

click me!