ಮೈಸೂರು- ಮಂಗಳೂರು ವಿಮಾನಯಾನ ಆರಂಭ

First Published Dec 12, 2020, 10:55 AM IST

ಮೈಸೂರು(ಡಿ.12): ಮೈಸೂರು- ಮಂಗಳೂರು ನಡುವಿನ ವಿಮಾನಯಾನ ಸೌಲಭ್ಯಕ್ಕೆ ಸಂಸದ ಪ್ರತಾಪ ಸಿಂಹ ಶುಕ್ರವಾರ ಚಾಲನೆ ನೀಡಿದ್ದಾರೆ. 

ಅಲೈಯನ್ಸ್‌ ಏರ್‌ ಸಂಸ್ಥೆಗೆ ಸೇರಿದ 72 ಆಸನ ವ್ಯವಸ್ಥೆಯುಳ್ಳ ವಿಮಾನಕ್ಕೆ ಬೆಳಗ್ಗೆ 10.50ಕ್ಕೆ ಮೈಸೂರು ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಈ ವಿಮಾನವು ಬೆಳಗ್ಗೆ 11.20ಕ್ಕೆ ಹೊರಟು, 12,30ಕ್ಕೆ ಮಂಗಳೂರು ತಲುಪಲಿದೆ. ಮತ್ತೆ 12.50ಕ್ಕೆ ಮಂಗಳೂರಿನಿಂದ ಹೊರಟು, ಮಧ್ಯಾಹ್ನ 1.50ಕ್ಕೆ ಮೈಸೂರು ತಲುಪಲಿದೆ. ಪ್ರಸ್ತುತ ಆರಂಭಿಕ ದರವು 2,300 ಇದೆ.
undefined
ಮೊದಲ ದಿನವೇ ವಿಮಾನಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಮಾರು 23 ಮಂದಿಯನ್ನು ಹೊತ್ತ ವಿಮಾನವು ಮಂಗಳೂರಿಗೆ ಪ್ರಯಾಣ ಬೆಳೆಸಿತು. ಅಲ್ಲದೆ ಮಂಗಳೂರಿನಿಂದ ಮೈಸೂರಿಗೆ 33 ಟಿಕೆಟ್‌ ಬುಕ್‌ ಆಗಿದೆ.
undefined
ಈ ವಿಮಾನವು ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಮೈಸೂರು ಮತ್ತು ಮಂಗಳೂರು ನಡುವೆ ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 10.50ಕ್ಕೆ ಮೈಸೂರಿನಿಂದ ಹೊರಡಲಿದೆ.
undefined
ಈ ವೇಳೆ ಶಾಸಕ ಜಿ.ಟಿ. ದೇವೇಗೌಡ, ಮೇಯರ್‌ ತಸ್ನೀಂ, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಎಸ್‌.ಶೆಟ್ಟಿ, ಬಿ.ಎಸ್‌. ಪ್ರಶಾಂತ್‌, ಜಯಕುಮಾರ್‌, ಡಾ.ಅನಿಲ್‌ ಥಾಮಸ್‌ ಮೊದಲಾದವರು ಇದ್ದರು.
undefined
click me!