Bengaluru: ಯುವತಿ ವಿಚಾರವಾಗಿ ಮಹಮ್ಮದ್ ರಫೀಕ್ ಕಿಡ್ನಾಪ್; ಬಟ್ಟೆ ಬಿಚ್ಚಿಸಿ ಹಲ್ಲೆ

Published : May 25, 2026, 01:02 PM IST

ಬೆಂಗಳೂರಿನ ಬಾಗಲೂರಿನಲ್ಲಿ ಯುವತಿ ವಿಚಾರವಾಗಿ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ. ಹಳೆ ಪ್ರೇಮಿಯ ಸಂಪರ್ಕಕ್ಕೆ ಬಂದಿದ್ದಕ್ಕೆ ಹೊಸ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.

PREV
15
ಯುವಕನ ಅಪಹರಣ

ಬೆಂಗಳೂರಿನ ಬಾಗಲೂರಿನಲ್ಲಿ ಯುವತಿಗಾಗಿ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್ ಕಿಡ್ನಾಪ್ ಆಗಿ ಹಲ್ಲೆಗೊಳಗಾದ ಯುವಕನಾಗಿದ್ದು, ಆತನನ್ನು ಅಪಹರಿಸಿದ್ದ ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಮತ್ತು ಅಲಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದಂತೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಅಬ್ನಾನ್ ಹಾಗೂ ಅಫ್ರೀದಿಗಾಗಿ ಹುಡುಕಾಟ ಮುಂದುವರಿದಿದೆ.

25
ಬ್ರೇಕ್ ಅಪ್ ಮತ್ತು ಹೊಸ ಸಂಬಂಧ

ದೂರುದಾರ ಮೊಹಮ್ಮದ್ ರಫೀಕ್ ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು, ಕಳೆದ ಒಂದು ವರ್ಷದ ಹಿಂದೆ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ತದನಂತರ ಆ ಯುವತಿ ಅಬ್ನಾನ್ ಎಂಬಾತನ ಸಂಪರ್ಕಕ್ಕೆ ಬಂದು, ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿದ್ದರು.

35
ಹಳೆ ಲವ್ವರ್ ಎಂಟ್ರಿ ಮತ್ತು ಜಗಳ

ಮದುವೆ ಸಮೀಪಿಸುತ್ತಿದ್ದ ವೇಳೆಯಲ್ಲಿ ಹಳೇ ಲವ್ವರ್ ರಫೀಕ್ ಮತ್ತೆ ಯುವತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಈ ವಿಷಯ ತಿಳಿದ ಅಬ್ನಾನ್, "ಯಾಕೆ ಹೀಗೆ ಮಾಡುತ್ತಿದ್ದೀಯಾ?" ಎಂದು ಕೇಳಲು ರಫೀಕ್ ಬಳಿ ಹೋದಾಗ, ರಫೀಕ್ ಆತನಿಗೆ ಹಲ್ಲೆ ನಡೆಸಿ ಅವಮಾನ ಮಾಡಿ ಕಳುಹಿಸಿದ್ದಾನೆ.

45
ರಿವೆಂಜ್ ಪ್ಲಾನ್ ಮತ್ತು ಕಿಡ್ನಾಪ್

ತನಗಾದ ಅವಮಾನದ ಬಗ್ಗೆ ಅಬ್ನಾನ್ ತನ್ನ ಗೆಳೆಯ ಅಫ್ರೀದಿಗೆ ತಿಳಿಸಿದ್ದು, ಬಳಿಕ ಇಬ್ಬರೂ ಸೇರಿ ಐದಾರು ಜನರ ಗ್ಯಾಂಗ್ ಕಟ್ಟಿಕೊಂಡು ದೇವನಹಳ್ಳಿ ಬಳಿ ರಫೀಕ್‌ನನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದಾರೆ. ಯೋಜನೆಯಂತೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ ಆರೋಪಿಗಳು, ರಫೀಕ್‌ನನ್ನು ಅಪಹರಿಸಿ ಬಾಗಲೂರಿನ ಖಾಲಿ ಜಾಗವೊಂದಕ್ಕೆ ಕರೆದೊಯ್ದಿದ್ದಾರೆ.

55
ಅಮಾನವೀಯ ಹಲ್ಲೆ ಮತ್ತು ಬಂಧನ

ರಫೀಕ್‌ನ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ಬಳಿಕ ನೊಂದ ಸಂತ್ರಸ್ತ 112 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದು, ಸದ್ಯ ದೂರಿನ ಅನ್ವಯ ಬಾಗಲೂರು ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

Read more Photos on
click me!

Recommended Stories