ಕೊರೋನಾ ವಾರಿಯರ್ಸ್‌ ಮೇಲೆ ಹೂ ಮಳೆ ಸುರಿದ ಶಾಸಕ, ಸಂಸದರು

First Published May 16, 2020, 10:20 AM IST

ಹರಪನಹಳ್ಳಿ(ಮೇ.16):  ಕೊರೋನಾ ವಾರಿಯರ್ಸ್‌ ಮೇಲೆ ಶಾಸಕರು, ಸಂಸದರು, ಶ್ರೀಗಳು ಹೂ ಮಳೆ ಸುರಿದು ಸ್ವಾಗತಿಸಿ ಸನ್ಮಾನಿಸಿದ ಘಟನೆ ತಾಲೂಕಿನ ಅರಸಿಕೇರಿ ಗ್ರಾಮದ ಕೋಲಶಾಂತೇಶ್ವರಮಠದಲ್ಲಿ ಶುಕ್ರವಾರ ಜರುಗಿತು. ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತರು, ಕಂದಾಯ, ಪೊಲೀಸ್‌ ಇಲಾಖೆ , ಗ್ರಾ.ಪಂ. ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭವನ್ನು ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ಆಯೋಜಿಸಿದ್ದರು.

ದಾರಿ ಮಧ್ಯೆ ಎರಡೂ ಬದಿಗೂ ನಿಂತಿದ್ದ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರಪ್ಪ, ಸ್ವತಃ ಕೋಲಶಾಂತೇಶ್ವರ ಶ್ರೀಗಳು ಹಾಗೂ ಸಾರ್ವಜನಿಕರು ಸಾಲಾಗಿ ನಿಂತು ಅವರ ಮೇಲೆ ಹೂ ಮಳೆ ಸುರಿಸಿ ಭವ್ಯ ಸ್ವಾಗತ ನೀಡಿದರು.
undefined
ಕೊರೋನಾ ವಾರಿಯರ್ಸ್‌ಗಳು ದೇಶ ಕಾಯುವ ಸೈನಿಕರ ರೀತಿಯಲ್ಲಿ ಹಗಲಿರುಳು ಶ್ರಮ ಪಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದ ಸಂಸದ ದೇವೇಂದ್ರಪ್ಪ
undefined
ಸರ್ಕಾರಿ ನೌಕರರು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದರಿಂದ ಕೊರೋನಾ ಹಿಡಿತದಲ್ಲಿದೆ
undefined
ಕೊರೊನಾ ಎಲ್ಲಾ ರಂಗಕ್ಕೂ ಪೆಟ್ಟು ಕೊಟ್ಟಿದೆ, ನಿಮ್ಮ ಮೇಲೆ ದಾಳಿಯಾದರೂ ಲೆಕ್ಕಿಸದೆ ಸೇವೆಯಲ್ಲಿ ಇದ್ದೀರಿ. ವಾರಿಯರ್ಸ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆಸಲ್ಲಿಸುತಿದ್ದೀರಿ. ನಿಮ್ಮ ಸೇವೆ ದೊಡ್ಡದು ಎಂದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು
undefined
ಕೊರೋನಾ ವಾರಿಯರ್ಸ್‌ಗೆ ಹೂಮಳೆಗೈದ ಶಾಸಕ ಎಸ್‌ .ವಿ. ರಾಮಚಂದ್ರಪ್ಪ, ಗ್ರಾ ಪಂ. ಅಧ್ಯಕ್ಷೆ ವಿಜಯ ಲಕ್ಷ್ಮಿ, ಜಗಳೂರು ತಹಸೀಲ್ದಾರ್‌ ಹುಲಿಮನಿ ತಿಮ್ಮಣ್ಣ, ಉಪ ತಹಸೀಲ್ದಾರ್‌ ಫಾತಿಮಾ, ಎಸ್‌ಐ ಕಿರಣ್‌ ಕುಮಾರ, ವೈ.ಡಿ.ಅಣ್ಣಪ್ಪ, ಗುರುಶಾಂತನಗೌಡ್ರು, ಶಾಂತ ಪಾಟೀಲ್‌
undefined
click me!