ದತ್ತಾತ್ರೇಯ ದೇವಸ್ಥಾನಕ್ಕೆ ರಮೇಶ ಜಾರಕಿಹೊಳಿ ಭೇಟಿ: ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ?

First Published | Jul 2, 2020, 12:33 PM IST

ಕಲಬುರಗಿ(ಜು.02): ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಇಂದು(ಗುರುವಾರ) ಜಿಲ್ಲೆಯ ಗಾಣಗಾಪುರದ ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಮಹಾಮಾರಿ ಕೊರೋನಾ ಹಾವಳಿಯಿಂದ ಜುಲೈ 7 ರ ವರೆಗೆ ದತ್ತಾತ್ರೇಯ ದೇವಸ್ಥಾನ ಸಾರ್ವಜನಿಕರಿಗೆ ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ ? ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ, ಸಾರ್ವಜನಿಕರಿಗೊಂದು ನಿಯಮ ಯಾಕೆ? ಎಂದು ಪ್ರಶ್ನಿಸಿದ್ದಾರೆ.  

ಬೆಳ್ಳಂಬೆಳಿಗ್ಗೆ ಗಾಣಗಾಪುರದ ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದ ಸಚಿವ ರಮೇಶ್‌ ಜಾರಕಿಹೊಳಿ
ಸ್ಥಳೀಯ ಬಿಜೆಪಿ ಮುಖಂಡರ ಜೊತೆ ನಿರ್ಬಂಧ ಇರುವ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಸಚಿವ ಜಾರಕಿಹೊಳಿ
Tap to resize

ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ? ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ, ಸಾರ್ವಜನಿಕರಿಗೊಂದು ನಿಯಮ ಏಕೆ? ಎಂದು ಪ್ರಶ್ನಿಸುತ್ತಿರುವ ಜನರು
ಆದೇಶ ಉಲ್ಲಂಘಿಸಿ ಸಚಿವರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

Latest Videos

click me!