ಹಿರೇಕೆರೂರು: ಶಕ್ತಿ ದೇವತೆ ದುರ್ಗಾದೇವಿ ದರ್ಶನ ಪಡೆದ ಸಚಿವ ಬಿ.ಸಿ. ಪಾಟೀಲ್‌

First Published | Oct 14, 2020, 2:31 PM IST

ಹಿರೇಕೆರೂರು(ಅ.14): ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಮಂಗಳವಾರ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಶಕ್ತಿ ದೇವತೆಯಾದ ದುರ್ಗಾದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ.  
 

ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಶಕ್ತಿ ದೇವತೆಯಾದ ದುರ್ಗಾದೇವಿ ದೇವಸ್ಥಾನ
ತಾಯಿ ದುಗಾದೇವಿ ಆಶೀರ್ವಾದದಿಂದ ಕ್ಷೇತ್ರದ ಜನತೆಯ ಬಹುದಿನಗಳ ಕನಸಾದ ಕುಡಿಯುವ ನೀರು ಪೂರೈಸುವ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದ್ದರಿಂದ ತುಂಬಾ ತಂತಸ ತಂದಿದೆ ಹಾಗೂ ಜನತೆಯ ಕನಸನ್ನು ಈಡೇರಿಸಿದಂತಾಗಿದೆ ಎಂದ ಸಚಿವ ಬಿ.ಸಿ. ಪಾಟೀಲ
Tap to resize

ದರ್ಶನ ಪಡೆದ ಬಳಿಕ ದುರ್ಗಾದೇವಿ ಕರೆ ಏರಿಯ ಮೇಲೆ ನಿರ್ಮಾಣವಾದ ಕಾಂಕ್ರೀಟ್‌ ರಸ್ತೆ ಕಾಮಗಾರಿ ವೀಕ್ಷಿಸಿದರು. ಜತೆಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ ಸಚಿವರು
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು ಬಣಕಾರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಯತ್ತಿನಹಳ್ಳಿ, ರವಿಶಂಕರ ಬಾಳಿಕಾಯಿ ಇತರರು ಇದ್ದರು.

Latest Videos

click me!