'ವಿಶ್ವೇಶ್ವರಯ್ಯ ಒಬ್ಬ ಎಂಜಿನಿಯರ್ ಅಷ್ಟೇ, ಪ್ರತಿಮೆ ಸ್ಥಾಪಿಸಿದ್ರೆ ಒಡೀತೇವೆ': ಮಾಜಿ ಮೇಯರ್ ವಾರ್ನಿಂಗ್

First Published | Jun 7, 2020, 11:18 AM IST

ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಿದರೆ ರಕ್ತಪಾತವಾದರೂ ಸರಿ ನಾವು ಪ್ರತಿಮೆ ಒಡೆದು ಹಾಕುತ್ತೇವೆ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಎಚ್ಚರಿಕೆ ನೀಡಿದ್ದಾರೆ. ಸರ್‌.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಏನೂ ಇಲ್ಲ. ಅವರು ದಿವಾನರಾಗಿದ್ದರಷ್ಟೆ. ಕನ್ನಂಬಾಡಿ ಕಟ್ಟುವುದಕ್ಕೆ ಎಂಜಿನಿಯರ್‌ ಆಗಿದ್ದರು. ಅವರ ಕೆಲಸಕ್ಕೆ ಸಂಬಳ ಪಡೆದಿದ್ದಾರೆ ಎಂದಿದ್ದಾರೆ.

ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಿದರೆ ರಕ್ತಪಾತವಾದರೂ ಸರಿ ನಾವು ಪ್ರತಿಮೆ ಒಡೆದು ಹಾಕುತ್ತೇವೆ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಎಚ್ಚರಿಕೆ ನೀಡಿದರು.
undefined
ಶನಿವಾರ ನಾಲ್ವಡಿ ಫೌಂಡೇಷನ್‌ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್‌.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಏನೂ ಇಲ್ಲ. ಅವರು ದಿವಾನರಾಗಿದ್ದರಷ್ಟೆ ಎಂದಿದ್ದಾರೆ
undefined

Latest Videos


ಕನ್ನಂಬಾಡಿ ಕಟ್ಟುವುದಕ್ಕೆ ಎಂಜಿನಿಯರ್‌ ಆಗಿದ್ದರು. ಅವರ ಕೆಲಸಕ್ಕೆ ಸಂಬಳ ಪಡೆದಿದ್ದಾರೆ. ಆದ್ದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಜೊತೆಗೆ ಸರ್‌.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸುವುದು ಕೆಟ್ಟಸಂಪ್ರದಾಯ ಎಂದಿದ್ದಾರೆ
undefined
ಇದು ರಾಜಮನೆತನಕ್ಕೆ ಮಸಿ ಬಳಿಯುವ ಕೆಲಸ. ವಿಶ್ವೇಶ್ವರಯ್ಯನವರ ಹೆಸರು ಇಷ್ಟೊಂದು ಪ್ರಸಿದ್ಧಿ ಆಗಿರುವ ಬಗ್ಗೆ ಗೊಂದಲವಿದೆ ಎಂದಿದ್ದಾರೆ.
undefined
ಮಿರ್ಜಾ ಇಸ್ಮಾಯಿಲ್‌, ವಿಶ್ವೇಶ್ವರಯ್ಯನವರಿಗಿಂತ ಹೆಚ್ಚು ಕಾಲ ದಿವಾನರಾಗಿದ್ದರು. ಆದರೂ ಇವರ ಹೆಸರು ಹೆಚ್ಚು ಚಾಲ್ತಿಯಲ್ಲಿಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
undefined
ನಮ್ಮ ಮನೆಗೆ ನಮ್ಮ ಹೆಸರು ಹಾಕಿಕೊಳ್ಳುತ್ತೇವೆಯೇ ಹೊರತು, ಮೇಸ್ತ್ರಿ ಅಥವಾ ಗಾರೆ ಕೆಲಸದವರ ಹೆಸರು ಹಾಕುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
undefined
Dam open
undefined
ಕೆಆರ್‌ಎಸ್‌ನಲ್ಲಿ ನಾಲ್ವಡಿ ಅವರ ಪ್ರತಿಮೆ ಬಿಟ್ಟು ಬೇರೆ ಪ್ರತಿಮೆ ಸ್ಥಾಪಿಸಿದರೆ ನಾವು ಅದನ್ನು ಒಡೆದು ಹಾಕುತ್ತೇವೆ. ನಮ್ಮ ಪ್ರಾಣ ಹೋದರೂ ಸರಿಯೆ. ನಾವು ಮಾತ್ರ ನಾಲ್ವಡಿಯವರ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸಲು ಬಿಡುವುದಿಲ್ಲ ಎಂದಿದ್ದಾರೆ.
undefined
ಬಹಳ ಮಂದಿಗೆ ಕೆಆರ್‌ಎಸ್‌ ಕುರಿತು ಸತ್ಯಗೊತ್ತಿಲ್ಲದೆ ವಿಶ್ವೇಶ್ವರಯ್ಯನವರನ್ನು ಒಪ್ಪಿಕೊಂಡಿದ್ದರು. ಆದರೆ ಈಗ ಎಲ್ಲರಿಗೂ ಸತ್ಯದ ಅರಿವಾಗಿದೆ. ನಾಲ್ವಡಿ ಅವರನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ
undefined
ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಿಂಗಾಯತ, ಒಕ್ಕಲಿಗ ಮತ್ತು ಮುಸ್ಲಿಂ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಬೇಕು. ಶೋಷಿತರಿಗೆ ಶಿಕ್ಷಣ ಕೊಡುವುದನ್ನು ತಡೆದ ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸುವುದು ಎಷ್ಟುಸರಿ ಎಂದು ಅವರು ಪ್ರಶ್ನಿಸಿದರು.
undefined
ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್‌ ಮತ್ತು ಯದುವೀರ್‌ ಅವರಿಗೆ ರಾಜಕೀಯಕ್ಕೆ ಬರುವ ಆಸಕ್ತಿ ಇರಬೇಕು. ಅದಕ್ಕಾಗಿಯೇ ನಾಲ್ವಡಿ ಸಮನಾಗಿ ಸರ್‌.ಎಂ. ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ಎಲ್ಲರ ವಿರೋಧದ ನಡುವೆಯೂ ಸಮ್ಮತಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ಬದ್ಧ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಯದುವೀರ್‌ ಕೂಡಾ ಇನ್ನೂ ಬಾಲಕ. ಅವನು ತಾಯಿ ಹೇಳಿದ ಮಾತಿಗೆ ತಲೆ ಅಲ್ಲಾಡಿಸುತ್ತಾನೆ. ರಾಜವಂಶಸ್ಥರು ಮೊದಲು ತಮ್ಮ ಪೂರ್ವಜರ ಇತಿಹಾಸ ತಿಳಿಯಬೇಕು. ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಬಾರದು ಎಂದು ರಾಜವಂಶಸ್ಥರನ್ನು ಏಕವಚನದಲ್ಲಿ ಜರಿದರು.
undefined
click me!