Published : Jan 30, 2026, 10:26 AM ISTUpdated : Jan 30, 2026, 10:38 AM IST
Lakkundi Snake ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಉತ್ಖನನ ವೇಳೆ ಜೀವಂತ ಹಾವು ಪತ್ತೆಯಾಗಿದೆ. ಉತ್ಖನನ ಪ್ರದೇಶದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಉತ್ಖನನ ಸ್ಥಳದಲ್ಲಿ ವಿಶೇಷ ಪ್ರಭೇದದ ಜೀವಂತ ಹಾವು ಕಾಣಿಸಿಕೊಂಡಿದೆ.
24
Lakkundi Snake
ಉತ್ಖನನ ನಡೆಯುತ್ತಿದ್ದ ಜಾಗದಲ್ಲೇ ಹಾವು ಚಲಿಸುತ್ತಿರುವುದನ್ನು ಗೋಳಪ್ಪ ಕೋಳಿವಾಡ ಎಂಬ ಸ್ಥಳೀಯ ಗ್ರಾಮಸ್ಥ ಗಮನಿಸಿದ್ದಾರೆ. ತಕ್ಷಣವೇ ಯಾವುದೇ ಆತಂಕಕ್ಕೆ ಅವಕಾಶ ನೀಡದೇ, ಅವರು ಈ ವಿಷಯವನ್ನು ಉತ್ಖನನ ಕಾರ್ಯದ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ.
34
veerabhadreshwara temple Lakkundi
ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಉತ್ಖನನ ಸಿಬ್ಬಂದಿ, ಎಚ್ಚರಿಕೆಯಿಂದ ಹಾವನ್ನು ಹಿಡಿದು ಯಾವುದೇ ಹಾನಿ ಆಗದಂತೆ ಸುರಕ್ಷಿತವಾಗಿ ರಕ್ಷಿಸಿ, ನಂತರ ಹಾವನ್ನು ಕಾಡಿನ ಪ್ರದೇಶಕ್ಕೆ ಬಿಡಲಾಗಿದೆ.
44
lakkundi
ಘಟನೆಯ ಬಳಿಕ ಉತ್ಖನನ ಕಾರ್ಯವನ್ನು ಕೆಲಕಾಲ ಸ್ಥಗಿತಗೊಳಿಸಿ, ನಂತರ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಉತ್ಖನನ ಪ್ರದೇಶದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.