ಕೇರಳ-ಕರ್ನಾಟಕ ಗಡಿ ಭಾಗದಲ್ಲಿರುವ ಮುಳ್ಳೇರಿಯಾದ ಬೆಳ್ಳೂರಿನ ಸಮೀಪವಿರುವ ಈ ಜಲಪಾತವೇ ಕಲ್ಲೇರಿ ಜಲಪಾತ. ಮುಳ್ಳೇರಿಯದಿಂದ 5 ಕಿಲೋಮೀಟರ್ ದೂರದಲ್ಲಿರುವ ನಾಟೇಕಲ್‌ನಿಂದ, ಬಸ್ತಿ-ಮಿಂಚಿಪದವ್ ರಸ್ತೆಯಲ್ಲಿ ಮೂರು ಕಿಲೋಮೀಟರ್ ಸಾಗಿದಾಗ ಕಲ್ಲೇರಿಮೂಲೆಮೂಲಕ ತಲುಪಬಹುದಾಗಿದೆ.
ಅಲ್ಲಿನ ರಸ್ತೆಯ ಬಲಬದಿಯ ಮಣ್ಣಿನ ದಾರಿಯಾಗಿ ಸಾಗಿದರೆ ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರವು ಸಿಗುತ್ತದೆ. ಅದೇ ರಸ್ತೆಯಲ್ಲಿ ಮುಂದುವರಿದಾಗ ಸಣ್ಣ ಸೇತುವೆ ಇದೆ. ಅದು ದಾಟಿದೊಡನೆ ಆಕಾಶದ ಎತ್ತರಕ್ಕೆ ಏರಿದ ತೆಂಗಿನತೋಟದ ಗುಡ್ಡೆ, ಅದರ ತುತ್ತತುದಿಗೆ ತಲುಪಿದಾಗ ಫಾಲ್ಸ್ ಸಿಗುತ್ತದೆ.
ನ್ಯಾವಿಗೇಶನ್ ಇಲ್ಲದ ಕಾರಣ ಗ್ರಾಮೀಣ ಹಳ್ಳಿಗಾಡಿನಲ್ಲಿರುವ ಇಲ್ಲಿಗರ ಹೋಗಲು ಹರಿಯುವ ನೀರಿನ ನಿನಾದವನ್ನು ಆಲಿಸುತ್ತಾ ಜಲಪಾತದ ಜಾಡನ್ನು ಹಿಡಿಯಬೇಕಾಗುತ್ತದೆ. ಸುಮಾರು 100 ಮೀಟರ್ ಗಳಷ್ಟು ಎತ್ತರದಿಂದ ಭೋರ್ಗರೆಯುವ ಈ ಜಲಪಾತ ವೀಕ್ಷಿಸಿದಾಗ ಸ್ವರ್ಗ ಸೌಂದರ್ಯ ನೋಡಿದ ಅನುಭವವಾಗುತ್ತದೆ.
ದೊಡ್ಡ ಮತ್ತು ಸಣ್ಣ ಬಂಡೆಗಳಿಂದ ಧುಮ್ಮುಕ್ಕಿ, ಕೆಳಭಾಗದಲ್ಲಿ ಸಣ್ಣ ಬಂಡೆಗಳ ಮಧ್ಯೆ ನೀರು ಬಿದ್ದು ಅಲ್ಲಿಂದ ರಭಸದಿಂದ ಭೋರ್ಗರೆಯುವ ನೀರು ನಿಜಕ್ಕೂ ಹಾಲಿನ ಬುಗ್ಗೆಯಂತೆ ಕಂಗೊಳಿಸುತ್ತದೆ. ಇಲ್ಲಿ ಹರಿಯುವ ನೀರು ತಂಪಾಗಿ ತುಂಬಾ ಶುಭ್ರವಾಗಿರುವ ಬೇಸಿಗೆಯಲ್ಲಿ ತುಂಬಾ ಇದರಿಂದ ಫಾಲ್ತು ಮೈತುಂಬ ಹರಿಯುವುದರಿಂದ ಯಾವಾಗ ಬೇಕಿದ್ದರೂ ಈ ಜಲಪಾತಕ್ಕೆ ಭೇಟಿ ನೀಡಬಹುದು. ಕಾಡುಬಳ್ಳಿಗಳಿಂದ ತುಂಬಿರುವುದರಿಂದ ಸರಿಯಾಗಿ ನಿಂತು ನೋಡಲು ಕಷ್ಟಕರವಾಗಿದೆ.
ದೈನಂದಿನ ಒತ್ತಡದ ಬದುಕಿನಿಂದ ಬೇಸತ್ತ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಲು ಹಚ್ಚ ಹಸಿರಾಗಿರುವ ರಮ್ಯ ಪರಿಸರದ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಯಾಂತ್ರಿಕ ಬದುಕು ಶಬ್ದಗಳಿಂದ ದೂರಸರಿದು ಸ್ವಲ್ಪ ಸಮಯ ಪರಿಶುದ್ಧ ಗಾಳಿ ಸುಂದರ ಪರಿಸರದಲ್ಲಿ ಕಾಲಕಳೆಯಲು ಇಂತಹ ಜಲಪಾತಗಳಿಗೆ ನೀಡುವುದು ಭೇಟಿ ನೀಡುವುದು ಉತ್ತಮ.