Published : Mar 11, 2021, 12:26 PM ISTUpdated : Mar 11, 2021, 12:29 PM IST
ಬೆಳಗಾವಿ(ಮಾ.11): ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಸ್ವಕ್ಷೇತ್ರ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಸಿಡಿ ಪ್ರಕರಣವನ್ನ ಖಂಡಿಸಿ ವ್ಯಾಪಕ ಪ್ರತಿಭಟನೆಗಳನ್ನ ನಡೆಸಿದ್ದರು. ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ರಾಜಕೀಯ ಷಡ್ಯಂತರವಾಗಿದೆ ಅಂತ ರಾಜಕೀಯ ನಾಯಕರು, ಕಾಳಿಮಠದ ಋಷಿಕುಮಾರ್ ಸಾಮೀಜಿ ಸೇರಿದಂತೆ ಅನೇಕರು ಸಾಹುಕಾರ್ ಪರ ಬೆಂಬಲಕ್ಕೆ ನಿಂತಿದ್ದಾರೆ. ಅದೇ ರೀತಿ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿತ ಆಟೋ ಚಾಲಕರ ವಿನೂತನ ಅಭಿಯಾನವನ್ನ ಆರಂಭಿಸಿದ್ದಾರೆ.