Published : Aug 19, 2020, 10:54 AM ISTUpdated : Aug 19, 2020, 05:39 PM IST
ವಿಜಯಪುರ(ಆ.19): ಜಗತ್ತಿನಾದ್ಯಂತ ಇಂದು ವಿಶ್ವ ಛಾಯಾಗ್ರಾಹರಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಪದಗಳಲ್ಲಿ ಹೇಳಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿದಲ್ಲಿದೆ. ಜಗತ್ತಿನ ಎಂಥಹ ಕಠಿಣ ಸನ್ನಿವೇಶಗಳಲ್ಲಿ ಛಾಯಾಗ್ರಾಕರು ತಮ್ಮ ಚಾಕಚಕ್ಯತೆಯನ್ನ ಮರೆದಿದ್ದಾರೆ. ಯುದ್ಧವಾಗಲಿ, ಪ್ರಕೃತಿ ವಿಕೋಪಗಳಾಗಲಿ ಎಂತಹ ವಿಷಮ ಸನ್ನಿವೇಶದಲ್ಲೂ ತಮ್ಮ ಜೀವನ ಹಂಗು ತೊರೆದು ಕ್ಲಿಕ್ಕಿಸುವ ತಮ್ಮ ಫೋಟೋಗಳ ಮೂಲಕ ಮಾಹಿತಿಯನ್ನ ಜನರಿಗೆ ಮುಟ್ಟಿಸುವಂತ ಕೆಲಸವನ್ನ ಮಾಡುತ್ತಿದ್ದಾರೆ ಈ ಛಾಯಾಗ್ರಾಕರು.