ಜಗತ್ತಿನ ಮೊದಲ ಆನ್‌ಲೈನ್‌ ಶೂಟಿಂಗ್‌ ಲೀಗ್‌ನಲ್ಲಿ ಪಾಲ್ಗೊಂಡ ಹುಬ್ಬಳ್ಳಿಯ ಮಹಿಳೆ..!

First Published Jul 6, 2020, 10:11 AM IST

ಹುಬ್ಬಳ್ಳಿ(ಜು.06): ಇಂಡಿಯನ್ ಶೂಟಿಂಗ್ ಆಯೋಜನೆ ಮಾಡಿರುವ ಜಗತ್ತಿನ ಮೊದಲ ಆನ್‌ಲೈನ್ ಶೂಟಿಂಗ್ ಲೀಗ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡವನ್ನು(ಇಂಡಿಯನ್‌ ಟೈಗರ್ಸ್‌) ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ ಮೂಲದ ಜ್ಯೋತಿ ಸಣ್ಣಕ್ಕಿ ಅವರು ಭಾನುವಾರ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ . 

ತತ್ವದರ್ಶ ಹಾಸ್ಪಿಟಲ್ ಬಳಿಯಿರುವ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ಜೂಮ್ ಆಪ್ ಮೂಲಕ ನಡೆದ ಮೊದಲ ಸುತ್ತಿನ ಸ್ಪರ್ಧೆ. ಭಾನುವಾರ ಸಂಜೆ 5.30 ಕ್ಕೆ ಇಟಲಿ ಜತೆಗೆ ನಡೆದ ಮೊದಲ ಸುತ್ತಿನ ಸ್ಪರ್ಧೆ ಮುಕ್ತಾಯವಾಗಿದ್ದು, ಭಾರತದ ತಂಡದಲ್ಲಿದ್ದ ಕೃಷ್ಣಕುಮಾರ್, ಇಶಾಂಕ್ ಅಹುಜಾ ಜತೆಗೆ ಹುಬ್ಬಳ್ಳಿಯ ಜ್ಯೋತಿ ಭಾಗವಹಿಸಿದ್ದರು. ಮುಂದಿನ ಸ್ಪರ್ಧೆ ಜು. 11 ರಂದು ಆಸ್ಟ್ರೇಲಿಯಾ ವಿರುದ್ದ ನಡೆಯಲಿದೆ .
undefined
ಏರ್ ರೈಫಲ್ 2019 ರಲ್ಲಿ ದೆಹಲಿಯಲ್ಲಿ ಜಿ.ಎ. ಮೌಲಂಕರ್‌ನಲ್ಲಿ ನಡೆದಿದ್ದ ಎಂಕ್ಯೂಎಸ್ ಶೂಟಿಂಗ್‌ನಲ್ಲಿ ಲೇವಲ್ 2 ಕ್ರಾಸ್ ಮಾಡಿದ್ದ ಹಿನ್ನೆಲೆ ಆನ್‌ಲೈನ್ ಶೂಟಿಂಗ್ ಲೀಗ್‌ಗೆ ಆಯ್ಕೆಯಾದ ಜ್ಯೋತಿ ಸಣ್ಣಕ್ಕಿ
undefined

Latest Videos


ಹುಬ್ಬಳ್ಳಿ ನಗರದ ಸಾಯಿನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸೂಪರ್‌ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜ್ಯೋತಿ ಸಣ್ಣಕ್ಕಿ
undefined
ಕಳೆದ ಮೂರು ವರ್ಷದಿಂದ ಶಿವಾನಂದ ಬಾಳೆಹೊಸೂರ್ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ರವಿಚಂದ್ರ ಬಾಳೆಹೊಸೂರು ಅವರಿಂದ ತರಬೇತಿ ಪಡೆಯುತ್ತಿರುವ ಜ್ಯೋತಿ ಸಣ್ಣಕ್ಕಿ. 2018 ರಲ್ಲಿ ಕೇರಳದ ತಿರುವನಂತಪುರಂನಲ್ಲಿ ನಡೆದ 62 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಎಸ್ ಎಚ್ -1 ವಿಭಾಗದ 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್‌ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಮಧ್ಯ ಪ್ರದೇಶದಲ್ಲಿ - ನಡೆದಿದ್ದ 63 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು .
undefined
ಕೊರೋನಾ ಹಿನ್ನೆಲೆಯಲ್ಲಿ ಶೂಟರ್‌ಗಳ ಕ್ರೀಡಾ ಮನೋಭಾವಕ್ಕೆ ಯಾವುದೇ ತೊಡಕು ಉಂಟಾಗಬಾರದೆಂದು ಆನ್‌ಲೈನ್ ಸ್ಪರ್ಧೆ ನಡೆಸಲಾಗುತ್ತಿದೆ. ಪಿಸಿಐ ಅನುಮತಿ ಮೇರೆಗೆ ಭಾರತೀಯ ಪ್ಯಾರಾಲಿಂಪಿಕ್ ಶೂಟಿಂಗ್‌ನ ಇಂಡಿಯನ್ ಟೈಗರ್ಸ್ ತಂಡ ಪಾಲ್ಗೊಂಡಿದೆ. ಟೂರ್ನಿಯಲ್ಲಿ ಫ್ರಾನ್ಸ್, ಇಸ್ರೇಲ್, ಸ್ಪೇನ್, ಇಟಲಿ ಆಸ್ಟ್ರೇಲಿಯಾ ಮತ್ತು ಭಾರತ ಸೇರಿ ಒಟ್ಟು ಆರು ತಂಡಗಳು ಪಾಲ್ಗೊಂಡಿವೆ. ಎ ತಂಡದಲ್ಲಿ ಇಂಡಿಯನ್ ಟೈಗರ್ಸ್ ಇಟಲಿಯನ್ ಸ್ಟೈಲ್, ಆಸ್ಟ್ರೇಲಿಯನ್ ರಾಕ್ಸ್ ಇವೆ. ಬಿ ತಂಡದಲ್ಲಿ ಫ್ರೆಂಚ್ ಫ್ರಾನ್ಸ್, ಇಸ್ರೇಲ್ ಮಾಬರುತ್, ಸ್ಪಾನಿಷ್ ಚನೊಸ್ ತಂಡಗಳಿವೆ.
undefined
ಈ ಹಿಂದೆ ಹಲವು ಬಾರಿ ಆನ್‌ಲೈನ್ ಶೂಟಿಂಗ್ ಸ್ಪರ್ಧೆಗಳು ನಡೆದಿವೆ. ಆದರೆ ಆಲ್‌ಲೈನ್ ಶೂಟಿಂಗ್ ಲೀಗ್ ನಡೆದಿರಲಿಲ್ಲ. ಇಂಡಿಯನ್ ಶೂಟಿಂಗ್ ನಡೆಸುತ್ತಿರುವ ಪ್ಯಾರಾ ವಿಭಾಗದ ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಮಹಿಳೆ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಜ್ಯೋತಿ ಸಣ್ಣಕ್ಕಿ ಅವರ ತರಬೇತುದಾರ ರವಿಚಂದ್ರ ಬಾಳೆಹೊಸೂರ್
undefined
ಓಲಿಂಪಿಕ್‌ನಲ್ಲಿ ಪಾಲ್ಗೊಂಡವರ ಜತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಸಂತಸ ಉಂಟುಮಾಡಿದೆ. ಮುಂದಿನ ಕ್ರೀಡಾ ಚಟುವಟಿಕೆಗಲ್ಲಿ ಪಾಲ್ಗೊಳ್ಳಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ ಜ್ಯೋತಿ ಸಣ್ಣಕ್ಕಿ
undefined
click me!