ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ, ತಾಯಿಯ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಗ್ಯಾಂಗ್‌ಸ್ಟರ್

Published : Nov 14, 2026, 12:28 PM IST

ಭೂಗತ ಪಾತಕಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಉಡುಪಿಗೆ ಬಂದಿದ್ದಾನೆ. ತಾಯಿಯ ಮೃತದೇಹದ ನೋಡುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ

PREV
17
ತಾಯಿ ಅಂತ್ಯಕ್ರಿಯೆ

ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯ ತಾಯಿ ಸುಶೀಲಾ ಪೂಜಾರ್ತಿ ಗುರುವಾರ ರಾತ್ರಿ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯಲ್ಲಿ ಭಾಗವಹಿಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯುವ ತಾಯಿಯ ಅಂತ್ಯಕ್ರಿಯೆಯಲ್ಲಿ ರವಿ ಪೂಜಾರಿ ಭಾಗವಹಿಸಲಿದ್ದು, ಬೆಂಗಳೂರಿಂದ ಭಿಗಿ ಪೊಲೀಸ್ ಬಂದೋಬಸ್ತ್‌ ನಲ್ಲಿ ಕರೆತರಲಾಗಿದೆ.

27
ಬಿಕ್ಕಿ ಬಿಕ್ಕಿ ಅತ್ತ ರವಿ ಪೂಜಾರಿ

ತಾನು ಹುಟ್ಟಿದ ಮನೆಗೆ ಬಂದ ಕೂಡ ತಾಯಿಯ ಮೃತ ಶರೀರದ ಮುಂದೆ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರವಿ ಪೂಜಾರಿ ಬಿಕ್ಕಿ ಬಿಕ್ಕಿ ಅತ್ತು ಕುಸಿದು ಕೂತರು. ಬಳಿಕ ಅಂತ್ಯಕ್ರಿಯೆಯ ವಿಧಿವಿಧಾನ ನಡೆಸಲು ತಯಾರಿ ನಡೆಸಿದರು.

ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಸರ್ಪಗಾವಲಿನಲ್ಲಿ ಇಂದು ಉಡುಪಿಗೆ ತಲುಪಿದ್ದು, ಉಡುಪಿಯಲ್ಲಿಯೂ ಸ್ಥಳೀಯ ಪೊಲೀಸರು ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

37
ಬಂಧನವಾಗಿದ್ದು ಎಲ್ಲಿ?

ಪಾತಕಿ ಛೋಟ ರಾಜನ್‌ ಸಹಚರನಾಗಿದ್ದ ರವಿ ಪೂಜಾರಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊ*ಲೆ, ಕೊ*ಲೆಯತ್ನ, ಜೀವಬೆದರಿಕೆ, ಹಪ್ತಾ ವಸೂಲಿ ಇತ್ಯಾದಿ 90 ಕ್ಕೂ ಹೆಚ್ಚು ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿ, 26 ವರ್ಷಗಳ ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ. 2019ರ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಕರ್ನಾಟಕ ಪೊಲೀಸರು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.

47
6 ವರ್ಷಗಳಿಂದ ಬೆಂಗಳೂರಿನ ಜೈಲು

ಬಂಧನದ ಬಳಿಕ ಆತನ ಮೇಲಿರುವ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, 6 ವರ್ಷಗಳಿಂದ ಬೆಂಗಳೂರಿನ ಜೈಲಿನಲ್ಲಿದ್ದಾನೆ. ಆತನನ್ನು ಕರೆತರುವ ಮತ್ತು ಭದ್ರತೆಯ ವೆಚ್ಚವನ್ನು ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಂತ್ಯಕ್ರಿಯೆ ಮುಗಿದ ತಕ್ಷಣ ಮರಳಿ ಜೈಲಿಗೆ ಸೇರಿಸುವಂತೆ ನ್ಯಾಯಾಲಯ ಆದೇಶಿಸಿದೆ.

57
ಸೆನೆಗಲ್‌ನಲ್ಲಿ ಪರೋಪಕಾರಿ, ಹೊಟೇಲ್ ಬಿಸಿನೆಸ್

ರವಿ ಪೂಜಾರಿ 1980 ರ ದಶಕದಲ್ಲಿ ತನ್ನ ಕ್ರಿಮಿನಲ್ ವೃತ್ತಿಜೀವನ ಆರಂಭಿಸಿದ್ದ. ಸೆನೆಗಲ್‌ನಲ್ಲಿದ್ದಾಗ, ಪಶ್ಚಿಮ ಆಫ್ರಿಕಾದಲ್ಲಿ ಒಂಬತ್ತು ಮಳಿಗೆಗಳನ್ನು ಹೊಂದಿರುವ 'ನಮಸ್ತೆ ಇಂಡಿಯಾ' ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದ, ಆ ಪ್ರದೇಶದಲ್ಲಿ ದೇಣಿಗೆ ನೀಡಿ ಅಲ್ಲಿನ ಜನರಿಗೆ ಆಪ್ತನಾಗಿದ್ದ.ಜನವರಿ 21, 2019 ರಂದು, ಪೂಜಾರಿ ಅವರನ್ನು ಸೆನೆಗಲ್‌ನ ಡಾಕರ್‌ನಲ್ಲಿರುವ ಕ್ಷೌರಿಕನ ಅಂಗಡಿಯಲ್ಲಿ ಬಂಧಿಸಲಾಯ್ತು. ಆಂಥೋನಿ ಫೆರ್ನಾಂಡಿಸ್ ಎಂಬ ಹೆಸರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ.

67
ಈತನಿಗೆ ಮಕ್ಕಳೆಷ್ಟು?

ರವಿ ಪೂಜಾರಿ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಕಲ್ಮಾಡಿ ಬಪ್ಪುತೋಟದಲ್ಲಿ ಜನಿಸಿದ್ದ. ಈತನಿಗೆ ಪತ್ನಿ ಪದ್ಮಾ ಪೂಜಾರಿ, ಓರ್ವ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ತಂದೆ ಸೂರ್ಯ ಪೂಜಾರಿ, ತಾಯಿ ಸುಶೀಲ ಪೂಜಾರಿ ಅವರಿಗೆ 2 ಹೆಣ್ಣು ಹಾಗೂ 3 ಗಂಡು ಮಕ್ಕಳಿದ್ದು, ರವಿ ಪೂಜಾರಿ ಎರಡನೇಯವನು. ಇದರಲ್ಲಿ ತಮ್ಮ ಮಧು ಎಂಬಾತ ಆತನ ಬಂಧನಕ್ಕೂ ಮುನ್ನ ಮೃತಪಟ್ಟಿದ್ದರು. ತಂದೆ ಈತನ ಬಂಧನಕ್ಕೂ 6 ವರ್ಷಗಳ ಮೊದಲು ಮೃತಪಟ್ಟಿದ್ದರು.

77
ಉಡುಪಿ ನಂಟು ತೊರೆದಿದ್ದ ಪೂಜಾರಿ

ರವಿ ಪೂಜಾರಿ ತಂದೆ ಸೂರ್ಯ ಡಿ ಪೂಜಾರಿ ಮುಂಬೈಯಲ್ಲಿ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ರವಿ ಪೂಜಾರಿ ಬಾಲ್ಯವನ್ನು ಮಲ್ಪೆಯಲ್ಲೇ ಕಳೆದಿದ್ದ. ಎಸ್ಸೆಸ್ಸೆಲ್ಸಿ ಆಂಗ್ಲ ಮಾಧ್ಯಮದಲ್ಲಿ ತೇರ್ಗಡೆಯಾಗಿದ್ದ. ಡಾನ್ ಆದ ಬಳಿಕ ನಂತರ ಆತ ಮಲ್ಪೆ ನಂಟನ್ನು ತೊರೆದಿದ್ದ. 1992-93ರಲ್ಲಿ ತನ್ನ ಸಹೋದರಿಯ ಮುದವೆಗೆ ಬಂದಿದ್ದೇ ಕೊನೆ. ಅದಾದ ನಂತರ ಈಗ ತಾಯಿಯ ಅಂತಿಮ ಕಾರ್ಯಕ್ಕೆ ಬಂದಿದ್ದಾನೆ.

Read more Photos on
click me!

Recommended Stories