ಕರಾವಳಿಯ ವೈದ್ಯೆ ಮುಡಿಗೆ ಮಿಸೆಸ್‌ ವಲ್ರ್ಡ್ ಸೂಪರ್‌ ಮಾಡೆಲ್‌ ಕಿರೀಟ..!

First Published | Nov 22, 2019, 3:40 PM IST

ಬ್ಯಾಂಕಾಕ್‌ನಲ್ಲಿ ನ.12 ರಿಂದ 16ರ ವರೆಗೆ ನಡೆದ ಮಿಸೆಸ್‌ ವರ್ಲ್ಡ್ ಸೂಪರ್‌ ಮಾಡೆಲ್‌- 2019ರ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ವೈದ್ಯೆ ಡಾ. ಪ್ರಿಯದರ್ಶಿನಿ ರೈ ಡಿಸೋಜ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಿಸ್‌ ಗುಡ್‌ ನೆಸ್‌ ಅಂಬಾಸಿಡರ್‌ ಎಂಬ ಸಬ್‌ ಟೈಟಲ್‌ನ್ನು ಕೂಡ ಪಡೆದುಕೊಂಡಿದ್ದಾರೆ.

ಬ್ಯಾಂಕಾಕ್‌ನಲ್ಲಿ ನ.12 ರಿಂದ 16ರ ವರೆಗೆ ನಡೆದ ಮಿಸೆಸ್‌ ವರ್ಲ್ಡ್ ಸೂಪರ್‌ ಮಾಡೆಲ್‌- 2019ರ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ವೈದ್ಯೆ ಡಾ. ಪ್ರಿಯದರ್ಶಿನಿ ರೈ ಡಿಸೋಜ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮಿಸ್‌ ಗುಡ್‌ನೆಸ್‌ ಅಂಬಾಸಿಡರ್‌ ಎಂಬ ಸಬ್‌ ಟೈಟಲ್‌ನ್ನು ಕೂಡ ಪ್ರಿಯದರ್ಶಿನಿ ಪಡೆದುಕೊಂಡಿದ್ದಾರೆ.
Tap to resize

ಸ್ಪರ್ಧೆಯಲ್ಲಿ ಪ್ರಿಯದರ್ಶಿನಿ ಅಪ್ಪಟ ಭಾರತೀಯ ನಾರಿಯಾಗಿ ಕಾಣಿಸಿಕೊಂಡು ವಿದೇಶಗಳಲ್ಲಿಯೂ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ.
ಮೂಲತಃ ಬೈಂದೂರಿನ ಬಿ.ಟಿ. ವಿಜಯ ರೈ ಹಾಗೂ ಲೀನಾ ವಿ. ರೈ ದಂಪತಿಯ ಮಗಳಾದ ಅವರು ಅರುಣ್‌ ಡಿಸೋಜ ಅವರನ್ನು ಮದುವೆಯಾದ ಬಳಿಕ ಮಂಗಳೂರಿನಲ್ಲಿ ನೆಲೆಸಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Latest Videos

click me!