ಎಡಿಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಿಸಿದ ಭಕ್ತ

First Published | Jun 5, 2020, 11:12 AM IST

ತುಮಕೂರು(ಜೂ.05): ಬಡತನ ಹಾಗೂ ಕಷ್ಟದಲ್ಲಿ ನೊಂದ ಭಕ್ತನೊಬ್ಬ ಹೊತ್ತಿದ್ದ ಹರಕೆಯನ್ನು ಭಗವಂತನಿಗೆ ಚಿನ್ನದ ತೇರು ನೀಡುವ ಮುಖಾಂತರ ಎಡಿಯೂರು ಸಿದ್ಧಲಿಂಗೇಶ್ವರನಿಗೆ ಹರಕೆ ಸಲ್ಲಿಸಿದ್ದಾರೆ. ಶಿವಕುಮಾರ್‌ ಎಂಬುವರೇ ತನ್ನ ಕಷ್ಟ ಪರಿಹರಿಸಿದ ಎಡಿಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ವೆಚ್ಚದ ಚಿನ್ನದ ತೇರು ನೀಡುವ ಮೂಲಕ ಹರಕೆ ತೀರಿಸಿದ್ದಾರೆ.

ಕಬ್ಬಿಣದ ಗಾಲಿಯಿಂದ ಕೂಡಿದ್ದ ಮರದ ಮೇಲೆ ಹೊದಿಕೆಯಾದ 20 ಕೆಜಿ ತೂಕದ ಚಿನ್ನದಲ್ಲಿ ತಯಾರಿಸಿದ 10 ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುವ ಚಿನ್ನದ ತೇರನ್ನು ಎಡಿಯೂರಿನ ದೇವಾಲಯದಲ್ಲಿ ಶಾಸ್ತ್ರ ವಿಧಿಗಳ ಪ್ರಕಾರ ದೇವರಿಗೆ ಅರ್ಪಿಸಿದ ಭಕ್ತ
ಚಿನ್ನದ ತೇರಿಗೆ ಪುಣ್ಯಾಹ ಮಾಡಿ ದೇವಾಲಯದ ಒಳ ಭಾಗಕ್ಕೆ ತೆಗೆದುಕೊಂಡು ಹೋದ ಎಡಿಯೂರು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ರೀಲಕ್ಷ್ಮಿ, ಮುಖ್ಯ ಅರ್ಚಕ ಶಿವಮೂರ್ತಯ್ಯ, ಶಿಷ್ಟಾಚಾರ ಅಧಿಕಾರಿ ಸುರೇಶ್‌ ಮತ್ತು ದೇವಾಲಯದ ಅರ್ಚಕರು
Tap to resize

ದಾನಿಗಳಾದ ಶಿವಕುಮಾರ್‌ (ಶಿವಣ್ಣ) ಮತ್ತು ಕುಟುಂಬದವರಿಗೆ ಆಶೀರ್ವದಿಸಿ ಸಿದ್ಧಲಿಂಗೇಶ್ವರರು ನಿಮಗೆ ಸಕಲ ಸಂಪತ್ತನ್ನು ನೀಡಲಿ ಎಂದು ಆಶೀರ್ವದಿಸಿದ ಅರ್ಚಕರು
ತೇರು ನಿರ್ಮಿಸಲು ಸಂಗ್ರಹಿಸಿಟ್ಟಿದ್ದ ಚಿನ್ನದ ಜೊತೆಗೆ ತಮ್ಮ ಬೆಂಗಳೂರಿನಲ್ಲಿದ್ದ ಎರಡು ನಿವೇಶನ ಮಾರಿ ಅದರಲ್ಲಿ ಬಂದ ಹಣದಲ್ಲಿ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಚಿನ್ನದ ತೇರು ದಾನವಾಗಿ ನೀಡಿದ ಭಕ್ತ ಶಿವಣ್ಣ

Latest Videos

click me!