ಮಹಿಳಾ ಉದ್ಯಮಿಗಳ ತರಬೇತಿಗೆ ನೆರವು: ಸಿಎಂ ಯಡಿಯೂರಪ್ಪ

Kannadaprabha News   | Asianet News
Published : Mar 11, 2021, 08:50 AM ISTUpdated : Mar 11, 2021, 09:11 AM IST

ಬೆಂಗಳೂರು(ಮಾ.11): ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಪ್ರತಿ ಜಿಲ್ಲೆಗೆ ತಲಾ 1 ಲಕ್ಷ ನೀಡಬೇಕೆಂಬ ಮಹಿಳಾ ಉದ್ಯಮಿಗಳ ಸಂಘಗಳ ಒಕ್ಕೂಟ (ಉಬುಂಟು) ಬೇಡಿಕೆ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

PREV
14
ಮಹಿಳಾ ಉದ್ಯಮಿಗಳ ತರಬೇತಿಗೆ ನೆರವು: ಸಿಎಂ ಯಡಿಯೂರಪ್ಪ

ಬುಧವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ‘ಉಬುಂಟು’ ಮತ್ತು ಗ್ಲೋಬಲ್‌ ಅಲೈಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರೆನ್ಯೂರ್‌ಶಿಫ್‌ (ಗೇಮ್‌) ಜಂಟಿಯಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಹಿಳಾ ಉದ್ಯಮಗಳನ್ನು ಬೆಂಬಲಿಸುವ ವೇಗವರ್ಧಕ ‘ಎಕ್ಸಲರೇಟರ್‌ ಬೆಂಗಳೂರು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

24

ದೇಶದ ಅಭಿವೃದ್ಧಿ ಹಾಗೂ ಜಿಡಿಪಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ 37,188 ಕೋಟಿ ಅನುದಾನ ಮೀಸಲಿಟ್ಟಿದ್ದೇನೆ. ಇದರಿಂದ ಸ್ವಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆಒದಗಿಸುವುದು, ಗಾರ್ಮೆಂಟ್ಸ್‌ ಮಹಿಳೆಯರಿಗಾಗಿ ವನಿತಾ ಸಂಗಾತಿ ಯೋಜನೆ, ಮಹಿಳಾ ಪಾರ್ಕ್, ಸಣ್ಣ ಹಾಗೂ ಸೂಕ್ಷ್ಮ ಉದ್ಯಮಿಗಳು, ಗ್ರಾಮೀಣ ಭಾಗದ ಸ್ವಸಹಾಯ ಗುಂಪುಗಳಿಗೆ ಸಹಾಯಧನ ದೊರೆತಿದೆ. ಸಾವಿರಾರು ಮಹಿಳೆಯರಿಗೆ ಇದರ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

34

ಸರ್ಕಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ಸಂಸ್ಥಾಪಕಿ ಕೆ.ರತ್ನಪ್ರಭಾ ಅವರು, 26 ಮಹಿಳಾ ಸಂಘಗಳಿಂದ ‘ಉಬುಂಟು’ ಒಕ್ಕೂಟ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ನೆರವು ನೀಡಿದರೆ ಸರ್ಕಾರ ಮಾಡಬೇಕಿದ್ದ ಬಹುತೇಕ ಕೆಲಸವನ್ನು ಒಕ್ಕೂಟವೇ ಮಾಡುತ್ತದೆ ಎಂದರು.

44

ಇದೇ ವೇಳೆ ವಿವಿಧ ಬೇಡಿಕೆ ಈಡೇರಿಸುವಂತೆ ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ.ಸುಂದರ್‌ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ್‌, ಗೇಮ್‌ನ ಸಹ ಸಂಸ್ಥಾಪಕರಾದ ಮದನ್‌ ಪದಕಿ, ಮದನ್‌ ಪ್ರಸಾದ್‌, ಎಸ್‌ಐಡಿಬಿಐ ಉಪವ್ಯವಸ್ಥಾಪಕ ಸತ್ಯವೆಂಕಟರಾವ್‌ ಮತ್ತಿತರರು ಪಾಲ್ಗೊಂಡಿದ್ದರು.

click me!

Recommended Stories