44ನೇ ವಯಸ್ಸಿನಲ್ಲಿ ಮೂರನೇ ಹೆಣ್ಣು ಮಗು ಜನನ, ಹಸುಗೂಸು ಮಾರಿದ ಪೋಷಕರು ಸೇರಿ ಮೂವರ ಬಂಧನ

Published : May 29, 2025, 07:19 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಎರಡು ದಿನದ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಅನುಮಾನದ ಮೇರೆಗೆ ಪೊಲೀಸರು ತನಿಖೆ ನಡೆಸಿ ದಂಪತಿಗಳು ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. 

PREV
14

ಚಿಕ್ಕಮಗಳೂರು ; ಎರಡು ಮಕ್ಕಳು ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ, 44 ರ ವಯಸ್ಸಿನಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ಮಹಿಳೆ, ಇದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅನುಮಾನ ಮೂಡಿಸಿತ್ತು. ಸಿಕ್ಕಿದ್ದು ಸಣ್ಣ ಅನುಮಾನ. ಆ ಅನುಮಾನವನ್ನ ಹೊತ್ತೊಯ್ದು ಪೊಲೀಸರಿಗೆ ಮಾಹಿತಿ ಕೊಟ್ರು. ಮಗು ಎಲ್ಲಿ ಎನ್ನುವ ಅನುಮಾನದಲ್ಲಿಯೇ ಹೊರಟ ಖಾಕೀ ಟೀಂಗೆ ಹಸುಗೂಸ ಮಾರಾಟ ಆಗಿರುವುದು ಧೃಡವಾಗುತ್ತೆ. ತಕ್ಷಣವೇ ದಂಪತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಂದು ಲಕ್ಷ ಹಣಕ್ಕೆ ತಮಗೆ ಹುಟ್ಟಿದ 2 ದಿನದ ಹೆಣ್ಣು ಮಗುವನ್ನೇ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

24

ದಂಪತಿಗಳಿಗೆ ಜೈಲು :

ಮಲೆನಾಡಲ್ಲಿ ಮಗು ಮಾರಾಟದ ಪ್ರಕರಣವಂತೂ ಅಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಲೇ ಇರುತ್ತೇ. ಈಗ ಅದೇ ಸರದಿ ಚಿಕ್ಕಮಗಳೂರು ಜಿಲ್ಲೆಯ ಎನ್ ಅರ್ ಪುರದಲ್ಲಿ ನಡೆದಿದೆ. ಅದು ಎರಡು ದಿನದ ಮಗುವನ್ನ ಹೆತ್ತವ್ವ ಅಪ್ಪನೇ ಮಾರಿರೋದು. ಒಂದು ಲಕ್ಷಕ್ಕೆ ಉಡುಪಿ ಜಿಲ್ಲೆಯ ಕಾರ್ಕಳದ ರಾಘವೇಂದ್ರ ಎಂಬುವವರಿಗೆ ಮಾರಾಟ ಮಾಡಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ದಂಪತಿಗಳ ಜೊತೆ ನಿವೃತ್ತ ನರ್ಸ್ ಮಧ್ಯವರ್ತಿಯಾಗಿ ಕೆಲ್ಸ ಮಾಡಿದ್ರಿಂದ ಮೂವರ ವಿರುದ್ದ ಎನ್ ಅರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಎನ್ ಅರ್ ಪುರದ ಹರಾವರಿ ಗ್ರಾಮದ ಸದಾನಂದ, ಹಾಗೂ ರತ್ನ ಅವರಿಗೆ ಮೂರನೇ ಮಗು ಹೆಣ್ಣು ಜನಿಸಿದೆ. ಮೇ 22 ರಂದು ಎನ್ ಅರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಆದಾದ ಎರಡು ದಿನದಲ್ಲಿಯೇ ಮಗುವನ್ನ ನಿವೃತ್ತ ನರ್ಸ್ ಕುಸುಮ ಸಂಬಂಧಿ ಕಾರ್ಕಳ ಮೂಲದ ರಾಘವೇಂದ್ರ ಅವ್ರಿಗೆ ಒಂದು ಲಕ್ಷಕ್ಕೆ ಮಾರಾಟ ಮಾಡಲಾಗಿದೆ.

34

ಆರೋಗ್ಯ ಇಲಾಖೆಯಿಂದ ಪ್ರಕರಣ ಬೆಳಕಿಗೆ :

ಹೆರಿಗೆಯಾದ ಎರಡು ದಿನದ ನಂತರ ಮಗು ಕಾಣದೇ ಇರೋದ್ರಿಂದ ಅರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅನುಮಾನ ಬಂದಿದೆ. ಮೊದಲೇ ಎರಡು ಮಕ್ಕಳು ಬಗ್ಗೆ ಮಾಹಿತಿ ನೀಡಿದೇ ಇರುವ ಕಾರಣಕ್ಕೆ ಈ ದಂಪತಿಗಳ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಾಕಷ್ಟು ಅನುಮಾನವಿತ್ತು. ಹೆರಿಗೆಯಾದ ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ರತ್ನಾಳ ಮೇಲೆ ಆರೋಗ್ಯ ಇಲಾಖೆಗೆ ಅನುಮಾನವಿತ್ತು . 

44

ಮಗುವಿಗೆ ಇಂಜೆಕ್ಷನ್ ನೀಡುವ ಕಾರಣಕ್ಕೆ ಮನೆಗೆ ಭೇಟಿ ನೀಡಿದಾಗ ಮಗು ನಾಪತ್ತೆಯಾಗಿರುವುದು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಗಮನಕ್ಕೆ ಬರುತ್ತೆ. ತಕ್ಷವೇ ಎನ್ ಆರ್ ಪುರ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದು ಮೂವರನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಒಟ್ಟಾರೆ ಮಗು ಮಾರಾಟ ಪ್ರಕರಣದಲ್ಲಿ ಅಪ್ಪ ಅಮ್ಮ ಜೈಲು ಸೇರಿದ್ರೆ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ಶಿಫ್ಟ್ ಅಗಿದೆ. ಇನ್ನೂ ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಆ ಮಕ್ಕಳು ಎಲ್ಲಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಸ್ತಾ ಇದ್ದಾರೆ.

Read more Photos on
click me!

Recommended Stories