ಅಪರೂಪದ ಬೃಹತ್ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಬಲೆಗೆ ಬಿದ್ದಿದೆ.
ಇತ್ತೀಚಿನ ವರ್ಷಗಳಲ್ಲಿ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಸಿಕ್ಕಿರಲಿಲ್ಲ ಕಾರವಾರದ ಲೇಡೀಸ್ ಬೀಚ್ ಬಳಿ ಹಾಕಿದ್ದ ಏಂಡಿ ಬಲೆಗೆ ಬೃಹತ್ ಹಕ್ಕಿ ತೊರ್ಕೆ ಮೀನು ಬಿದ್ದಿದೆ.
ಅಂದಾಜು 65-69 ಕೆಜಿ ಭಾರವಿದ್ದು, ಮತ್ಸ್ಯಪ್ರಿಯರಿಗಂತೂ ಇದು ನೆಚ್ಚಿನ ಮೀನು
ಉದ್ದ ತಲೆಯ ಹಕ್ಕಿ ತೊರ್ಕೆ ಅಥವಾ ಆಕಳ ಮೂಗಿನ ತೊರ್ಕೆ ಮೀನು ಎಂದು ಕೂಡಾ ಕರೆಯಲಾಗುತ್ತದೆ.
ಈ ಮೀನು ಶಾರ್ಕ್ ಜಾತಿಗೆ ಸೇರಿದ್ದು, 2 ಮೀಟರ್ ವಿಸ್ತಾರವಾಗಿ ಬೆಳೆಯುತ್ತದೆ. ಈ ಜಾತಿಯ ಮೀನಿನ ಬಾಲ ಅತೀ ಉದ್ದವಾಗಿರುತ್ತದೆ. ಬಾಲದಲ್ಲಿ ಎರಡು ದೊಡ್ಡ ಮುಳ್ಳುಗಳೂ ಇರುತ್ತವೆ. ಈ ಮೀನು ಸುಮಾರು 16 ರ್ವ ಬದುಕುತ್ತದೆ.