ಬೆಂಗಳೂರು ಟೆಕ್ಕಿಗಳ ಪ್ರೈವೇಟ್‌ 2 ಪಬ್ಲಿಕ್‌ ಅಭಿಯಾನ: ಮೆಟ್ರೋ ಬೆನ್ನಲ್ಲೇ, ಬಿಎಂಟಿಸಿ ಫೀಡರ್‌ ಬಸ್‌ಗಳಿಗೂ ಬೆಂಬಲ!

Published : Oct 11, 2023, 07:39 PM ISTUpdated : Oct 11, 2023, 07:49 PM IST

ಬೆಂಗಳೂರು (ಅ.11): ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಚಲ್ಲಘಟ್ಟ- ವೈಟ್‌ಫೀಲ್ಡ್‌ ಮಾರ್ಗವನ್ನು ಆರಂಭಿಸಿದ ಬೆನ್ನಲ್ಲಿಯೇ ಬಿಎಂಟಿಸಿ ವತಿಯಿಂದ 35 ಹೊಸ ಮೆಟ್ರೋ ಫೀಡರ್‌ ಬಸ್‌ ಸೇವೆಗಳನ್ನು ಆರಂಭಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಫೀಡರ್‌ ಬಸ್‌ಗಳಿಗೆ ಚಾಲನೆ ನೀಡಿದರು. ಇದರ ಬೆನ್ನಲ್ಲಿಯೇ ವಾರಕ್ಕೆರಡು ದಿನ ಸ್ವಂತ ವಾಹನವನ್ನು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಹೋಗಲು ಪ್ರೈವೇಟ್‌ 2 ಪಬ್ಲಿಕ್‌ (Private 2 Public transport) ಅಭಿಯಾನ ಆರಂಭಿಸಿದ್ದಾರೆ.

PREV
111
ಬೆಂಗಳೂರು ಟೆಕ್ಕಿಗಳ ಪ್ರೈವೇಟ್‌ 2 ಪಬ್ಲಿಕ್‌ ಅಭಿಯಾನ: ಮೆಟ್ರೋ ಬೆನ್ನಲ್ಲೇ, ಬಿಎಂಟಿಸಿ ಫೀಡರ್‌ ಬಸ್‌ಗಳಿಗೂ ಬೆಂಬಲ!

ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ 35 ಫೀಡರ್ ಬಸ್ ಗಳಿಗೆ ಮೊದಲ ಹಂತದಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

211

ಬೆಂಗಳೂರಿನಲ್ಲಿ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಮೇಟ್ರೋ ಸಂಚಾರವನ್ನು ಆರಂಭಿಸಿದ ಬೆನ್ನಲ್ಲಿಯೇ ಹೊರ ವರ್ತುಲ ರಸ್ತೆಯಲ್ಲಿನ ಪ್ರಮುಖ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಗಳ ಸೇವೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

311

ಸೋಮವಾರದಿಂದ ಆರಂಭವಾಗಿರುವ ಮೆಟ್ರೋ ಹೊಸ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲು ಸದ್ಯಕ್ಕೆ 35 ಫೀಡರ್ ಬಸ್ ಗಳ ಸೇವೆಯನ್ನು ಕಲ್ಪಿಸಲಾಗಿದೆ.

411

ಜನಸಂಚಾರ (ಪೀಕ್‌ ಅವರ್‌) ಹೆಚ್ಚಾಗಿರುವ ಸಮಯದಲ್ಲಿ ಪ್ರತಿ 5 ನಿಮಿಷಕ್ಕೆ ಒಮ್ಮೆ ಬಸ್ ಗಳ ಲಭ್ಯತೆ ಇರಲಿದೆ. ಜನ ಸಂಚಾರ ಹೆಚ್ಚು ಇರದ ಪ್ರದೇಶಗಳಲ್ಲಿ ಪ್ರತಿ 8 ನಿಮಿಷಗಳಿಗೆ ಒಮ್ಮೆ ಬಸ್ ಲಭ್ಯತೆ ಇರಲಿದೆ. 

511

ಬೆಂಗಳೂರಿನಲ್ಲಿ ಖಾಸಗಿ ವಾಹನ ದಟ್ಟಣೆ ಕಡಿಮೆ ಮಾಡಲು ಕೊನೆಯ ನಿಲ್ದಾಣದೊಂದಿಗೆ ಮೆಟ್ರೋ ಸಂಪರ್ಕವನ್ನು ಕಲ್ಪಿಸಲು ಫೀಡರ್ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. 

611

ಕೆ.ಆರ್. ಪುರ ಮೆಟ್ರೊ ನಿಲ್ದಾಣದಿಂದ ಮಹದೇವಪುರ, ಮಾರತ್ತಹಳ್ಳಿ ಸೇತುವೆ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್‌ ಮೊದಲ ಫೀಡರ್ ಮಾರ್ಗವಾಗಿದೆ. ಎರಡನೇ ಮಾರ್ಗದಲ್ಲಿ ಮಾರತಹಳ್ಳಿಯ ಮೂಲಕ ಕುಂದಲಹಳ್ಳಿ, ಐಟಿಪಿಎಲ್ ಮತ್ತು ಗರುಡಾಚಾರ್ಪಾಳ್ಯ, ಕೆಆರ್ ಪುರ ಮೆಟ್ರೋ ನಿಲ್ದಾಣಗಳಿಗೆ ಸೇವೆಯನ್ನು ಒಳಗೊಂಡಿರುತ್ತದೆ.
 

711

ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಪ್ರಮಖ 2 ಮಾರ್ಗಗಳಿಗೆ ಬಿಎಂಟಿಸಿ ಫೀಡರ್ ಗಳಿಗೆ ಚಾಲನೆ ನೀಡಿದ್ದು, ಔಟರ್‌ ರಿಂಗ್‌ ರೋಡ್‌ನಲ್ಲಿರುವ ಟೆಕ್ ಕಾರಿಡಾರ್‌ಗೆ ಹೋಗುವವರಿಗೆ ಸಹಾಯಕವಾಗಲಿದೆ.

811

ಮತ್ತೊಂದು ಹೊಸ ಮಾರ್ಗದಲ್ಲಿ ಹೋಪ್ ಫಾರ್ಮ್, ಐಟಿಪಿಎಲ್, ಗ್ರಾಫೈಟ್ ಇಂಡಿಯಾ, ಎಇಸಿಎಸ್ ಲೇಔಟ್ ಗೇಟ್ ಮೂಲಕ ಕಾಡುಗೋಡಿಗೆ ಸಂಪರ್ಕ ಕಲ್ಪಿಸುವ ಬಸ್‌ ಸಂಚಾರ ಮಾಡಲಿವೆ. ಮತ್ತೊಂದೆಡೆ ಹೋಪ್ ಫಾರ್ಮ್, ವರ್ತೂರು ಕೋಡಿ ಮತ್ತು ಸಿದ್ದಾಪುರ ಮೂಲಕ ಕಾಡುಗೋಡಿಯಿಂದ ಮಾರತ್ತಹಳ್ಳಿಗೆ ಸಂಚಾರ ಮಾಡಲಿವೆ.

911

ಮೊದಲ ಮಾರ್ಗ- ವಿ ಎಂಎಫ್-1ಸಿ ಮಾರ್ಗದಲ್ಲಿ ಒಟ್ಟು ಬಸ್‌ಗಳು 22 ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಿಂದ - ಸೆಂಟ್ರಲ್‌ ಸಿಲ್ಕ್‌ ಬೊರ್ಡ್‌ವರೆಗೆ. ಮಹದೇವಪುರ, ಮಾರತ್ ಹಳ್ಳಿ ಬಿಡ್ಜ್‌, ಕಾಡು ಬೀಸನಹಳ್ಳಿ, ಅಗರ ಮಾರ್ಗದಲ್ಲಿ ಸಂಚಾರ ನಡೆಸಲಿದೆ. 

1011

ಎಸಿ ಮತ್ತು ನಾನ್‌ ಎಸಿ ಬಸ್‌ಗಳು ಲಭ್ಯ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಮತ್ತು ಹವಾನಿಯಂತ್ರಣ ರಹಿತ ಸೇವೆಗಳಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗಗಳನ್ನು ಪರಿಚಯಿಸಲಾಗಿದೆ.

1111

ಐಟಿ ಉದ್ಯೋಗಿಗಳು ವಾರಕ್ಕೆರಡು ದಿನ ಸ್ವಂತ ವಾಹನವನ್ನು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಹೋಗಲು ಪ್ರೈವೇಟ್‌ 2 ಪಬ್ಲಿಕ್‌ (Private 2 Public transport) ಅಭಿಯಾನ ಆರಂಭಿಸಿದ್ದಾರೆ.

Read more Photos on
click me!

Recommended Stories