ಜಿಲ್ಲೆಯ ಹಿರೇಕೆರೂರು ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡಡೆಸುತ್ತಿರುವ ಬಿ.ಡಿ. ಹಿರೇಮಠ
ಧರಣಿ ನಿರತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾಜಿ ಯೋಧ ರಂಗಪ್ಪ ಬಡಪ್ಪಳವರ ಅಸ್ಪಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ನೀರಾವರಿ ಯೋಜನೆ 33ರ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಸ್ಥಗಿತಗೊಳಿಸಬೇಕು. ಯೋಜನೆಗೆ ನಮ್ಮ ವಿರೋಧವಿಲ್ಲ. ರೈತರ ಜಮೀನು ಸ್ವಾಧೀನ ವಿಚಾರಕ್ಕಾಗಿ ವಿರೋಧವಿದೆ ಎಂದು ರೈತರು ಹೇಳಿದ್ದಾರೆ.
ನಾಳೆ ಅಥವಾ ನಾಡಿದ್ದರಿಂದ ಇನ್ನು ಅನೇಕ ರೈತರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ಯೋಜನೆ ಕೈಬಿಡದಿದ್ದ ಪಕ್ಷದಲ್ಲಿ ನಾನು ವಿಷ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ವಿಷ ಸರ್ಕಾರದ ಸಾವಿನ ತೀರ್ಥವೆಂದು ಭಾವಿಸಿ ತೆಗೆದುಕೊಳ್ಳುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ ಹಿರೇಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.