ಗಂಗಾವತಿ: ನವ ವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆ

First Published | Jul 11, 2020, 9:02 AM IST

ಗಂಗಾವತಿ(ಜು.11): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಮಂತ್ರಾಲಯ ಮಠದಿಂದ  ಶ್ರೀಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಗುರುವಾರ ಜರುಗಿದೆ. 
 

ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಪ್ರಾತಃ ಕಾಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು
ಈ ಸಂದರ್ಭದಲ್ಲಿ ಶ್ರೀ ಜಯತೀರ್ಥಗುರುಸಾರ್ವಭೌಮರ ಗ್ರಂಥಗಳ ಪಾರಾಯಣ ಹಾಗೂ ಅದರ ಮೇಲೆ ವಿದ್ವಾಂಸರಿಂದ ಉಪನ್ಯಾಸಗಳು, ಭಜನೆ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು
Tap to resize

ಶ್ರೀಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಗಂಗಾವತಿಯ ಅನೇಕ ಭಕ್ತರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಸುಮಂತ ಕುಲಕರ್ಣಿ, ಪಂಡಿತರಾದ ಕಡಪ ಧೀರೇಂದ್ರ ಆಚಾರ್ಯ, ಆಯಾಚಿತ್ ಧೀರೇಂದ್ರಆಚಾರ್ಯ, ಗುರುಪ್ರಸಾದ್ ಆಚಾರ್ಯ, ತ್ರಿವಿಕ್ರಮಆಚಾರ್ಯ, ಪವಮಾನ ಆಚಾರ್ಯ ಹೊಸಪೇಟೆ, ನರಸಿಂಹಆಚಾರ್ಯ, ನವವೃಂದಾವನದ ಅರ್ಚಕರಾದ ನರಸಿಂಹಆಚಾರ್ಯ, ವಿಜೇಂದ್ರ ಆಚಾರ್ಯ, ಗುರುರಾಜ ಆಚಾರ್ಯ ಕಿನ್ನಾಳ, ಶ್ರೀನಿವಾಸ ಆಚಾರ್ಯ ಭಾಗಿಯಾಗಿದ್ದರು.

Latest Videos

click me!