ಸತ್ತವರ ಖಾತೆಗೆ ಹೋಗಿದೆ ಬರೋಬ್ಬರಿ 2.20 ಕೋಟಿ ಗೃಹಲಕ್ಷ್ಮೀ ಹಣ: ವಾಪಾಸ್‌ಗೆ ಸೂಚನೆ

Published : Feb 11, 2026, 07:06 AM IST

ರಾಯಚೂರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1920 ಮೃತಪಟ್ಟವರ ಖಾತೆಗಳಿಗೆ ಬರೋಬ್ಬರಿ 2.20 ಕೋಟಿ ರೂಪಾಯಿ ಜಮೆಯಾಗಿದೆ. ಈ ಹಣವನ್ನು ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ. 

PREV
14
ಗೃಹಲಕ್ಷ್ಮಿ ಯೋಜನೆ

ರಾಯಚೂರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಸಾವನ್ನಪ್ಪಿರುವವರ ಖಾತೆಗೆ ಬರೋಬ್ಬರಿ 2.20 ಕೋಟಿ ಹಣ ಹೋಗಿದೆ. 1920 ಜನ ಮರಣ ಹೊಂದಿದ್ದು 2.20 ಕೋಟಿ ರು. ಸತ್ತವರ ಖಾತೆಗೆ ಜಮೆ ಆಗಿದೆ. ಅದನ್ನ ತಡೆಗಟ್ಟಲು ಮತ್ತು ಆ ಹಣ ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

24
ನಕಲಿ 13 ಲಕ್ಷ ಪಡಿತರ ಕಾರ್ಡ್

ಶನಿವಾರ ಇಲ್ಲಿನ ಕೃಷಿ ವಿವಿ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತ್ತವರ ಹೆಸರ ಮೇಲೆ ಹಣ ಹೋಗುತ್ತಿರುವುದನ್ನು ನಿಲ್ಲಿಸಿ ಹಣ ಹಿಂದಿರುಗಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ನಕಲಿ 13 ಲಕ್ಷ ಪಡಿತರ ಕಾರ್ಡ್ ರದ್ದಾಗಿವೆ. ಅರ್ಹರಿಗೆ ಆಹಾರ ಇಲಾಖೆಯಿಂದ ಪಡಿತರ ಚೀಟಿ ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.

34
ಶಕ್ತಿ ಯೋಜನೆ

ರಾಜ್ಯದಲ್ಲಿ ಒಟ್ಟಾರೆ 17,280 ಕೋಟಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸಂದಾಯವಾಗಿದೆ. ಬಜೆಟ್ 4ಲಕ್ಷ 09 ಸಾವಿರ ಕೋಟಿಗೆ ಹೆಚ್ಚಿರುವುದು ಅಭಿವೃದ್ಧಿಯ ಸಂಕೇತ. ಶಕ್ತಿ ಯೋಜನೆ ಎನ್ನಲಾಗಿದೆ. ಈವರೆಗೆ 206 ಕೋಟಿ ಟ್ರಿಪ್ ಗಳಾಗಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Raichur Utsava 2026: ರಾಯಚೂರು ಉತ್ಸವದಲ್ಲಿ ಗ್ಯಾರೆಂಟಿ ಸಮಾವೇಶ; ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಕೃಷಿಮೇಳ!

44
ಚುನಾವಣೆಗಾಗಿ ಮಾಡಿದ ಕಾರ್ಯಕ್ರಮ ಅಲ್ಲ

ಮನೆಗೆ ಐದು ಗ್ಯಾರಂಟಿ ಮನೆಯ ಮುಂದೆ ರಂಗೋಲಿ ಎಂಬ ಕಾರ್ಯಕ್ರಮ ಘೋಷಿಸಿ ಜಾರಿಗೊಳಿಸಲು ಸೂಚಿಸಿದ್ದೇವೆ ಎಂದ ಅವರು, ಇಂದಿರಾಗಾಂಧಿ, ದೇವರಾಜು ಅರಸುರವರ ಸಂದರ್ಭದಲ್ಲಿ ಹಣಕೊಟ್ಟು ರೇಷನ್ ಪಡೆಯುವ ಯೋಜನೆಯಾಗಿತ್ತು. ಅದು ಇದೀಗ ಉಚಿತ ಸಿಗುತ್ತಿದೆ. ಈ ಕಾರ್ಯಕ್ರಮ ಚುನಾವಣೆಗಾಗಿ ಮಾಡಿದ ಕಾರ್ಯಕ್ರಮ ಅಲ್ಲ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ವಿಧಾನಸೌಧದ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ

Read more Photos on
click me!

Recommended Stories