ನೀವು ಶುಂಠಿ ಚಹಾ ಪ್ರಿಯರೇ? ಹಾಗಿದ್ರೆ ಕುಡಿಯೋ ಮುನ್ನ ಆರೋಗ್ಯದ ಬಗ್ಗೆ ಇರಲಿ ಗಮನ

First Published | May 20, 2024, 6:06 PM IST

ಚಹಾ ಭಾರತೀಯರ ನೆಚ್ಚಿನ ಡ್ರಿಂಕ್ಸ್ ಅನ್ನೋದು ಸರ್ವಕಾಲಿಕ ಸತ್ಯ. ಬೇಸಿಗೆ ಅಥವಾ ಚಳಿಗಾಲವಾಗಿರಲಿ, ಜನರ ದಿನ ಆರಂಭವಾಗೋದು ಇಲ್ಲಿ ಚಹಾದೊಂದಿಗೆಯೇ. ಬೆಳಿಗ್ಗೆ ಬಿಸಿ ಶುಂಠಿ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿ ಹೊಸ ಚೈತನ್ಯ ಹುಟ್ಟುತ್ತೆ ಎಂದು ಎಷ್ಟೋ ಜನ ಹೇಳ್ತಾರೆ. ಆದರೆ ಬೆಳಿಗ್ಗೆ ಮತ್ತು ಸಂಜೆ ಎಲ್ಲಾ ಸಮಯದಲ್ಲೂ ಶುಂಠಿ ಚಹಾ ಕುಡಿಯುವ ಅಭ್ಯಾಸವು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 
 

ಮುಂಜಾನೆ ಒಂದು ಕಪ್ ಚಹಾ (one cup tea) ಇಡೀ ದಿನವನ್ನು ಉಲ್ಲಾಸವಾಗಿಡೋದಕ್ಕೆ ಸಹಾಯ ಮಾಡುತ್ತದೆ. ಆಯಾಸ, ಒತ್ತಡ ಅಥವಾ ಕಡಿಮೆ ಶಕ್ತಿಯ ಅನುಭವವಾಗಿರಲಿ, ಚಹಾ ಕುಡಿಯುವ ಮೂಲಕ ಎಲ್ಲಾ ಸಮಸ್ಯೆಗಳು ದೂರ ಓಡುತ್ತೆ. ಅದರಲ್ಲೂ ಶುಂಠಿ ಚಹಾ ಕುಡಿದ್ರೆ ಅದರ ಮಜಾನೇ ಬೇರೆ ಅಲ್ವಾ?  ಸ್ವಲ್ಪ ಪ್ರಮಾಣದ ಶುಂಠಿ ಚಹಾದ ರುಚಿ ಮತ್ತು ಪ್ರಯೋಜನಗಳನ್ನು ಹೆಚ್ಚಿಸುತ್ತದೆ, ಆದರೆ ನೀವು ಬೆಳಿಗ್ಗೆ ಮಾತ್ರವಲ್ಲದೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಶುಂಠಿ ಚಹಾವನ್ನು (ginger tea) ಕುಡಿದರೆ, ಅದು ಆರೋಗ್ಯಕ್ಕೆ ಪ್ರಯೋಜನವಾಗುವುದಿಲ್ಲ, ಆದರೆ ಹಾನಿ ಮಾಡುತ್ತದೆ. 

ಶುಂಠಿಯ ಪರಿಣಾಮವು ತುಂಬಾನೆ ಹೀಟ್ ಆಗಿರುತ್ತೆ, ಇದರಿಂದಾಗಿ ಬೇಸಿಗೆಯಲ್ಲಿ ಅನೇಕ ಕಾರಣಗಳಿಂದಾಗಿ ಹೆಚ್ಚು ಬಾರಿ ಶುಂಠಿ ಚಹಾ ಕುಡಿಯೋದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ. ಬೇಸಿಗೆಯಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಆಗುವ ಅನಾನುಕೂಲಗಳನ್ನು ತಿಳಿದುಕೊಳ್ಳೋಣ. 

Tap to resize

ಬೇಸಿಗೆಯಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಆಗುವ ಅನಾನುಕೂಲಗಳು
ಹೊಟ್ಟೆಯ ಕಿರಿಕಿರಿ 

ಶುಂಠಿಯಲ್ಲಿ ಜಿಂಜರಾಲ್ (gingeral) ಎಂಬ ಅಂಶವಿದೆ, ಇದು ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ, ಆದರೆ ಅದರ ಹೆಚ್ಚುವರಿ ಪ್ರಮಾಣವು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಇದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ.

ರಕ್ತದೊತ್ತಡ (Blood pressure)
ರಕ್ತದೊತ್ತಡ ಕಡಿಮೆ ಇರುವವರು ಶುಂಠಿ ಚಹಾ ಕುಡಿಯುವುದನ್ನು ತಪ್ಪಿಸಬೇಕು. ಇದು ದೇಹದಲ್ಲಿ ಶಕ್ತಿಯನ್ನು ಅನುಭವಿಸುವ ಬದಲು ತಲೆತಿರುಗುವಿಕೆ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು, ಆದರೆ ಶುಂಠಿ ಚಹಾವನ್ನು ಅಧಿಕ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ನಿದ್ರಾಹೀನತೆ (sleeplessness) 
ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಶುಂಠಿ ಚಹಾ ಸಹ ಹಾನಿಕಾರಕವಾಗಿದೆ. ಶುಂಠಿ ಚಹಾವನ್ನು ಅತಿಯಾಗಿ ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗಬಹುದು. ನಿದ್ರೆಯ ಕೊರತೆಯು ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಅತಿಸಾರ (Diarrhea)
ಶುಂಠಿ ಚಹಾವನ್ನು ಅತಿಯಾಗಿ ಕುಡಿಯುವುದರಿಂದ ಅತಿಸಾರದ ಸಮಸ್ಯೆಗಳು ಉಂಟಾಗಬಹುದು. ಅತಿಸಾರವು ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆಯು ಪರಿಸ್ಥಿತಿಯನ್ನು ಹೆಚ್ಚು ಗಂಭೀರಗೊಳಿಸುತ್ತದೆ. 

ರಕ್ತಸ್ರಾವದ ಅಪಾಯ (Bleeding)
ರಕ್ತಸ್ರಾವದ ಅಸ್ವಸ್ಥತೆ ಹೊಂದಿರುವ ಜನರು ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು, ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಈಗಾಗಲೇ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರಲ್ಲಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.

Latest Videos

click me!