ಕರಿಯರ್ ಲೈಫ್ ಬಗ್ಗೆ ನೀವು ತಿಳಿದಿರಬೇಕಾದ ಕೆಲವೊಂದು ಕಹಿ ಸತ್ಯಗಳು

First Published Dec 24, 2022, 8:04 PM IST

ಕರಿಯರ್ ಲೈಫ್ ಅಂದ್ರೆ ಸುಮ್ನೆ ಅಲ್ಲ… ಒಂದೇ ಕಚೇರಿಯಲ್ಲಿ ಕುಳಿತು ಹಲವಾರು ಕೆಲಸ ಮಾಡೋದು ಸಹ ಸಾಧನೆಯಲ್ಲ, ನೀವು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅನ್ನೋದಾದ್ರೆ ಕೆಲವೊಂದು ವಿಷ್ಯಗಳ ಕಡೆಗೆ ಗಮನ ಹರಿಸಬೇಕು. ಇಲ್ಲವಾದರೆ ನಿಮ್ಮ ಕರಿಯಲ್ ಲೈಫ್ ಮೇಲೂ ಹೋಗದೆ, ಕೆಳಗೂ ಇಳಿಯದೆ ಸ್ಥಿರವಾಗಿರುತ್ತದೆ. ಇದರಿಂದ ನೀವು ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಾಗೋದಿಲ್ಲ. ಹಾಗಿದ್ರೆ ಕರಿಯರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸತ್ಯಗಳು ಯಾವುವು ಅನ್ನೋದನ್ನು ನೋಡೋಣ.
 

ಉತ್ತಮ ಪ್ಯಾಕೇಜ್ ಕೆಲಸ: ಸಣ್ಣ ಪ್ಯಾಕೇಜ್ ನೊಂದಿಗೆ ಕೆಲಸವನ್ನು ಪಡೆಯಲು ಯಾರು ಬಯಸುವುದಿಲ್ಲ? ಆದಾಗ್ಯೂ, ಸಿಟಿಸಿಗಿಂತ ಹೆಚ್ಚಿನ ಉದ್ಯೋಗಗಳನ್ನು ಪಡೆಯುವುದು ಮೊದಲ ಆದ್ಯತೆಯಾಗಬೇಕು. ಆದುದರಿಂದ ಕೆಲಸ ಇಂಟರ್ವೂ ಸಮಯದಲ್ಲಿ ಈ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ.
 

ಬೇರೆ ಕೆಲಸಕ್ಕೂ ಅಪ್ಲೈ ಮಾಡೋದು: ಮನೆಯಲ್ಲಿ ಕುಳಿತು ಕೆಲಸ ಹುಡುಕುವುದಕ್ಕಿಂತ ಉತ್ತಮ ಆಯ್ಕೆಯೆಂದರೆ ಕೆಲಸವನ್ನು ಮಾಡುವಾಗ ಬೇರೆಡೆ ಅರ್ಜಿ ಸಲ್ಲಿಸುವುದು. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮನೆಯಲ್ಲಿ ಕುಳಿತಿರುವವರಿಗೆ ಕೆಲಸ ಸಿಗುವ ಚಾನ್ಸ್ ಕೂಡ ಕಡಿಮೆ ಇರುತ್ತೆ.
 

ವೈಯಕ್ತಿಕ ಜೀವನವನ್ನು ಮರೆಯಬೇಡಿ: ಕೆಲಸ ತುಂಬಾನೆ ಇಂಪಾರ್ಟಂಟ್ ನಿಜಾ. ಆದರೆ ಕೆಲಸಕ್ಕಾಗಿ ವೈಯಕ್ತಿಕ ಜೀವನವನ್ನು ನೀವು ಸಂಪೂರ್ಣವಾಗಿ ಮರೆತರೆ, ಅಂತಿಮವಾಗಿ ಪಶ್ಚಾತ್ತಾಪ ಪಡುತ್ತೀರಿ. ಹಾಗಾಗಿ ಕರಿಯರ್ ಲೈಫ್ ಮತ್ತು ಫ್ಯಾಮಿಲಿ ಲೈಫ್ ಅಥವಾ ವಯಕ್ತಿಕ ಜೀವನ ಎರಡನ್ನೂ ಸಹ ಜೊತೆಯಾಗಿ ಹ್ಯಾಂಡಲ್ ಮಾಡೋದನ್ನು ಕಲಿಯಿರಿ. 

ಹೆಚ್ಚು ಸಂಪಾದಿಸಲು ಬಯಸಿದರೆ: ನೀವು ಹಣವನ್ನು ಅಥವಾ ಸಂಪಾದನೆಯನ್ನು ತ್ವರಿತವಾಗಿ ಹೆಚ್ಚಿಸಲು ಬಯಸಿದರೆ, ಕರಿಯರ್ ಬದಲಾವಣೆ ಮಾಡೋದು ಅಥವಾ ಕಂಪನಿ ಬದಲಾವಣೆ ಮಾಡೋದು ಮುಖ್ಯ. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹೋಗುವಾಗ ಖಂಡಿತವಾಗಿಯೂ ನಿಮ್ಮ ಪೇಮೆಂಟ್ ಕೂಡ ಹೆಚ್ಚಾಗುತ್ತೆ.
 

ವಯಸ್ಸೂ ಮುಖ್ಯ: ಉದ್ಯೋಗವನ್ನು ಪಡೆಯುವಲ್ಲಿ ನಿಮ್ಮ ವಯಸ್ಸು ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಸರಿಯಾದ ಸಮಯದಲ್ಲಿ ಮತ್ತು ಉತ್ತಮ ಆಯ್ಕೆಗಳಲ್ಲಿ ಕೆಲಸವನ್ನು ಪಡೆಯಲು ಕೆಲಸವನ್ನು, ಕಂಪನಿಯನ್ನು ಬದಲಾಯಿಸುತ್ತಿರುವುದು ಮುಖ್ಯ.

ಹೊರಗೆ ಹೋಗಲು ತಯಾರಾಗಿರಿ: ನೀವು ಕಂಪನಿಗಾಗಿ ಎಷ್ಟೇ ಮಾಡಿದರೂ, ಮ್ಯಾನೇಜ್ಮೆಂಟ್ ಏನಾದರೂ ಕಂಪನಿ ಮುಚ್ಚಲು ನಿರ್ಧರಿಸಿದರೆ, ಅಥವಾ ಹೆಚ್ಚಿನ ಜನರನ್ನು ಕೆಲಸದಿಂದ ತೆಗೆದು ಹಾಕಲು ಯೋಜಿಸಿದ್ದರೆ, 20 ವರ್ಷದ ಉದ್ಯೋಗಿಯನ್ನು ಸಹ ಕೆಲಸದಿಂದ ತೆಗೆದುಹಾಕಬಹುದು. ಆದುದರಿಂದ ಯಾವಾಗಲೂ ಕಂಪನಿಯಿಂದ ಹೊರ ನಡೆಯಲು ತಯಾರಾಗಿರಿ.

ಕಂಪನಿಯ ಕಡೆಗೆ ಪ್ರಾಮಾಣಿಕತೆ: ಕಂಪನಿ ನಿಮಗೆ ಅನ್ನ ನೀಡುತ್ತಿದೆ, ಹಾಗಾಗಿ ನೀವು ಕಂಪನಿಗೆ ಪ್ರಾಮಾಣಿಕವಾಗಿರೋದು ತುಂಬಾನೆ ಮುಖ್ಯ. ಆದರೆ ನಿಮ್ಮ ಏಳಿಗೆಗಾಗಿ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಲು ಮಾತ್ರ ಮರೆಯಬೇಡಿ. ಇಲ್ಲವಾದರೆ ನೀವು ಒಂದೇ ಕಡೆಯಲ್ಲಿ ಇರಬೇಕಾಗುತ್ತೆ.

ಮೊದಲು ನಿಮ್ಮ ಬಗ್ಗೆ ಯೋಚಿಸಿ: ನೀವು ಎಷ್ಟೇ ಒಳ್ಳೆಯ ಸಹೋದ್ಯೋಗಿಗಳನ್ನು ಭೇಟಿ ಮಾಡಿದರೂ, ಏಣಿಯನ್ನು ಏರುವ ಓಟದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿದ್ದಾರೆ ಎಂಬುದನ್ನು ಮರೆಯಬೇಡಿ. ಮೊದಲು ನಿಮ್ಮ ಬಗ್ಗೆ ಯೋಚಿಸಿ, ನಂತರ ಇನ್ನೊಬ್ಬರ ಬಗ್ಗೆ ಯೋಚಿಸಿ. ನೀವು ಮುಂದೆ ಹೆಜ್ಜೆ ಇಡುವ ಯೋಚನೆ ಮಾಡಲೇಬೇಕು.

ಭಾವನೆಗಳ ಮೌಲ್ಯ: ಕೆಲಸ ಮತ್ತು ಭಾವನೆಗಳನ್ನು ಬೆರೆಸಬೇಡಿ, ಇಲ್ಲದಿದ್ದರೆ ಕೆಲಸ ಮಾಡುವುದು ನಿಮಗೆ ಯಾವಾಗಲೂ ಕಷ್ಟವಾಗುತ್ತದೆ. ಕೆಲಸ ಮಾಡುವಾಗ ನೀವು ತುಂಬಾನೆ ಸ್ಟ್ರಾಂಗ್ ಆಗಿರಬೇಕು. ನಿಮ್ಮ ಯಾವುದೇ ಪರ್ಸನಲ್ ವಿಷಯಗಳನ್ನು ಕೆಲಸದ ಜಾಗದಲ್ಲಿ ತರಬಾರದು.

click me!