ರಾಮನಗರದಲ್ಲಿ ಶೀಘ್ರ ರಾಜೀವ್‌ ವಿವಿ ಕ್ಯಾಂಪಸ್‌ಗೆ ಶಂಕು: ಸುಧಾಕರ್‌

First Published Apr 8, 2021, 8:31 AM IST

ಬೆಂಗಳೂರು(ಏ.08): ರಾಮನಗರದಲ್ಲಿ ಮೂರು ತಿಂಗಳಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ವಂತ ಕಟ್ಟಡ ಮತ್ತು ಕ್ಯಾಂಪಸ್‌ಗೆ ಶಂಕು ಸ್ಥಾಪನೆ ಮಾಡಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ವಿಶ್ವ ಆರೋಗ್ಯ ದಿನ ಮತ್ತು ರಾಜೀವ್‌ ಗಾಂಧಿ ವಿವಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ವಾಕಥಾನ್‌, ರಕ್ತದಾನ, ನೇತ್ರದಾನ, ವಿವಿಯ ನವೀಕೃತ ಕೇಂದ್ರ ಕಚೇರಿ, ಪರೀಕ್ಷಾ ಸ್ಕ್ಯಾನಿಂಗ್‌ ಸೆಂಟರ್‌ ಅನ್ನು ಉದ್ಘಾಟಿಸಿದ ಸುಧಾಕರ್‌
undefined
ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅತ್ಯಾಧುನಿಕಗೊಳಿಸುವ ಸಂಕಲ್ಪ ಮಾಡಿದ್ದೇವೆ. ಹಾಗೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ಪ್ರಾದೇಶಿಕ ಕೇಂದ್ರಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿರಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ 9 ಜಿಲ್ಲೆಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯುತ್ತಿದ್ದೇವೆ ಎಂದು ಹೇಳಿದ ಸುಧಾಕರ್
undefined
ಬೆಂಗಳೂರು, ಮೈಸೂರು, ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ.9ಕ್ಕೆ ಏರಿದೆ. ಜನರ ಅಲಕ್ಷ್ಯದಿಂದ ಪಾಸಿಟಿವಿಟಿ ದರ ಏರಿಕೆಯಾಗಿದೆ. ಸರ್ಕಾರ ನಿಯಮಗಳನ್ನು ರೂಪಿಸಿದರೂ ಜನರ ಸಹಭಾಗಿತ್ವವಿಲ್ಲದಿದ್ದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಮೊದಲ ಅಲೆಯನ್ನು ಹತ್ತಿಕ್ಕಿರುವ ನಾವು ಈಗ ಎರಡನೇ ಅಲೆಯ ವಿರುದ್ಧ ಸೆಣೆಸಬೇಕಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರೆಲ್ಲ ಕೋವಿಡ್‌ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.
undefined
ರಾಜೀವ್‌ ಗಾಂಧಿ ವಿವಿಯ ಬೆಳ್ಳಿ ಹಬ್ಬದ ಪ್ರಯುಕ್ತ ಅಂಚೆ ಇಲಾಖೆ ಹೊರ ತಂದಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ ಡಾ. ಸುಧಾಕರ್‌
undefined
ಕರ್ನಾಟಕ ವೃತ್ತದ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌, ಒಂದು ಅಂಚೆ ಚೀಟಿಯ ವಿನ್ಯಾಸವನ್ನು ಮಾಡಲು ಅಂಚೆ ಇಲಾಖೆ 18 ತಿಂಗಳು ತೆಗೆದುಕೊಳ್ಳುತ್ತದೆ. ಪ್ರತಿಷ್ಠಿತ ಬೃಹತ್‌ ಸಂಸ್ಥೆಗಳು ಇಚ್ಛಿಸಿದರೆ ನಾವು ಸ್ಮರಣಾರ್ಥ ಅಂಚೆಚೀಟಿಗಳನ್ನು ವಿನ್ಯಾಸ ಮಾಡುತ್ತೇವೆ. ರಾಜೀವ್‌ ಗಾಂಧಿ ವಿವಿಯ ಬೆಳ್ಳಿ ಹಬ್ಬದ ಅಂಗವಾಗಿ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದ ಸುಧಾಕರ್‌
undefined
ವಿವಿಯ ಪ್ರಾಧ್ಯಾಪಕರಾದ ಡಾ. ರಾಮದೇವ್‌ ಕೆ., ಡಾ. ವಿಜಯ್‌ ಕುಮಾರ್‌ ಎಂ, ಡಾ. ಎ.ಎಸ್‌.ಹೆಗ್ಡೆ, ಡಾ. ಕುಮಾರಸ್ವಾಮಿ ಎಸ್‌.ವಿ., ಡಾ. ಪ್ರಸನ್ನ ನರಸಿಂಹ ರಾವ್‌, ಪ್ರೊ.ಜಿ.ಆರ್‌. ಚನ್ನಳ್ಕರ್‌, ಡಾ. ಮದನ್‌, ಪ್ರೊ.ಕೆ.ಪಾಲ್ಸನ್‌, ಡಾ. ದಿವಾಕರ್‌ ಅವರಿಗೆ ಪ್ರೊಫೆಸರ್‌ ಎಮಿನೇಟ್ಸ್‌ ಸ್ಥಾನಮಾನ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ಉಪಕುಲಪತಿ ಡಾ.ಸಚ್ಚಿದಾನಂದ ವಹಿಸಿದ್ದರು.
undefined
click me!