ಪ್ರತಿ ದಿನ ಶಾಲೆಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ನೂರು ರೂ. ಪ್ರೋತ್ಸಾಹಧನ ಸಿಗಲಿದೆ. ರಾಜ್ಯ ಶಿಕ್ಷಣ ಸಚಿವ ಹಿಮಂತ್ ಬಿಸ್ವಾ ಶರ್ಮಾ ಈ ಘೋಷಣೆ ಮಾಡಿದ್ದಾರೆ.
undefined
ಇದು ಅಲ್ಲದೆ ಪದವಿಪೂರ್ವ ಮಕ್ಕಳ ಹೆಸರಿನಲ್ಲಿ 1500 ರೂ. ಪದವಿ ಮಕ್ಕಳ ಹೆಸರಿನಲ್ಲಿ 2000 ರೂ. ಡಿಪಾಸಿಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಎಲ್ಲರಿಗೂ ಬ್ಯಾಂಕ್ ಖಾತೆ ತೆರದು ನೀಡಲಾಗುವುದು.. ಮಕ್ಕಳ ಕಲಿಕೆಗೆ ಈ ಹಣ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ. ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯೂ ಸಮೀಪಿಸುತ್ತಿದೆ.
undefined
ಕಳೆದ ವರ್ಷವೇ ಇದನ್ನು ಪ್ಲಾನ್ ಮಾಡಿದ್ದೇವು ಆದರೆ ಕೊರೋನಾ ಕಾರಣದಿಂದ ಸಾಧ್ಯವಾಗಲಿಲ್ಲ. ಶಾಲೆ ಮತ್ತು ಕಾಲೇಜಿಗೆ ಹಾಜರಿ ನೀಡುವ ಹೆಣ್ಣು ಮಕ್ಕಳಿಗೆ ಹಣ ದೊರೆಯಲಿದೆ ಎಂದು ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನ ವಿತರಣೆ ಸಮಾರಂಭದಲ್ಲಿ ಘೋಷಿಸಿದರು. 948 ವಿದ್ಯಾರ್ಥಿನಿಯರು ಬೈಕ್ ಪಡೆದುಕೊಂಡರು.
undefined
ಸರ್ಕಾರ 144.30 ಕೋಟಿ ರೂ. ತೆಗೆದಿರಿಸಿದ್ದು ಹನ್ನೆರಡನೇ ತರಗತಿ ಪಾಸಾದ 22,245 ವಿದ್ಯಾರ್ಥಿನಿಯರು ದ್ವಿಚಕ್ರ ವಾಹನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
undefined